ಹೈದರಾಬಾದ್: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು 50ನೇ ಹುಟ್ಟಹಬ್ಬದ ಸಂಭ್ರಮದಲ್ಲಿದ್ದು, ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಟಾಲಿವುಡ್ ಪ್ರಿನ್ಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ತಮ್ಮ ಮುಂಬರುವ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.ರಾಜಮೌಳಿ ಅವರು ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ತಾತ್ಕಾಲಿಕವಾಗಿ SSMB29 ಎಂದು ಹೆಸರಿಸಲಾದ ತಮ್ಮ ಮುಂದಿನ ಚಿತ್ರದ ಕುತೂಹಲಕಾರಿ ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ “ನವೆಂಬರ್ 2025ರಲ್ಲಿ ಫಸ್ಟ್ ರಿವೀಲ್. #GlobeTrotter” ಎಂದು ಬರೆಯಲಾಗಿದೆ.ಮುಖವನ್ನು ರಿವೀಲ್ ಮಾಡದೇ ಒಂದು ಪೋಸ್ಟರ್ ರಿವೀಲ್ ಮಾಡಲಾಗಿದೆ. ಈ ಪೋಸ್ಟರ್ನಲ್ಲಿ ಈ ಚಿತ್ರದ ಬಗ್ಗೆ ನವೆಂಬರ್ನಲ್ಲಿ ಮಾಹಿತಿ ನೀಡೋದಾಗಿ ರಾಜಮೌಳಿ ಹೇಳಿದ್ದಾರೆ. ಅಲ್ಲದೆ ಗ್ಲೋಬ್‌ಟ್ರಾಟರ್ ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದು, ಇದು ಚಿತ್ರದ ಅಧಿಕೃತ ಟೈಟಲ್ ಇರಬಹುದು ಎನ್ನಲಾಗಿದೆ.
ಪೋಸ್ಟರ್ ನಲ್ಲಿ ಮಹೇಶ್ ಬಾಬು ಅವರ ರಕ್ತಸಿಕ್ತ ದೇಹದ ಕ್ಲೋಸ್ ಅಪ್ ಲುಕ್, ಕಪ್ಪು ಮಣಿಗಳ ಸರ, ಅದರಲ್ಲಿ ತ್ರಿಶೂಲ ಮತ್ತು ನಂದಿಯನ್ನು ಒಳಗೊಂಡಿರುವ ಬೆಳ್ಳಿಯ ಪೆಂಡೆಂಟ್ ನೋಡುಗರ ಗಮನ ಸೆಳೆದಿದೆ.ಚಿತ್ರದ ಕಥಾವಸ್ತು ಮತ್ತು ತಾರಾಗಣದ ಬಗ್ಗೆ ಚಿತ್ರ ತಯಾರಕರು ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿಲ್ಲ.ಈ ಹಿಂದೆ, ಪ್ರಿಯಾಂಕಾ ಚೋಪ್ರಾ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವರದಿಗಳಿದ್ದವು. ಆದರೆ ಅದನ್ನು ಚಿತ್ರ ತಯಾರಕರು ದೃಢಪಡಿಸಿಲ್ಲ.
SSMB29 ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಮಹೇಶ್ ಬಾಬು ಮತ್ತು ಎಸ್.ಎಸ್. ರಾಜಮೌಳಿ ಕಾಂಬಿನೇಶನ್ನ ಮೊದಲ ಸಿನಿಮಾ ಇದಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



