ಅಮೆರಿಕದ ಅಕ್ಕ ರಜತ ಉತ್ಸವಕ್ಕೆ ನಟ ರಿಷಬ್ ಶೆಟ್ಟಿ ರಾಯಭಾರಿ
: ಅಮೆರಿಕದಲ್ಲಿರುವ ಕನ್ನಡಿಗರ ಅತಿ ದೊಡ್ಡ ಸಾಂಸ್ಕೃತಿಕ ಸಂಭ್ರ ಮ
‘ಅಕ್ಕ ವಿಶ್ವ ಕನ್ನಡ ಸಮ್ಮೇಳನ-ಫಿಲಡೆಲ್ಪಿಯಾ 2026’ ಇದೀಗ ಮತ್ತಷ್ಟು ವೈಭವ ಪಡೆದುಕೊಂಡಿದೆ. ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಅಂಗ ನಡೆಯುತ್ತಿರುವ ಐತಿಹಾಸಿಕ ಮಹೋತ್ಸವಕ್ಕೆ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ-ಫಿಲಡೆಲಿಯಾ 2026’ ಸೆಪ್ಟೆಂಬರ್ 4ರಿಂದ 6ರವರೆಗೆ ನಡೆಯಲಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲಿನ ಪ್ರೀತಿ, ವಿಶಿಷ್ಟ ಕಲಾತ್ಮಕ ದೃಷ್ಟಿಕೋನ ಹೊಂದಿರುವ ರಿಷಬ್ ಅವರನ್ನು ಸಾಂಸ್ಕೃತಿಕ ರಾಯಭಾ ರಿಯಾಗಿ ಆಯ್ಕೆ ಮಾಡಿರುವುದು ಉತ್ತರ ಅಮೆರಿಕದ ಕನ್ನಡ ಸಮುದಾಯಕ್ಕೆ ಹೆಮ್ಮೆ, ಸಂತೋಷ ಎಂದು ಅಕ್ಕ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
