ಚಳ್ಳಕೆರೆ: ಮಗಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋದಾಗ ಶಾಲೆ ಗೇಟ್ ಬಳಿ ಸಿಕ್ಕ 50 ಸಾವಿರ ಹಣವನ್ನು ಚಳ್ಳಕೆರೆ ಇನ್ಸ್ಪೆಕ್ಟರ್ ಗಳಾದ ಈರೇಶ್ ಹಾಗೂ ಧರಪ್ಪಾ ಬಾಳಪ್ಪ ದೊಡ್ಮನಿ ಅವರಿಗೆ ಒಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.ಚಳ್ಳಕೆರೆ ನಗರದ ಎಸ್ ಆರ್ ಎಸ್ ಶಾಲಾ ಬಳಿ ನಗರಂಗೆರೆ ಗ್ರಾಮದ ಕಾಂಗ್ರೆಸ್ ಮುಖಂಡ ರಂಗನಾಥ್ ತಮ್ಮ ಮಗಳನ್ನು ಶಾಲೆಯಿಂದ ಕೆರೆದುಕೊಂಡು ಬರಲು ಹೋದಾಗ ಶಾಲಾ ಗೇಟ್ ಬಳಿ ಬ್ಯಾಗ್ ಬಿದ್ದಿರುವುದು ಕಂಡು ತೆರೆದು ನೋಡಿದಾಗ ಅದರಲ್ಲಿ 50 ಸಾವಿರ ಹಣ ಹಾಗೂ ಕೆಲ ದಾಖಲೆ ಇರುವುದು ಗೊತ್ತಾಗಿದೆ. ಕೂಡಲೇ ರಂಗನಾಥ್ ಬ್ಯಾಗ್ ಸಮೇತ ಚಳ್ಳಕೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಪತ್ತೆಯಾದ ಬ್ಯಾಗ್ನಗರದ ಗೋವರ್ಧನ ಎಂಬ ವ್ಯಕ್ತಿಗೆ ಸೇರಿದ್ದು, ಗೋವರ್ಧನ್ ತನ್ನ ಮಗಳನ್ನು ಶಾಲೆಯಿಂದ ಕರೆದುಕೊಂಡು ಹೋಗಲು ಬಂದಾಗ ಆಕಸ್ಮಿಕವಾಗಿ ಹಣವಿರುವ ಬ್ಯಾಗ್ ಬೀಳಿಸಿಕೊಂಡು ಹೋಗಿದ್ದಾನೆ. ಈಗ ಪೊಲೀಸರು ಗೋವರ್ಧನ ಅವರಿಗೆ ತಮ್ಮ ಬ್ಯಾಗ್ ಹಿಂತಿರುಗಿಸಿದ್ದು, ರಂಗನಾಥ್ ಅವರ ಮಾನವೀಯತೆ ಬಗ್ಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



