ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದೂರದರ್ಶನದ 124ನೇ ಸಂಚಿಕೆಯ ಮನಕೀ ಬಾತ್ ಕಾರ್ಯಕ್ರಮದಲ್ಲಿಚಿತ್ರದುರ್ಗದ ಕೋಟೆಯ ಬಗ್ಗೆ ಪ್ರಸ್ತಾಪ ಮಾಡಿ ಕೋಟೆಯ ವೈಶಾಲತೆ, ನಿರ್ಮಾಣ ಕೌಶಲ್ಯದ ಕುರಿತು ಮೆಚ್ಚುಗೆಯ ಮಾತುಗಳನ್ನುಆಡಿರುವುದಕ್ಕೆ ಜೆ.ಡಿ.ಎಸ್.ನ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್ ಸ್ವಾಗತ ಮಾಡಿದ್ದಾರೆ.ಚಿತ್ರದುರ್ಗದ ಕೋಟೆ ಐತಿಹಾಸಿಕವಾಗಿದ್ದು ರಾಜ-ಮಹಾರಾಜರು ಅಳ್ವಿಕೆಯನ್ನು ನಡೆಸಿದ್ದಾರೆ, ಪುರಾತನವಾದ ಕೋಟೆ ತನ್ನದೆ ಆದಇತಿಹಾಸವನ್ನು ಹೊಂದಿದೆ, ಈ ರೀತಿಯಾದ ಕೋಟೆ ರಾಜ್ಯದಲ್ಲಿ ಬೇರೆ ಕಡೆಯಲ್ಲಿ ಕಾಣುವುದು ಕಷ್ಟವಾಗಿದೆ. ಅಂದಿನ ಕಾಲದಲ್ಲಿಯೇಚಿತ್ರದುರ್ಗದ ಕೋಟೆಯನ್ನು ಅದ್ಬುತವಾದ ಕೋಟೆಯನ್ನು ಹೇಗೇ ನಿರ್ಮಿಸಿರಬಹುದೆಂದು ಮೋದಿಯವರು ಕೋಟೆಯ ಬಗ್ಗೆ ಶ್ಲಾಘನೆ ಮಾಡಿದ್ದಾರೆ. ಈ ಕೋಟೆ ಕೇವಲ ಕೇವಲ ಇಟ್ಟಿಗೆ ಕಲ್ಲುಗಳಲ್ಲ ನಮ್ಮ ಸಂಸ್ಕೃತಿಯ ಪ್ರತೀಕ ಸಂಸ್ಕಾರ ಸ್ವಾಭೀಮಾನ ಇಂದು ಈಕೋಟೆಗಳ ಎತ್ತರದ ಗೋಡೆಗಳಿಂದ ಇಣುಕುತ್ತಿದೆ ಎಂದಿದ್ದಾರೆ ಎಂದು ತಿಳಿಸಿದರು.ಮನಕೀ ಭಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಮೋದಿಯವರು ಮಧ್ಯ ಕರ್ನಾಟಕದ ಐತಿಹಾಸಿಕ ಚಿತ್ರದುರ್ಗದ ಏಳು ಸುತ್ತಿನಕೋಟೆ ಬಗ್ಗೆ ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು.
ಚಿತ್ರದುರ್ಗದ ಐತಿಹಾಸಿಕ ಕೋಟೆಯ ವಿಶಾಲ ರಚನೆ ಅಚ್ಚರಿ ಮೂಡಿಸುತ್ತದೆ.
ಆಗಿನಕಾಲದಲ್ಲಿ ಇಂತಹ ಬೃಹತ್, ಅಭೇದ್ಯ ಕೋಟೆಯನ್ನು ಹೇಗೆ ನಿರ್ಮಿಸಿರಬಹುದು ಎಂಬ ಕುತೂಹಲವನ್ನು ಕೋಟೆಯ ರಚನೆಹುಟ್ಟುಹಾಕುತ್ತದೆ. ಇಂದಿಗೂ ಈ ಕೋಟೆಗಳ ಎತ್ತರದ ಗೋಡೆಗಳಿಂದ ದೇಶದ ಸಂಸ್ಕಾರ ಮತ್ತು ಸ್ವಾಭಿಮಾನ ಇಣುಕುತ್ತದೆ. ಈಕೋಟೆಗಳಿಗೆ ಭೇಟಿ ನೀಡಿ, ನಿಮ್ಮ ಇತಿಹಾಸವನ್ನು ತಿಳಿದುಕೊಳ್ಳುವಂತೆ ನಾನು ದೇಶವಾಸಿಗಳಲ್ಲಿ ವಿನಂತಿಸುತ್ತೇನೆ ಎಂದಿರುವುದುಸ್ವಾಗರ್ತಾಹವಾಗಿದೆ ಎಂದಿದ್ದಾರೆ.ಚಿತ್ರದುರ್ಗದ ಕೋಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಇದರ ಬಗ್ಗೆ ಪ್ರಧಾನ ಮಂತ್ರಿಯವರು ಗಮನ ನೀಡಬೇಕಿದೆ.ಇಲ್ಲಿಗೆ ಬಂದು ಹೋಗುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಅವರಿಗೆ ಅಗತ್ಯವಾದ ಸೌಕರ್ಯವನ್ನು ನೀಡಬೇಕಿದೆಇದ್ದಲ್ಲದೆ ಚಿತ್ರದುರ್ಗದ ಕೋಟೆಯನ್ನು ವಿಶ್ವ ಪಾರಂಪರಿಕ ಪ್ರವಾಸಿ ತಾಣಕ್ಕೆ ಸೇರಿಸಬೇಕಿದೆ ಎಂದು ಪ್ರಧಾನಮಂತ್ರಿಗಳಲ್ಲಿಗೋಪಾಲಸ್ವಾಮಿ ನಾಯಕ್ ಮನವಿ ಮಾಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



