ರಾಮನಗರ: ನೇಪಾಳದಲ್ಲಿ (Nepal) ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪ್ರವಾಸಕ್ಕೆಂದು ತೆರಳಿದ್ದ ರಾಮನಗರದ 4 ಮಂದಿ ಪ್ರವಾಸಿಗರು ನೇಪಾಳದಲ್ಲಿ ಸಿಲುಕಿದ್ದಾರೆ.ಪ್ರವಾಸಿಗರು ಬೆಂಗಳೂರಿನ 50 ಜನರ ಜೊತೆ ನೇಪಾಳ ಪ್ರವಾಸ ಕೈಗೊಂಡಿದ್ದರು. ನೇಪಾಳದ ಕಠ್ಮಂಡುವಿನ ಹೋಟೆಲ್ನಲ್ಲಿ ಕರ್ನಾಟಕದ 50 ಮಂದಿ ಪ್ರವಾಸಿಗರು ಸಿಲುಕಿದ್ದಾರೆ. ಇಂದು ಕಠ್ಮಂಡುವಿನಿಂದ ಜನಕ್ ಪುರ್ದ ಡಿಯೊಗರ್ ವಿಮಾನ ನಿಲ್ದಾಣಕ್ಕೆ ಪ್ರವಾಸಿಗರು ಪ್ರಯಾಣಿಸಲಿದ್ದಾರೆ.ಸೆ. 1ರಂದು ಬೆಂಗಳೂರಿನ ಏರ್ಪೋರ್ಟ್ನಿಂದ ಪ್ರವಾಸಿಗರು ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದರು. 13 ದಿನಗಳ ಪ್ರವಾಸಕ್ಕೆಂದು ತೆರಳಿದ್ದ ಕನ್ನಡಿಗರು, ಬೆಂಗಳೂರಿಂದ ವಾರಣಾಸಿ, ಅಯೋಧ್ಯೆ ಬಳಿಕ ನೇಪಾಳ ಬಾರ್ಡರ್ ತಲುಪಿದ್ದರು. ನೇಪಾಳದ ಸೋನಾಲಿ ಬಾರ್ಡರ್ಗೆ ತಲುಪಿ ಸೆ.8ರಂದು ಪೊಕ್ರಾದಿಂದ ಕಠ್ಮಂಡು ಕಡೆ ಪ್ರಯಾಣ ಬೆಳೆಸಿದ್ದರು. ಮನೋಕಾಮನಾ ದೇವಿ ದರ್ಶನ ಮುಗಿಸಿ ಹೊರಟಾಗ ಅಲ್ಲಿನ ಗಲಾಟೆ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಕಠ್ಮಂಡುವಿನ ಪ್ರೈಮ್ಶೂಟ್ ಹೋಟೆಲ್ನಲ್ಲಿ ಕನ್ನಡಿಗರು ವಾಸ್ತವ್ಯ ಹೂಡಿದ್ದಾರೆ. ಕಠ್ಮಂಡುವಿನ ಪಶುಪತಿನಾಥ ದೇವರ ದರ್ಶನ ಪಡೆದು ಹೊರ ಬರುವಾಗ ಗಲಾಟೆ ಆರಂಭವಾಗಿದೆ. ಸೆ.9ರಂದು 11 ಗಂಟೆಗೆ ಗಲಾಟೆ ಆರಂಭವಾಗಿದ್ದು, ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದ್ದು. ಸೆ.13ರಂದು ಪ್ರವಾಸಿಗರು ವಾಪಸ್ ಆಗಲಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







