Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ನಿತ್ಯ ಭವಿಷ್ಯ – 10/04/2026 (ಶುಕ್ರವಾರ)

ಪಿಯು ಫಲಿತಾಂಶ ; ಇತಿಹಾಸ ಸೃಷ್ಟಿಸಿದ ವಿದ್ಯಾರ್ಥಿನಿಯರು

ದ್ವಿತೀಯ ಪಿಯುಸಿ ದಾಖಲೆ ಫಲಿತಾಂಶ; ಶೇ. 86 ವಿದ್ಯಾರ್ಥಿಗಳು ಪಾಸ್ 

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಸಿಬ್ಬಂದಿಗೆ ಬಿಸಿಲ ಶಿಕ್ಷೆ ಪ್ರಕರಣ;  ಕಂಟ್ರೋಲ್ ರೂಂಗೆ ಪಿಎಸ್ಐ ನೇತ್ರಾವತಿ 
ಜಿಲ್ಲಾ ಸುದ್ದಿ

ಸಿಬ್ಬಂದಿಗೆ ಬಿಸಿಲ ಶಿಕ್ಷೆ ಪ್ರಕರಣ;  ಕಂಟ್ರೋಲ್ ರೂಂಗೆ ಪಿಎಸ್ಐ ನೇತ್ರಾವತಿ 

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 9, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಸಿಬ್ಬಂದಿಗೆ ಬಿಸಿಲ ಶಿಕ್ಷೆ ಪ್ರಕರಣ;  ಕಂಟ್ರೋಲ್ ರೂಂಗೆ ಪಿಎಸ್ಐ ನೇತ್ರಾವತಿ

ಚಿತ್ರದುರ್ಗ: ಕರ್ತವ್ಯ ನಿರ್ಲಕ್ಷ್ಯದ ಆರೋಪದ ನೆಪವೊಡ್ಡಿ ತಮ್ಮದೇ ಠಾಣೆಯ ಸಿಬ್ಬಂದಿಯನ್ನು ಮಧ್ಯಾಹ್ನದ ರಣಬಿಸಿಲಿನಲ್ಲಿ ಗಂಟೆಗಳ ಕಾಲ ನಿಲ್ಲಿಸಿ ಶಿಕ್ಷೆ ನೀಡಿದ್ದ ಪ್ರಕರಣದಲ್ಲಿ, ಚಿಕ್ಕಜಾಜೂರು ಪೊಲೀಸ್ ಠಾಣೆಯ ಪಿಎಸ್ಐ ನೇತ್ರಾವತಿ ವಿರುದ್ಧ ಕೊನೆಗೂ ಶಿಸ್ತು ಕ್ರಮ ಜರುಗಿಸಲಾಗಿದೆ. ಅವರನ್ನು ತಕ್ಷಣದಿಂದಲೇ ಚಿತ್ರದುರ್ಗ ಪೊಲೀಸ್ ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಈ ಆದೇಶ ಹೊರಡಿಸಿದ್ದು, ಘಟನೆ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ನೇತ್ರಾವತಿ ಅವರು ಸಿಬ್ಬಂದಿಗಳ ಮೇಲೆ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಕಾರಣ ನೀಡಿ, ಒಬ್ಬ ಎಎಸ್ಐ ಸೇರಿ 12 ಮಂದಿ ಪೊಲೀಸ್ ಸಿಬ್ಬಂದಿಗೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸುಡುವ ಬಿಸಿಲಿನಲ್ಲಿ ಬಂದೂಕು ಹಿಡಿದು ನಿಲ್ಲುವಂತೆ ಶಿಕ್ಷೆ ವಿಧಿಸಿದ್ದರು.

ಈ ಅಮಾನವೀಯ ಕ್ರಮದಿಂದ ಹಲವು ಸಿಬ್ಬಂದಿ ಅಸ್ವಸ್ಥರಾಗಿ, ಕೆಲವರು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮೇಲಾಧಿಕಾರಿಗಳಿಗೆ ದೂರು – ತನಿಖೆಗೆ ಆದೇಶ

ಘಟನೆಯಿಂದ ಮನನೊಂದ ಸಿಬ್ಬಂದಿ, ಪಿಎಸ್ಐ ವರ್ತನೆ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇಲಾಖೆಯ ಶಿಸ್ತಿನ ಹೆಸರಿನಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆದಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.

ಘಟನೆಯ ಗಂಭೀರತೆಯನ್ನು ಗಮನಿಸಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ತಕ್ಷಣವೇ ಡಿವೈಎಸ್ಪಿ ಅರುಣ್ ಗೌಡ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ವರದಿ ಕೇಳಿಸಿದ್ದರು.

ಡಿವೈಎಸ್ಪಿ ನೀಡಿದ ಪ್ರಾಥಮಿಕ ತನಿಖಾ ವರದಿಯಲ್ಲಿ, ಪಿಎಸ್ಐ ನೇತ್ರಾವತಿ ಅವರು ಸಿಬ್ಬಂದಿಗೆ ಕಠಿಣ ಶಿಕ್ಷೆ ನೀಡಿರುವುದು ಹಾಗೂ ದರ್ಪದ ವರ್ತನೆ ತೋರಿರುವುದು ದೃಢಪಟ್ಟಿದೆ.

ಇದನ್ನಾಧರಿಸಿ ಅವರನ್ನು ಚಿಕ್ಕಜಾಜೂರು ಠಾಣೆಯಿಂದ ಚಿತ್ರದುರ್ಗ ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಲಾಗಿದೆ.

ಈ ಕ್ರಮದ ಮೂಲಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮುಖ್ಯವಾದರೂ, ಅಮಾನವೀಯ ಶಿಕ್ಷೆಗೆ ಅವಕಾಶ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಎಸ್ಪಿ ರವಾನಿಸಿದ್ದಾರೆ.

ಸದ್ಯ ಈ ಘಟನೆ ರಾಜ್ಯ ಪೊಲೀಸ್ ಇಲಾಖೆಯಲ್ಲೇ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Police ಚಿತ್ರದುರ್ಗ ಪಿಎಸ್ಐ ನೇತ್ರಾವತಿ ಪೊಲೀಸ್ ಶಿಕ್ಷೆ ಸಿಬ್ಬಂದಿ
Follow on Facebook Follow on Instagram
Share. Facebook Twitter WhatsApp Telegram
Previous Articleಅಧ್ಯಾತ್ಮ ರಶ್ಮಿ – 2   ಶ್ವೇತವಸ್ತ್ರದ ಸಂತ ಬೆಳಗೆರೆಯ  ಕೃಷ್ಣಶಾಸ್ತ್ರಿಗಳು
Next Article ಭವಿಷ್ಯ ನಿರ್ಧಾರಕ್ಕೆ ಕೌಂಟ್ ಡೌನ್; ಶುರುವಾಯ್ತು ಢವಢವ…
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ನಿತ್ಯ ಭವಿಷ್ಯ – 10/04/2026 (ಶುಕ್ರವಾರ)

April 9, 2026

ಅಧ್ಯಾತ್ಮ ರಶ್ಮಿ – 2   ಶ್ವೇತವಸ್ತ್ರದ ಸಂತ ಬೆಳಗೆರೆಯ  ಕೃಷ್ಣಶಾಸ್ತ್ರಿಗಳು

April 9, 2026

ನಿತ್ಯ ಭವಿಷ್ಯ – 09/04/2026 (ಗುರುವಾರ)

April 9, 2026
Add A Comment
Leave A Reply Cancel Reply

Advertisement
Latest Posts

ನಿತ್ಯ ಭವಿಷ್ಯ – 10/04/2026 (ಶುಕ್ರವಾರ)

ಪಿಯು ಫಲಿತಾಂಶ ; ಇತಿಹಾಸ ಸೃಷ್ಟಿಸಿದ ವಿದ್ಯಾರ್ಥಿನಿಯರು

ದ್ವಿತೀಯ ಪಿಯುಸಿ ದಾಖಲೆ ಫಲಿತಾಂಶ; ಶೇ. 86 ವಿದ್ಯಾರ್ಥಿಗಳು ಪಾಸ್ 

ಆಭರಣ ಪ್ರಿಯರಿಗೆ ಸಿಹಿಸುದ್ದಿ!! ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ 

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.