ಚಿತ್ರದುರ್ಗ: ನಗರದ ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ಶಾಲೆಯ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ಆಚರಿಸಲಾಯಿತು. ಶಾಲೆಯಲ್ಲಿನ ಗಂಡು ಮಕ್ಳಳು ಹಾಗೂ ಹೆಣ್ಣು ಮಕ್ಕಳನ್ನು ಎದರು ಬದರು ಕೂರಿಸಿ ಹೆಣ್ಣು ಮಕ್ಕಳಿಂದ ಗಂಡು ಮಕ್ಕಳ ಬಲಗೈಗೆರಾಖಿಯನ್ನು ಕಟ್ಟಿಸುವುದರ ಮೂಲಕ ರಾಖಿ ಹಬ್ಬವನ್ನು ಅಚರಣೆ ಮಾಡಲಾಯಿತು.ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬುಲಾಲ್ ಮಾತನಾಡಿ, ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ ಇದೆ. ಶ್ರವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳಮಾಸವೇ ಶ್ರಾವಣ. ನಾಗಚೌತಿ, ನಾಗಪಂಚಮಿ, ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಗೋಕುಲಾಷ್ಟಮಿ, ನೂಲಹುಣ್ಣಿಮೆ,ಹೀಗೆ ಪ್ರತಿದಿನವು ಹಬ್ಬ. ಈ ಎಲ್ಲ ಹಬ್ಬಗಳಲ್ಲಿ ನೂಲಹುಣ್ಣಿಮೆ ಅಥವಾ ರಕ್ಷಾಬಂಧನ ಒಂದು ಪ್ರಮುಖ ಹಬ್ಬವಾಗಿದೆ ರಕ್ಷಾಬಂಧನ ಭಾರತದ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ, ಅನೇಕ ಆಧ್ಯಾತ್ಮಿಕ ರಹಸ್ಯಗಳನ್ನುಬೆಳಗಿಸುವ ಮತ್ತು ಸಾರ್ವತ್ರಿಕ ಸಹೋದರ-ಸಹೋದರಿ ಸಂಬಂಧವನ್ನು ನಮಗೆ ನೆನಪಿಸುವ ಕೊಡುಗೆಯಾಗಿದೆ. ರಕ್ಷಾಬಂಧನಹಬ್ಬವು ಪ್ರಾಚೀನ ಕಾಲದಿಂದ ನಡೆದು ಬಂದ ಹಬ್ಬವಾಗಿದ್ದು ವಿಶ್ವಕ್ಕೆ ಸ್ನೇಹ ಮತ್ತು ಮಮತೆಯ ಸಂದೇಶ ನೀಡುತ್ತದೆ. 4-5ನಿಮಿಷಗಳಲ್ಲಿ ಮುಗಿಯುವ ರಾಖಿ ಕಟ್ಟುವ ಈ ಕಾರ್ಯಕ್ರಮ ಸೋದರ-ಸೋದರಿಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಈ ಮಧುರಸಂಬಂಧ ಉಸಿರು ಇರುವವರೆಗೂ ಇರುತ್ತದೆ. ಕಟ್ಟಿರುವ ದಾರ ಹೋದರೂ ಹೃದಯದಲ್ಲಿ ಇರುವ ಸ್ನೇಹ ದೃಢವಾಗಿರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮುಕೇಶ್ ಕುಮಾರ್, ಸಲಹಾ ಸದಸ್ಯರಾದ ಸುರೇಶ್ ಮುತ್ತಾ, ಕಾರ್ಯದರ್ಶಿ ಸುರೇಶ್ಕುಮಾರ್, ಸಹ ಕಾರ್ಯದರ್ಶಿ ಸುರೇಶ್ ಪಾಟೀಯತ್, ಖಜಾಂಚಿ ರಾಜೇಂದ್ರ ಜೈನ್, ಸದಸ್ಯರಾದ ವಿಪುಲ್, ಆಶೀಕ್ ಕುಮಾರ್,ವಿಕ್ರಂತ್ ಬಾಬುಲಾಲ್, ಜೆವೇರಿಲಾಲ್ ಹಾಗೂ ಮುಖ್ಯ ಶಿಕ್ಷಕಿಯಾದ ನಾಜಿಮ ಸ್ವಾಲೆಹಾ ಸೇರಿದಂತೆ ಶಾಲಾ ಭೋದಕ ಹಾಗೂಬೋದಕೇತರ ಸಿಬ್ಬಂದಿ ಹಾಜರಿದ್ದರು ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



