ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರ 2015ರಲ್ಲಿ ತೆರೆ ಕಂಡಿತ್ತು. ವಿಭಿನ್ನವಾದ ಚಿತ್ರಕಥೆಯ ಮೂಲಕ ಸಿನಿಮಾ ರಂಗದಲ್ಲಿ ಸುಪರ್ ಹಿಟ್ ಆಗಿತ್ತು. ಇದೀಗ ಚಿತ್ರಕ್ಕೆ ಹತ್ತು ವರ್ಷ ತುಂಬಿದ ಹಿನ್ನಲೆ ಜುಲೈ 4ರಂದು ರಂಗಿ ತರಂಗ ಚಿತ್ರ ಮರು ಬಿಡುಗಡೆ ಆಗುತ್ತಿದೆ. ಇತ್ತೀಚಿಗೆ ಸುದ್ದಿಗೋಷ್ಠಿ ಕರೆದಿದ್ದ ಚಿತ್ರತಂಡ ಇದರ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿತ್ತು.
ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿ ರಂಗಿ ತರಂಗ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುವಾಗ ಎಚ್ ಕೆ ಪ್ರಕಾಶ್ ಇದನ್ನು ನೀವೇ ನಿರ್ದೇಶನ ಮಾಡಬೇಕೆಂದು ಆಸೆಪಟ್ಟರು. ಚಿತ್ರದಲ್ಲಿ ಸಾಯಿಕುಮಾರ್ ಹೊರತುಪಡಿಸಿ ಉಳಿದೆಲ್ಲ ಕಲಾವಿದರು ಹೊಸಬರು ಇದ್ದರೂ. ಎಲ್ಲರ ಶ್ರಮದಿಂದ ಚಿತ್ರ ಸೂಪರ್ ಹಿಟ್ ಆಯ್ತು. ಕೆಲವರು ಹಾಗ ನಿರ್ಮಾಪಕರಿಗೆ ಪೋಸ್ಟರ್ ಹಣ ಬರುವುದಿಲ್ಲ ಎಂದು ಹೆದರಿಸಿದ್ದರು. ಜೊತೆಗೆ ಆಗ ಬಾಹುಬಲಿ,ಶ್ರೀಮಂತುಡು ಅಂತಹ ಸಿನಿಮಾಗಳಿಗೆ ಸೆಡ್ಡು ಹೊಡೆದು ಗೆದ್ದಿತು ಎಂದು ಸಂತಸ ವ್ಯಕ್ತಪಡಿಸಿದರು
ಇದೆ ವೇಳೆ ಸಾಯಿಕುಮಾರ್ ಮಾತನಾಡಿ ನನಗೆ ಪೊಲೀಸ್ ಸ್ಟೋರಿ ಬಿಟ್ರೆ ಇಷ್ಟವಾದ ಸಿನಿಮಾ ಅಂದ್ರೆ ಅದು ರಂಗಿ ತರಂಗ ಹೊಸಬರ ಜೊತೆ ಕೆಲಸ ಮಾಡಿದ್ದು ಅನಿಸಲಿಲ್ಲ ಹಾಗೆ ಚಿತ್ರದ ಕಥೆ ಚೆನ್ನಾಗಿತ್ತು ಜನ ಸಿನಿಮಾ ಗೆಲ್ಲಿಸಿದರು ಎಂದರು. ನಟ ನಿರೂಪ್ ಭಂಡಾರಿ ಮಾತನಾಡಿ ನಾನು ಐಟಿ ಉದ್ಯೋಗಿ ಆಗಿದ್ರು ಸಿನಿಮಾ ಮೇಲೆ ಹುಚ್ಚಿತ್ತು. ಅಣ್ಣನ ಕಿರುಚಿತ್ರಗಳಿಗೆ ಕೆಲಸ ಮಾಡುತ್ತಿದ್ದೆ. ಸಾಯಿಕುಮಾರ್ ಅಂತ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡುವಾಗ ಭಯ ಇತ್ತು ಎಂದರು. ಇನ್ನು ಯಾರು ಸಿನಿಮಾವನ್ನು ನೋಡಿಲ್ಲ ಜುಲೈ 4ರಂದು ಚಿತ್ರಮಂದಿರಕ್ಕೆ ಬಂದು ನೋಡಿ ಎಂದು ಹೇಳಿದ್ರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



