ಚಿತ್ರದುರ್ಗ : ಜಾತ್ಯಾತೀತ, ಪ್ರಜಾಪ್ರಭುತ್ವದ ಸಿದ್ದಾಂತದ ಮೇಲೆ ನಂಬಿಕೆಯಿಟ್ಟಿರುವ ಸಮಾಜವಾದಿ ಪಾರ್ಟಿಗೆ ಜನಪರ
ಕಾಳಜಿಯಿದೆ ಎಂದು ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಹೇಳಿದರು.ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‍ಯಾದವ್‍ರವರ 52 ನೇ ಹುಟ್ಟುಹಬ್ಬ
ಆಚರಿಸಿ ಮಾತನಾಡಿದರು.ಮಾನವೀಯ ಮೌಲ್ಯವಿಟ್ಟುಕೊಂಡಿರುವ ಅಖಿಲೇಶ್‍ಯಾದವ್‍ರವರಲ್ಲಿ ಅಧಿಕಾರದ ದಾಹವಿಲ್ಲ. ರಾಂ ಮನೋಹರ್‍ಲೋಹಿಯಾಸಿದ್ದಾಂತದ ಮೇಲೆ ಪಾರ್ಟಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವರುಬಡವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಗುಣಗಾನ ಮಾಡಿದರು.
1992, ಅ.4 ರಂದು ಸ್ಥಾಪನೆಯಾದ ಸಮಾಜವಾದಿ ಪಾರ್ಟಿಗೆ ತನ್ನದೆ ಆದ ಶಕ್ತಿಯಿದೆ. ಸಾಮಾಜಿಕ ನ್ಯಾಯದ
ಹರಿಕಾರರೆನಿಸಿಕೊಂಡಿರುವ ಅಖಿಲೇಶ್ ಯಾದವ್‍ರವರು ಕೋಮುವಾದಿ ಶಕ್ತಿಗಳ ವಿರುದ್ದ ಸದಾ ಹೋರಾಟ
ನಡೆಸುತ್ತಿರುತ್ತಾರೆಂದರು.ಲೇಖಕ ಹೆಚ್.ಆನಂದಕುಮಾರ್ ಮಾತನಾಡಿ ಪರಂಪರೆಯಿಂದ ರಾಜಕಾರಣಿಯಾಗಿರುವ ಅಖಿಲೇಶ್‍ಯಾದವ್ ಉತ್ತರ ಪ್ರದೇಶದಮುಖ್ಯಮಂತ್ರಿಯಾಗಿದ್ದಾಗ ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸಿದರು. ನಿಮ್ನ, ಮಧ್ಯಮ, ಮೇಲ್ಜಾತಿಯ ರಾಜಕಾರಣವಿರುವಉತ್ತರ ಪ್ರದೇಶದಲ್ಲಿ ಐದು ವರ್ಷಗಳ ಕಾಲ ಸಿ.ಎಂ.ಆಗಿ ಅತ್ಯುತ್ತಮ ಆಡಳಿತ ನೀಡಿದ್ದರು. ಸಂಸತ್ ಚುನಾವಣೆಯಲ್ಲಿ ಬಿಜೆಪಿ.ಗೆದೊಡ್ಡ ಹೊಡೆತ ಕೊಟ್ಟ ಅಖಿಲೇಶ್ ಯಾದವ್ ಅಂಬೇಡ್ಕರ್ ಸಿದ್ದಾಂತಗಳಿಗೆ ತುಂಬಾ ಹತ್ತಿರವಿದ್ದಾರೆ.
ಕರ್ನಾಟಕದಲ್ಲಿಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆನ್ನುವುದು ವಿಶೇಷ ಎಂದು ಸ್ಮರಿಸಿದರು.
ಸಮಾಜವಾದಿ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಮಾತನಾಡುತ್ತ ರಾಂ ಮನೋಹರ್ ಲೋಹಿಯಾರವರ
ಸಿದ್ದಾಂತವಿಟ್ಟುಕೊಂಡಿರುವ ಅಖಿಲೇಶ್ ಯಾದವ್‍ರವರಲ್ಲಿ ಸಮಾನತೆ, ಜಾತ್ಯಾತೀತತೆ ಇಲ್ಲದಿದ್ದರೆ ದೇಶವನ್ನು
ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಸಮಾಜವಾದವನ್ನು ಸಂವಿಧಾನದಿಂದ ಕಿತ್ತೊಗೆಯಲು ಹೊರಟಿರುವ ಬಿಜೆಪಿ.ಗೆಮನ್ನಣೆಕೊಡಬೇಡಿ ಎಂದು ಹೇಳಿದರು.ಬಂಜಾರ ಸಮಾಜದ ಮುಖಂಡ ಗಿರೀಶ್‍ನಾಯ್ಕ ಮಾತನಾಡಿ ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವವುಳ್ಳ ದೇಶ.ಸಮತಾವಾದ, ಸಮಾಜವಾದ ಒಂದೆ ನಾಣ್ಯದ ಎರಡು ಮುಖಗಳು.ಅಖಿಲೇಶ್‍ಯಾದವ್ ಕರ್ನಾಟಕ ರಾಜ್ಯದೊಂದಿಗೆಅನ್ಯೋನ್ಯತೆಯಿಟ್ಟುಕೊಂಡಿದ್ದಾರೆಂದು ನುಡಿದರು.ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಯುವ ಮುಖಂಡ ರವಿ ಮಾತನಾಡಿದರು.
ಕುಂಚಿಗನಹಾಳ್ ಮಹಲಿಂಗಪ್ಪ, ರಾಜಣ್ಣ, ಮಹಾಂತೇಶ್ ಇನ್ನು ಅನೇಕು ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



