ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳಿವೆ ಆ ಸವಾಲುಗಳನ್ನು ಹೆದರಿಸಿದಾಗ ಮಾತ್ರ ನಾವು ಉತ್ತಮ ವ್ಯಕ್ತಿಯಾಗಿಹೊರಹೊಮ್ಮುತ್ತೇವೆ ಅದರಲ್ಲಿ ಪುಷ್ಪಲತಾ ಸಹ ಒಬ್ಬರು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಕೆ.ತಿಮ್ಮಯ್ಯ ತಿಳಿಸಿದರುಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ ವಯೋನಿವೃತ್ತಿ, ಮುಂಬಡ್ತಿ ಹೊಂದಿದವರಿಗೆಬೀಳ್ಕೊಡುಗೆ ಹಾಗೂ ಕಾಲೇಜಿಗೆ ವರ್ಗಾವಣೆಯಾಗಿ ಬಂದಿರುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗ ಕಾಲೇಜು ಜೀವನ ಸ್ಪರ್ಧ ಜೀವನವಾಗಿದೆ ಉಪನ್ಯಾಸಕರುವಿದ್ಯಾರ್ಥಿಗಳಿಗೆ ಹತ್ತಿರವಾದಾಗ ಮಾತ್ರ ಫಲಿತಾಂಶ ಹೆಚ್ಚಾಗುತ್ತದೆ. ನಾನು ಈ ವರ್ಷ ಫಲಿತಾಂಶ ಹೆಚ್ಚಿಸುವುದಕ್ಕಾಗಿ ಹಲವುಕಠಿಣ ಕ್ರಮಗಳನ್ನು ಕೈಗೊಂಡಿದ್ದೇನೆ ಹಾಗೂ ಇಲಾಖೆ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇನೆ ಹಾಗಾಗಿಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಹಕರಿಸಬೇಕೆಂದು ತಿಳಿಸಿದರು.
ಪ್ರಾಚಾರ್ಯ ಗೋವಿಂದಪ್ಪ ಮಾತನಾಡಿ ಇದೊಂದು ಭಾವನಾತ್ಮಕ ಕಾರ್ಯಕ್ರಮ ಬಡತನದಿಂದ ಬಂದವರು ಶಿಕ್ಷಕರಾಗುತ್ತಾರೆಯಾವ ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ಪಾಠ ಮಾಡುತ್ತಾರೆ ಅವರ ಮಕ್ಕಳು ಸಹ ಬುದ್ದಿವಂತರಾಗುತ್ತಾರೆ ಎಂದು ತಿಳಿಸಿದರು.ಸನ್ಮಾನಿತ ಜಿ.ಟಿ ಪುಷ್ಪಲತಾ ಮಾತನಾಡಿ ನನ್ನ ಉಪನ್ಯಾಸಕ ವೃತ್ತಿ ನನಗೆ ತೃಪ್ತಿ ತಂದಿದೆ. ಈ ಕಾಲೇಜು ನನಗೆ ಎಲ್ಲಾ ರೀತಿಯಗೌರವವನ್ನು ದೊರಕಿಸಿಕೊಟ್ಟಿದೆ. ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮತ್ತುಫಲಿತಾಂಶ ಹೆಚ್ಚಿಸುವುದಕ್ಕೆ ಶ್ರಮಿಸಿದ್ದೇನೆ ಎಂದರು. ನನ್ನನ್ನು ಗೌರವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ ನಾನು ಮತ್ತು ಪುಷ್ಪಾಲರವರು ಅರೆ ಕಾಲಿಕಉಪನ್ಯಾಸಕ ವೃತ್ತಿಯಿಂದ ಖಾ ಯಂ ಉಪನ್ಯಾಸಕರಾಗಿ ನೇಮಕಗೊಂಡವರು. ಸರ್ಕಾರ ಅರೆ ಕಾಲಿಕ ಉಪನ್ಯಾಸಕರನ್ನು ಖಾಯಂ ಗೊಳಿಸುವುದಕ್ಕಾಗಿ ಮಾಡಿದ ಹೋರಾಟಗಳನ್ನು ನೆನಪಿಸಿ, ಇದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಉಪ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಕೆ ತಿಮ್ಮಯ್ಯರವರು ತಾನು ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರುಗಳನ್ನು ಸಂಪರ್ಕಿಸಿ ಫಲಿತಾಂಶ ಹೆಚ್ಚಿಸುವುದಕ್ಕೆ ಮಾರ್ಗದರ್ಶನ ನೀಡಿದ್ದಾರೆಎಂದರು.
ಈ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಎಚ್. ರಾಜು ರವರು ಮಾತನಾಡಿ ಹೊಸ ಹೊಸಆಲೋಚನೆಗಳನ್ನು ಮತ್ತು ಕಾರ್ಯಪ್ರವೃತ್ತಿಯನಿಟ್ಟು ಕೊಂಡು ಬಂದಿದ್ದಾರೆ ಉಪನ್ಯಾಸಕರು ಸಹಕರಿಸಬೇಕಿದೆ ಬಡ್ತಿ, ವರ್ಗಾವಣೆ ಮತ್ತು ನಿವೃತ್ತಿ ಇವು ಸರ್ಕಾರಿ ನೌಕರರ ಸಂಗಮ. ಉಪನ್ಯಾಸಕರು ಮತ್ತು ಪ್ರಾಚಾರ್ಯರ ಸಹಕಾರದಿಂದ ಸಾಧನೆ ಮಾಡಬಹುದು ನನ್ನ ಸೇವಾವಧಿಯಲ್ಲಿ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕರಾಗಿ ಮುಂಬಡ್ತಿ ಹೊಂದಿದ ಕೆ ತಿಮ್ಮಯ್ಯ ಪ್ರಾಚಾರ್ಯರುಗಳಾಗಿ ಮುಂಬಡ್ತಿ ಹೊಂದಿದಕೆ.ಎನ್.ವಸಂತ್ ಕುಮಾರ್ ಶ್ರೀಮತಿ ಟಿ.ಲಲಿತಮ್ಮ ರವರನ್ನು ಕಾಲೇಜ್ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿಸನ್ಮಾನಿಸಲಾಯಿತು. ನಂತರ ಇದೇ ಸಂದರ್ಭದಲ್ಲಿ ಕಾಲೇಜಿಗೆ ವರ್ಗಾವಣೆ ಯಾಗಿ ಬಂದಿರುವ ಉಪನ್ಯಾಸಕರುಗಳಾದ ಆಶಾರಾಣಿ ಹನುಮಂತಪ್ಪ ಸಹೀದ ಬೇಗಂ ರವರನ್ನು ಸ್ವಾಗತಿಸಲಾಯಿತು. ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ ಕೆ.ಎನ್. ವಸಂತ್ಕುಮಾರ್ ಮತ್ತು ಟಿ.ಲಲಿತಮ್ಮ ಕಾಲೇಜಿನ ಸೇವಾ ಅವಧಿಯನ್ನು ಜ್ಞಾಪಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಭೀಮರೆಡ್ಡಿ ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಎಂ ಶ್ರೀನಿವಾಸ್ ಕಾಲೇಜಿನಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸಾಹಿತಿ ನಾಗರಾಜ್ ಬೆಳಗಟ್ಟ ಯುವ ಸಂಸತ್ ಅಧ್ಯಕ್ಷ ಎಚ್ ಆರ್ ಜಬಿವುಲ್ಲ ಎನ್‍ಎಸ್‍ಎಸ್ ಅಧಿಕಾರಿ ಶಾಂತಕುಮಾರಿ ಎಚ್ ಆರ್ ಅಭಿವುಲ್ಲ ಡಾ. ರೇಖಾ ಹೀನ ಕೌಸರ್ ಜಾನಕಮ್ಮ ಚಂದ್ರಶೇಖರ್ ಕುಮಾರಸ್ವಾಮಿ ನಾಗಭೂಷಣಸ್ವಾಮಿ ತಿಪ್ಪೇಸ್ವಾಮಿ ಜಗದೀಶ್ ಪಾಲಯ್ಯ ವೀರಣ್ಣ ರಾಮಾಂಜನೇಯ ಗ್ರಂಥಪಾಲಕನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



