ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕಿನಲ್ಲಿ (Bike) ಆಗಮಿಸಿ ಸರಗಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳು ಇದೀಗ ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ಸರ ಕಸಿದು ಪರಾರಿಯಾಗುತ್ತಿದ್ದಾರೆ.ಕೈಯಲ್ಲಿ ಲಾಂಗ್ ಹಿಡಿದು ಮಹಿಳೆಯರನ್ನು ಬೆದರಿಸಿ ಚಿನ್ನದ (Gold) ಸರ ಕಳ್ಳತನ ಮಾಡುವ ಇವರ ಕೃತ್ಯ ನೋಡಿದರೆ ಎಂಥವರಿಗೂ ಭಯ ಹುಟ್ಟುತ್ತೆ.ಗಿರಿನಗರ, ಕೋಣನಕುಂಟೆಯ ಆರ್ಬಿಐ ಲೇಔಟ್ ನಲ್ಲಿ ಲಾಂಗ್ ಹಿಡಿದು ಸರಗಳ್ಳರು ಕಳ್ಳತನ ಮಾಡಿದ್ದಾರೆ. ಶನಿವಾರ ರಾತ್ರಿ ಗಿರಿನಗರದಲ್ಲಿ ಲಾಂಗ್ ಬೀಸಿ ವರಲಕ್ಷ್ಮೀ ಎಂಬವರ ಕೈ ಬೆರಳು ತುಂಡರಿಸಿ ಚಿನ್ನದ ಸರ ಕಸಿದು ಪರಾರಿಯಾಗಿದ್ದರುಅದೇ ದಿನ ಕೋಣನಕುಂಟೆಯ ಆರ್ಬಿಐ ಲೇಔಟ್ ನಲ್ಲೂ ಲಾಂಗ್ ತೋರಿಸಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಮಹಿಳೆಯರಿಗೆ ಬೆದರಿಸಿ ಸರ ಕಸಿದು ಪರಾರಿಯಾಗಿದ್ದಾರೆ.ಮಹಿಳೆಗೆ ಲಾಂಗ್ ಹಿಡಿದು ಬೆದರಿಸುವ ವೀಡಿಯೊ ಲಭ್ಯವಾಗಿದ್ದು ದರೋಡೆಕೋರರ ಅಟ್ಟಹಾಸ ಭಯ ಹುಟ್ಟಿಸುವಂತಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







