ಹೊಳಲ್ಕೆರೆ : ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಬದ್ದತೆ ಮತ್ತು ಕಠಿಣ ಪರಿಶ್ರಮವಿರಬೇಕೆಂದು ಚಿತ್ರದುರ್ಗದದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.
ಪಟ್ಟಣದ ಸಂವಿಧಾನ ಸೌಧದಲ್ಲಿ ಕುವೆಂಪು ಟ್ರಸ್ಟ್ ಶಿವಗಂಗ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನೋಟ್‍ಬುಕ್, ಇತರೆಸಲಕರಣೆಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ. ಟೈಲರಿಂಗ್ ತರಬೇತಿ ಪಡೆದವರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾಸಮಾರಂಭ ಉದ್ಗಾಟಿಸಿ ಮಾತನಾಡಿದರು.ಕಳೆದ 24 ವರ್ಷಗಳಿಂದಲೂ ಕುವೆಂಪು ಟ್ರಸ್ಟ್ ಮಕ್ಕಳ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಕಮ್ಮಿ ಸಾಧನೆಯಲ್ಲ.ಜೀವನದಲ್ಲಿ ಜಯ-ಅಪಜಯ, ಟೀಕೆಗಳನ್ನು ಸಮಾನವಾಗಿ ಯಾರು ಸ್ವೀಕರಿಸುತ್ತಾರೋ ಅಂತಹವರಿಂದ ಮಾತ್ರ ಇಂತಹ ಸಮಾಜಸೇವೆ ಮಾಡಲು ಸಾಧ್ಯ. ನನ್ನದೊಂದು ಫೌಂಡೇಷನ್ ಇದೆ. ಅದರಲ್ಲಿ ಬರುವ ಆದಾಯದಲ್ಲಿ ಪ್ರತಿ ವರ್ಷವೂ ಶೇ.40 ರಷ್ಟು ಹಣವನ್ನುಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ನೀಡುತ್ತಿದ್ದೇನೆ. ರಘುಚಂದನ್ ಫೌಂಡೇಶನ್‍ನಿಂದ ರಾಜ್ಯದಲ್ಲಿ 25 ಬಡ ಮಕ್ಕಳು ಅತಿ ಹೆಚ್ಚಿನಅಂಕಗಳನ್ನು ಗಳಿಸಿರುವವರುಯಾವ ಕಾಲೇಜಿನಲ್ಲಿ ಓದುತ್ತಾರೋ ಅಲ್ಲಿ ಓದಿಸುತ್ತೇವೆ. ಗ್ರಾಮೀಣ ಪ್ರದೇಶದ ಆರು, ಏಳು, ಎಂಟನೆ
ಕ್ಲಾಸ್‍ನಲ್ಲಿ ಶೇ.80 ಕ್ಕಿಂತ ಅಧಿಕ ಅಂಕಗಳನ್ನು ಪಡೆದಿರುವ ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲಾಗುವುದು.
ಚಳ್ಳಕೆರೆ,ಹೊಸದುರ್ಗ, ಹಿರಿಯೂರು, ಚಿತ್ರದುರ್ಗದ ಮಕ್ಕಳು ಹೆಚ್ಚಿನ ಪ್ರಯೋಜನ ಪಡೆದುಕೊಂಡಿದ್ದಾರೆ. ಮುಂದಿನ ವರ್ಷ ಕುವೆಂಪು ಟ್ರಸ್ಟ್ ಗೆರಘುಚಂದನ್ ಫೌಂಡೇಶನ್‍ನಿಂದ ಐವತ್ತು ಸಾವಿರ ರೂ.ಗಳನ್ನು ನೀಡುತ್ತೇನೆ.
ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಲಿ ಎಂದು ತಿಳಿಸಿದರು.ಶಿವಗಂಗ ಕುವೆಂಪು ಟ್ರಸ್ಟ್ ಅಧ್ಯಕ್ಷ ಡಿ.ವಿ.ಪ್ರಕಾಶ್, ಹೊಳಲ್ಕೆರೆ ಬಿಜೆಪಿ. ಮಂಡಲ ಅಧ್ಯಕ್ಷ ವಸಂತಕುಮಾರ್, ಪುರಸಭೆ ಅಧ್ಯಕ್ಷವಿಜಯಸಿಂಹ ಕಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಎ.ಜಯಪ್ಪ, ಡಾ. ಮಂಜುಳಗೌಡ, ಪ್ರಸನ್ನಕುಮಾರಿ, ರಶ್ಮಿ, ಸತೀಶ್, ಬಸವರಾಜ್, ಚಂದ್ರಪ್ಪ, ಮಂಜುಳ, ಶಿವಮೂರ್ತಿ
ಶಿವಲಿಂಗಪ್ಪ, ವೀರಕೆಂಚಪ್ಪ ಹಾಗೂ ಕುವೆಂಪು ಟ್ರಸ್ಟ್ ನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ
ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



