ಚಿತ್ರದುರ್ಗ: ರೋಟರಿ ಕ್ಲಬ್ ಯಾವುದೇ ಸೇವಾಪೇಕ್ಷೆ ಇಲ್ಲದೆ ಸಮಾಜದ ಒಳಿತಿಗಾಗಿ ಸೇವೆಯನ್ನು ಮಾಡುತ್ತಿದೆ, ಇದರಲ್ಲಿ ಆರೋಗ್ಯ, ಶಿಕ್ಷಣ,ಪರಿಸರ, ಸ್ವಚ್ಚತೆ, ಬಾಲಕಿಯರ ಸಬಲಿಕರಣ ಪೋಲಿಯೂ ನಿರ್ಮೂಲನೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನುಹಮ್ಮಿಕೊಂಡಿದೆ ಎಂದು ಜಿಲ್ಲಾ ಗವರ್ನರ್-ಆರ್‍ಐಡಿ 3160 ಎಂ.ಕೆ.ರವೀಂದ್ರ ತಿಳಿಸಿದರು.
ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಭಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2025-2026ನೇ ಸಾಲಿನ
ರೋಟರಿಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ನೇಹ ಮತ್ತು ಸೇವೆಎಂಬ ಧೈಯ ಹೊಂದಿರುವ ಒಂದು ಅಂತರಾಷ್ಟ್ರೀಯ ಸಂಸ್ಥೆ ಸಮಾಜದಲ್ಲಿ ಅನೇಕ ಸಮಾಜಮುಖಿ ಸೇವೆಗಳನ್ನ ಮಾಡುತ್ತಾಮಹಿಳೆಯರಿಗೆ ಒಂದು ದೊಡ್ಡ ವೇದಿಕೆ ಕಲ್ಪಿಸಿ ಕೊಟ್ಟಿದೆ ರೋಟರಿಯಂತಹ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಅಧ್ಯಕ್ಷ ಸ್ಥಾನ ಎಂಬುದುಅಧಿಕಾರ ಸ್ಥಾನವಾಗಿರದೆ ಸಾರ್ವಜನಿಕರ ಸೇವೆ ಸಲ್ಲಿಸಲು ಸಿಕ್ಕ ಒಂದು ಅವಕಾಶ ಎಂದರು.
ರೋಟರಿ ಅಂತರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿದ್ದು, ವಿಶ್ವಾದ್ಯಂತ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.ರೋಟರಿ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಎಲ್ಲರಲ್ಲೂ ನಾಯಕತ್ವಗುಣಗಳಿರುತ್ತವೆ. ಅದನ್ನು ಗುರುತಿಸುವಂತಹ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಈಗಾಗಲೇ ರೋಟರಿಕ್ಲಬ್ಸಮಾಜದಲ್ಲಿ ಹಲವಾರು ಉಪಯುಕ್ತವಾದ ಕಾರ್ಯಕ್ರಮಗಳನ್ನು ಮಾಡಿದೆ ಪೋಲಿಯೋ ನಿರ್ಮೂಲನೆಯಲ್ಲಿ ತನ್ನದೆ ಆದಪಾತ್ರವನ್ನು ವಹಿಸಿದೆ. ಪರಿಸರ ಕಾಳಜಿ, ಶಿಕ್ಷಣಕ್ಕೆ ಮಹತ್ವ ಆರೋಗ್ಯದ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವಂತ ಕಾರ್ಯವನ್ನುಕೈಗೆತ್ತಿಕೊಂಡಿದೆ ಎಂದರು.
ಚಿತ್ರದುರ್ಗ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಷ್ಮೀ ಮೂರ್ತಿ, ಕಾರ್ಯದರ್ಶಿಯಾಗಿ ಅನುರಾಧ ವಿಶ್ವನಾಥಸೇರಿದಂತೆ ರೋಟರಿ ಕ್ಲಬ್‍ನ ಇತರೆ ಪದಾಧಿಕಾರಿಗಳು ಪದಗ್ರಹಣ ಮಾಡಿದರು.ಕಾರ್ಯಕ್ರಮದಲ್ಲಿ ಪಿ.ಡಿ.ಜಿ.ಕೆ.ಮಧುಪ್ರಸಾದ್, ಪಿ.ಎಚ್.ಎಫ್.ಪಿ.ಡಿ.ಜಿ. ಶುಂಭುಲಿಂಗಪ್ಪ, ಚಿನ್ಮುಲಾದ್ರಿ ವಲಯದ ಸಹಾಯಕ
ರಾಜ್ಯಪಾಲರಾದ ಆರ್‍ಟಿಎನ್.ಪಿಎಚ್‍ಇ.ಕಿರಣ್ ಕುಮಾರ್‍ರವರು ಕ್ಲಬ್ ಬುಲೆಟಿನ್ ರೋಟರಿ ಚಿತ್ರಾ ಬಿಡುಗಡೆ ಮಾಡಿದರು. ವೇದಾರವೀಂದ್ರ ಭಾಗವಹಿಸಿದ್ದರು ಉಮೇಶ್ ತುಪ್ಪದ್ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೆ ವೇಳೆ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ವೀರಣ್ಣ, ವಂದನಾರ್ಪಣೆ ಅನುರಾಧ ವಿಶ್ವನಾಥ್, ನೂತನ ಅಧ್ಯಕ್ಷರಾದ ಭಾಗ್ಯಲಕ್ಷ್ಮೀಮೂರ್ತಿ ಮತ್ತಿತರು ಇದ್ದರೂ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



