ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಆಕಾಡೆಮಿ ಬೆಂಗಳೂರು ಹಾಗೂ ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 22 ರಿಂದ 24ರವರೆಗೆ ಮೂರು ದಿನಗಳ ಕಾಲ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದುಕರ್ನಾಟಕ ಸಾಹಿತ್ಯ ಆಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಹಾಗೂ ಸದಸ್ಯ ಸಂಚಾಲಕರಾದ ಡಾ.ಪಿ. ಚಂದ್ರಿಕಾ ತಿಳಿಸಿದ್ದಾರೆ.ಈ ಮೂರು ದಿನದ ಕಾಲ ನಡೆಯುವ ಕನ್ನಡ ಸಾಹಿತ್ಯಾಭಿರುಚಿ ಶಿಬಿರದಲ್ಲಿ 8 ಗೋಷ್ಟಿಗಳು ನಡೆಯಲಿದ್ದು ಇದರೊಂದಿಗೆ ಉದ್ಘಾಟನೆ,ಸಂಪಾದಕರೊಂದಿಗೆ ಸಂವಾದ, ಸ್ವಾತಂತ್ರ್ಯೋತ್ತರ ಸಾಹಿತ್ಯ, ಸಮಾರೋಪ, ಹಾಗೂ ಶಿಬಿರಾರ್ಥಿ ಹಾಗೂ ನಿರ್ದೇಶಕರಮುಖಾಮುಖಿ ಕಾರ್ಯಕ್ರಮ ನಡೆಯಲಿದೆ.
ಆ. 22 ರಂದು ಬೆಳಿಗ್ಗೆ 9 ಗಂಟೆಯಿಂದ ಶಿಬಿರಾರ್ಥಿಗಳ ನೊಂದಾಣಿ ಕಾರ್ಯಕ್ರಮ ನಡೆಯಲಿದ್ದು, 11ಕ್ಕೆ ಶಿಬಿರದ ಉದ್ಘಾಟನಾ
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ವಹಿಸಲಿದ್ದಾರೆ.ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಮಾಧ್ಯಮದ ಮಾಜಿ ಸಲಹೆಗಾರರಾದ ದಿನೇಶ್ ಅಮ್ಮಿನಮಟ್ಟು ನಡೆಸಿಕೊಡಲಿದ್ದಾರೆ.ಮುಖ್ಯಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ಗೌಡಗೆರೆ, ಶಿಬಿರ ನಿರ್ದೇಶಕರಾದ ಪ್ರೋ.ಎಂ.ಅಬ್ದಲ್ ರೆಹಮಾನ್ ಪಾಷ, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದಡಾ.ಕರಿಯಪ್ಪ ಮಾಳಿಗಿ, ಕರ್ನಾಟಕ ಮಾಧ್ಯಮ ಆಕಾಡೆಮಿಯ ಸದಸ್ಯರಾದ ಆಹೋಬಳಪತಿ ಭಾಗವಹಿಸಲಿದ್ದಾರೆ.ಮಧ್ಯಾಹ್ನ 12.30ರಿಂದ ಶಿಬಿರಾರ್ಥಿ ಹಾಗೂ ನಿರ್ದೇಶಕರ ಮುಖಾಮುಖಿ ಕಾರ್ಯಕ್ರಮ, ಮಧ್ಯಾಹ್ನ 2.30ರಿಂದ ಹಳೆಗನ್ನಡಸಾಹಿತ್ಯದ ಬಗ್ಗೆ ನಿವೃತ್ತ ಪ್ರಾಧ್ಯಾಪಕರಾದ ಡಾ.ಬಿ.ಪಿ.ವೀರೇಂದ್ರ ಕುಮಾರ್, ಮಧ್ಯಾಹ್ನ 3.30ರಿಂದ ನಡುಗನ್ನಡ ಸಾಹಿತ್ಯ ವಚನಹಾಗೂ ಷಟ್ಪದಿಯ ಬಗ್ಗೆ ಸಾಹಿತಿಗಳಾದ ಪ್ರೊ ಸಬಿತಾ ಬನ್ನಾಡಿ, ಸಂಜೆ 5.30ಕ್ಕೆ ಕೀರ್ತನ ತತ್ವಪದ ಹಾಗೂ ಸಾಂಗತ್ಯದ ಬಗ್ಗೆಪ್ರಾಧ್ಯಾಪಕರಾದ ಡಾ,ಕರಿಯಪ್ಪ ಮಾಳಿಗಿ ಉಪನ್ಯಾಸ ನೀಡಲಿದ್ದಾರೆ.
ಆ. 23ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಪತ್ರಿಕೆ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಶಿಬಿರದ ನಿರ್ದೆಶಕರಾದ ಪ್ರೊ.ಎಂ.ಅಬ್ದಲ್ ರೆಹಮಾನ್ಪಾಷ, ಮಧ್ಯಾಹ್ನ 2ಕ್ಕೆ ಸಂಪಾದಕರೊಂದಿಗೆ ಸಂವಾದದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರಾದಮಹಾಬಲೇಶ್ವರ ಭಟ್ಟ ಭಾಗವಹಿಸಲಿದ್ದು, ಆಪರಾಹ್ನ 4ಕ್ಕೆ ಪತ್ರಿಕೆಗಳು ಮತ್ತು ಮಹಿಳಾ ಸಾಹಿತ್ಯದ ಬಗ್ಗೆ ಪತ್ರಕರ್ತರಾದ ಭಾರತಿಹೆಗಡೆ ಉಪನ್ಯಾಸ ನೀಡಲಿದ್ದಾರೆ.ಆ, 24ರ ಭಾನುವಾರ ಬೆಳಿಗ್ಗೆ 9ಕ್ಕೆ ಹೊಸಗನ್ನಡ ಸಾಹಿತ್ಯದ ಅರುಣೋದಯದ ಬಗ್ಗೆ ಸಾಹಿತಿಗಳಾದ ಪ್ರೊ, ತಾರಿಣಿ ಶುಭದಾಯಿನಿ,ಬೆಳಿಗ್ಗೆ 10ಕ್ಕೆ ಸ್ವಾತಂತತ್ರ್ಯೋತ್ತರ ಸಾಹಿತ್ಯದಲ್ಲಿ ಹಿರಿಯ ಸಾಹಿತಿಗಳಾದ ಡಾ.ಲೋಕೇಶ್ ಆಗಸನಕಟ್ಟೆ, ಬೆಳಿಗ್ಗೆ 11ಕ್ಕೆ ಕನ್ನಡಪತ್ರಿಕೋದ್ಯಮದ ಚರಿತ್ರೆಯ ಬಗ್ಗೆ ಪತ್ರಕರ್ತರಾದ ಪ್ರಕಾಶ್ ಕುಗ್ವೆ ಹಾಗೂ ಕನ್ನಡ ಲೇಖಕರು ಮತ್ತು ಪತ್ರಿಕೋದ್ಯಮದ ಬಗ್ಗೆ ಹಿರಿಯಪತ್ರತಕರ್ತರಾದ ಡಿ.ಉಮಾಪತಿ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2.30ರಿಂದ ಶಿಬಿರಾರ್ಥಿಗಳಿಂದ ಅನಿಸಿಕೆ ಕಾರ್ಯಕ್ರಮನಡೆಯಲಿದೆ.
ಆ, 24ರ ಮಧ್ಯಾಹ್ನ 3.30ರಿಂದ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಭಾಗವಹಿಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ ವಹಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಆಪರ ಜಿಲ್ಲಾಧಿಕಾರಿಗಳಾದ ಬಿ.ಟಿ.ಕುಮಾರಸ್ವಾಮಿ, ಕಮ್ಮಟದ ಫಲಶೃತಿಯನ್ನು ಶಿಬಿರನಿದೇಶಕರಾದ ಪ್ರೊ.ಎಂ.ಅಬ್ದಲ್ ರೆಹಮಾನ್ ಪಾಷ, ನೆರವೇರಿಸಲಿದ್ದು, ಶಿಬಿರ ಸಂಯೋಜಕರಾದ ವಿರೇಶ್ ವಿ,ಚಳ್ಳಕೆರೆ, ಸಹನಿರ್ದೇಶಕರಾದ ನಾಕಿಕೆರೆ ತಿಪ್ಪೇಸ್ವಾಮಿ, ಮಮತಾ ಅರಸಿಕೇರೆ ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಆಕಾಡೆಮಿಯ ಪುಸ್ತಕಗಳ ಪ್ರದರ್ಶನ ಇದ್ದು ಇದರಲ್ಲಿ ಶೇ.50ರಷ್ಟು ರಿಯಾಯಿತಿ ವ್ಯವಸ್ಥೆ ಸಿಗಲಿದೆ ಎಂದು
ಸಂಘಟಕರು ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







