ಬೆಂಗಳೂರು: ಫುಡ್ ಡೆಲಿವರಿ ನೆಪದಲ್ಲಿ ಬಂದು ವೃದ್ಧೆ ಕೈ-ಕಾಲು ಕಟ್ಟಿಹಾಕಿ ಮನೆಯಲ್ಲಿ 8 ಲಕ್ಷ ರೂ. ಹಣ ದರೋಡೆ ಮಾಡಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.ಆರೋಪಿಗಳು ಫುಡ್ ಡೆಲಿವರಿ ಇದೆ ಅಂತಾ ಬಾಗಿಲ ಬೆಲ್ ಮಾಡಿದ್ದಾರೆ. ಡೋರ್ ಓಪನ್ ಮಾಡುತ್ತಿದ್ದಂತೆ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ತಳ್ಳಿಕೊಂಡು ಒಳಗಡೆ ನುಗ್ಗಿದ್ದಾರೆ. ವೃದ್ಧೆಗೆ ಚಾಕು ತೋರಿಸಿ, ಕೈ-ಕಾಲು ಕಟ್ಟಿ ಹಾಕಿ ಎಂಟು ಲಕ್ಷ ದರೋಡೆ ಮಾಡಿದ್ದಾರೆ.
ಕೆಲಸದಿಂದ ತೆಗೆದಿದ್ದಕ್ಕೆ ಕೃತ್ಯ
ಮನೆ ಡ್ರೈವರ್ ಕೆಲಸದಿಂದ ತೆಗೆದಿದ್ದಕ್ಕೆ ಈ ಕೃತ್ಯ ಎಸಗಿರೋದು ಬೆಳಕಿಗೆ ಬಂದಿದೆ. ವೃದ್ಧೆ ಕನಕಪುಷ್ಪ ಎಂಬವರ ಮಗ ರಾಹುಲ್ ಬಳಿ ಮಡಿವಾಳ ಎಂಬಾತ ನಾಲ್ಕು ತಿಂಗಳಿನಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಆತನ ಸಂಬಳ ಕ್ಲಿಯರ್ ಮಾಡಿ ಡ್ರೈವರ್ ಕೆಲಸದಿಂದ ತೆಗೆದು ಕಳುಹಿಸಿದ್ದರು. ಇದರಿಂದ ಕೋಪಗೊಂಡ ಮಡಿವಾಳ, ವೃದ್ಧೆಯ ಮಗ ಹೊರಗೆ ಹೋಗೋದನ್ನೆ ಕಾದಿದ್ದ.ರಾಹುಲ್ ಹೊರಗೆ ಹೋಗ್ತಿದ್ದಂತೆ ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಬಳಿ ಬಂದಿದ್ದ. ಡೆಲಿವರಿ ಬಾಯ್ ಅಂತಾ ಡೋರ್ ಬೆಲ್ ಮಾಡಿದ್ದಾರೆ. ಮೊದಲಿಗೆ ವೃದ್ಧೆ ಬಾಗಿಲು ತೆರೆಯುವುದಿಲ್ಲ. ನಾವು ಯಾವುದೇ ಆರ್ಡರ್ ಮಾಡಿಲ್ಲ ಅಂತ ಹೇಳುತ್ತಾರೆ. ಈ ವೇಳೆ ನಿಮ್ಮ ಮಗ ರಾಹುಲ್ ಅನ್ನೋರು ಆರ್ಡರ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಮಡಿವಾಳ ಸೇರಿ ನಾಲ್ವರು ಮನೆ ಒಳಗೆ ನುಗ್ಗಿದ್ದಾರೆ. ವೃದ್ಧೆ ಕನಕಪುಷ್ಪ ಕೈ-ಕಾಲು ಕಟ್ಟಿ ಕುತ್ತಿಗೆಗೆ ಚಾಕು ಇರಿದಿದ್ದಾರೆ. ನಂತರ ಎಂಟು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.ಸದ್ಯ ವೃದ್ಧೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







