ಮೊದಲ-ಎರಡನೇ ಬಾರಿ ಗೆದ್ದವರಿಗೆ ಮಂತ್ರಿಗಿರಿ ನೀಡಿ: ಇನ್ಸಾಲ್ ಆಗ್ರಹ
ಮೊದಲ, ಎರಡನೇ ಬಾರಿ ಗೆದ್ದವರಿಗೆ ಸಂಪುಟ ಪುನಾರಚನೆ ವೇಳೆ
ಮಂತ್ರಿಗಿರಿ ನೀಡಲಿ ಎಂದು ಕಾಂಗ್ರೆಸ್ ಶಾಸಕ ಇಕ್ಸಾಲ್ ಹುಸೇನ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ ಖರ್ಗೆ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾಗ ಸಚಿವರಾಗಿದ್ದರು. ಹಾಗಾಗಿ, ಈಗಲೂ ಮೊದಲ ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ. 55 ಮಂದಿ ಸೇರಿ, ಒಟ್ಟಿಗೆ ಊಟ ಮಾಡಿ, ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಸಿಎಂಗೆ ತಿಳಿಸಿದ್ದೇವೆ. ನಮ್ಮ ಮನವಿಗೆ ಸಿಎಂ ಸ್ಪಂದಿಸುವ ವಿಶ್ವಾಸ ಇದೆ ಎಂದರು. 3 -4ಬಾರಿ ಗೆದ್ದ ಶಾಸಕರು ಸಭೆ ಮಾಡಿ, ಮುಖ್ಯಮಂತ್ರಿಗಳಲ್ಲಿ ಸಚಿವ ಪದವಿಗೆ ಮನವಿ ಮಾಡಿದ್ದಾರೆ. ಹಾಗಾಗಿ, ಮೊದಲ ಬಾರಿ ಹಾಗೂ ಎರಡು ಬಾರಿ ಗೆದ್ದ ಶಾಸಕರು ಕೂಡ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು.
