ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಸಾಹಸಮಯ ಆಕ್ಷನ್ ಥ್ರಿಲ್ಲರ್ ಆಗಿದ್ದು ವಿಶ್ವದ ನಾನಾ ಪ್ರದೇಶದಲ್ಲಿ ಚಿತ್ರೀಕರಣ ಆಗಲಿದೆ. ಈಗಾಗಲೇ ರಾಜಮೌಳಿ ಹಾಗೂ ತಂಡ ಕೀನ್ಯಾ ದೇಶದಲ್ಲಿ ಸಿನಿಮಾದ ಹಲವು ಭಾಗಗಳ ಚಿತ್ರೀಕರಣ ಮಾಡಿದೆ. ಕೀನ್ಯಾದ ಶೂಟಿಂಗ್ ಶೆಡ್ಯೂಲ್ ಅಂತ್ಯವಾಗಲಿದ್ದು ಈ ಸಂದರ್ಭದಲ್ಲಿ ಕೀನ್ಯಾದ ವಿದೇಶ ವ್ಯವಹಾರ ಖಾತೆಯ ಕಾರ್ಯದರ್ಶಿ ಮುಸಾಲಿಯಾ ಮುದಾವಾಡಿ ಅವರನ್ನು ರಾಜಮೌಳಿ ಹಾಗೂ ಚಿತ್ರತಂಡದ ಇನ್ನೂ ಕೆಲವರು ಭೇಟಿ ಆಗಿದ್ದಾರೆ.ಕೀನ್ಯಾದ ವಿದೇಶ ವ್ಯವಹಾರ ಖಾತೆ ಕಚೇರಿಗೆ ಭೇಟಿ ನೀಡಿದ್ದ ರಾಜಮೌಳಿ, ಕಾರ್ತಿಕೇಯ ಹಾಗೂ ಇನ್ನೂ ಕೆಲವರು ಕಾರ್ಯದರ್ಶಿ ಹಾಗೂ ಕಚೇರಿಯ ಇನ್ನೂ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಹಲವು ಸಮಯ ಮಾತುಕತೆ ನಡೆಸಿದ್ದಾರೆ. ಕೀನ್ಯಾದಲ್ಲಿ ಚಿತ್ರೀಕರಣ ಮಾಡಿದ ಅನುಭವದ ಬಗ್ಗೆ ರಾಜಮೌಳಿ ಈ ಸಮಯದಲ್ಲಿ ಮಾತನಾಡಿದ್ದಾಗಿ ಮುಸಾಲಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







