ಚಿತ್ರದುರ್ಗ: ದೇಶಕ್ಕೆ ರಾಜೀವಗಾಂಧಿಯವರು ಪ್ರಧಾನ ಮಂತ್ರಿಯಾಗಿ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆ. ಅವುಗಳನ್ನು ಇಂದು ನಾವುಗಳು ಸ್ಮರಣೆಯನ್ನು ಮಾಡಬೇಕಿದೆ ಎಂದು ರಾಜೀವಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ಉಪಾಧ್ಯಕ್ಷರಾದ ಶ್ರೀನಿವಾಸ್ತಿಳಿಸಿದ್ದಾರೆ.ನಮ್ಮನ್ನು ಆಗಲಿದ ನಾಯಕ ದೇಶದ ಮಾಜಿ ಪ್ರಧಾನ ಮಂತ್ರಿ ದಿ.ರಾಜೀವಗಾಂಧಿಯವರ 34ನೇ ವರ್ಷದ ಸದ್ಬಾವನಾ ಜ್ಯೋತಿಯಾತ್ರೆ ಆ. 9 ರಂದು ಪೆರುಂಬುದೂರಿನಿಂದ ಪ್ರಾರಂಭವಾಗಿ ಆ. 19 ರಂದು ನವದೆಹಲಿಯನ್ನು ತಲುಪಲಿದೆ ದಾರಿಯ ಮಧ್ಯದಲ್ಲಿಸೋಮವಾರ ಚಿತ್ರದುರ್ಗಕ್ಕೆ ಬೇಟಿ ನೀಡಿದಾಗ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ವತಿಯಿಂದ ಅದ್ದೂರಿಯಾದ ಸ್ವಾಗತವನ್ನುಮಾಡಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜೀವಗಾಂಧಿಯವರವರು ದೇಶದ ಪ್ರಧಾನ ಮಂತ್ರಿಯಾಗಿದ್ದಾಗಭಾರತ ದೇಶ ಬೇರೆ ದೇಶಗಳಂತೆ ಪ್ರಗತಿಯನ್ನು ಕಾಣಬೇಕು, ಯುವ ಜನತೆ ಸದಾ ಚಟುವಟಕೆಯಿಂದ ಇರಬೇಕಿದೆ ಇದಕ್ಕಾಗಿ 21ವರ್ಷಕ್ಕೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸುವುದರ ಮೂಲಕ ದೇಶದ ಯುವ ಜನತೆ ಸಹಾ ದೇಶದ ಮತದಾನದಲ್ಲಿ ಭಾಗವಹಿಸುವಂತೆ ಮಾಡಿದರು ಎಂದರು.
ರಾಜೀವಗಾಂಧಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಕಾರ್ಯವನ್ನು ಜಾರಿ ಮಾಡಿದ್ದಾರೆ, ಪಂಚಾಯತ್ ರಾಜ್ಜಾರಿ ಮಾಡಿದರು, ನಮ್ಮ ದೇಶ ಬೇರೆ ದೇಶಗಳಂತೆ ತಂತ್ರಜ್ಞಾನದಲ್ಲಿ ಮುಂದುವರೆಯಬೇಕೆಂದು ತಂತ್ರಜ್ಞಾನವನ್ನು ನಮ್ಮ ದೇಶದಲ್ಲಿ ಅಳವಡಿಕೆ ಮಾಡಿದರು. ರಾಜೀವಗಾಂಧಿಯವರ ಆಕಾಲಿಕ ಮರಣಕ್ಕೆ ತುತ್ತಾಗದಿದ್ದರೆ ನಮ್ಮ ದೇಶ ಮತ್ತಷ್ಟು ಪ್ರಗತಿಯನ್ನು ಕಾಣುತ್ತಿತ್ತು ಎಂದರು.ರಾಜೀವಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ಅಧ್ಯಕ್ಷರಾದ ದೊರೈ ಮಾತನಾಡಿ, ಕಳೆದ 34 ವರ್ಷಗಳಿಂದ ನಿರಂತರವಾಗಿ ದೇಶದಮಾಜಿ ಪ್ರಧಾನ ಮಂತ್ರಿ ದಿ.ರಾಜೀವಗಾಂಧಿಯವರ 34ನೇ ವರ್ಷದ ಸದ್ಬಾವನಾ ಜ್ಯೋತಿ ಯಾತ್ರೆ ನಡೆಸಿಕೊಂಡು ಬರಲಾಗುತ್ತಿದೆ,ಅ. 9 ರಂದು ಪೆರುಂಬುದೂರಿನಿಂದ ಪ್ರಾರಂಭವಾದ ಈ ಯಾತ್ರೆ ಆ. 19 ರಂದು ನವದೆಹಲಿಯನ್ನು ತಲುಪಲಿದೆ ದಾರಿಯಲ್ಲಿ ಬರುವಕರ್ನಾಟಕ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಮಧ್ಯಪ್ರದೇಶ್ ಉತ್ತರ ಪ್ರದೇಶ್ ಹರಿಯಾಣ, ಸೇರಿದಂತೆ ನವದೆಹಲಿಯನ್ನುತಲುಪಲಿದೆ. ಇದರಲ್ಲಿ ಕರ್ನಾಟಕದಿಂದ 150 ಕಾಂಗ್ರೆಸ್ ಕಾರ್ಯಕರ್ತರ ತಂಡವು ನವದೆಹಲಿಯ ವೀರ ಭೂಮಿಯನ್ನು ತಲುಪಲಿದೆ.
ಆ. 9 ರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯ ದಿನದಂದು ಭಯೋತ್ಪಾದನೆ ತ್ಯೆಜಿಸಿ ಎಂಬ ಘೋಷಣೆಯೊಂದಿಗೆ ಜ್ಯೋತಿಪ್ರಾರಂಭವಾಗಿದೆ ಎಂದರು.
ಆ.19 ರಂದು ಜ್ಯೋತಿಯನ್ನು ಕಾಂಗ್ರೆಸ್ ಮುಖಂಡರು ನವದೆಹಲಿಯಲ್ಲಿ ಸ್ವೀಕಾರ ಮಾಡಲಿದ್ದಾರೆ ಅಂದು ನಡೆಯುವ
ಕಾರ್ಯಕ್ರಮದಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜನ ಖರ್ಗೆ, ಪ್ರಿಯಾಂಕಗಾಂಧಿ ವಾದ್ರಾ, ಹರಿಪ್ರಸಾದ್,
ವೇಣುಗೋಪಾಲ್, ಪ್ರಿಯಾ ಕೃಷ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.ರಾಜೀವಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ಉಪಾಧ್ಯಕ್ಷರಾದ ಜಾಕಿರ್ ಹುಸೇನ್ ಮಾತನಾಡಿ, ರಾಜೀವ್ ಜ್ಯೋತಿ ಯಾತ್ರಾಸಮಿತಿಯು ಭಯೋತ್ಪಾದನೆ ವಿರೋಧಿ ಸಂದೇಶವನ್ನು ಮತ್ತು ರಾಷ್ಟ್ರವನ್ನು ನಿರ್ಮಿಸಲು ಮತ್ತು ದೇಶದ ಏಕತೆಯನ್ನು ಬಲಪಡಿಸಲು
ರಾಜೀವ್ ಗಾಂಧಿಯವರ ಕೊಡುಗೆಯನ್ನು ಹರಡುತ್ತದೆ. ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯು ಸಹೋದರತ್ವ, ಏಕತೆ ಮತ್ತುಭಯೋತ್ಪಾದನೆಯ ವಿರುದ್ಧ ದೃಢವಾದ ಕ್ರಮದ ಸಂದೇಶವನ್ನು ಹರಡುತ್ತದೆ. ಜನರಲ್ಲಿ ಜಾಗೃತಿಮೂಡಿಸುತ್ತೇವೆ.ನಮ್ಮ ದೇಶದಲ್ಲಿಭಯೋತ್ಪಾದನೆಯ ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ ನಮಗೆಶಾಂತಿ ಬೇಕು, ನಾವು ವಿಶ್ವ ಶಾಂತಿಗಾಗಿಪ್ರಾರ್ಥಿಸುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷ ತಾಜ್ಪೀರ್ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ಕುಮಾರ್, ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಕುಶಲಕರ್ಮಿ ರಾಜ್ಯಧ್ಯಕ್ಷ ಪ್ರಸನ್ನ ಕುಮಾರ್, ಖಾಸಿಂಆಲಿ, ಅಂಜನಪ್ಪ,ಮಹಡಿ ಶಿವಮೂರ್ತಿ, ಖುದ್ದುಸ್, ಮುದಸಿರ್, ಸುರೇಶ್ ಕಂದಿಕೆರೆ, ನೇತಾ, ಮಧುಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್ಪೀರ್ ಜ್ಯೋತಿಗೆ ಖಾದಿ ಮಾಲೆಯನ್ನು ಹಾಕುವುದರ ಮೂಲಕ ರಾಜೀವಗಾಂಧಿ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







