ಸಲ್ಮಾನ್ ಖಾನ್ ನಟನೆಯ ‘ದಬಂಗ್’ ಚಿತ್ರಕ್ಕೆ 15 ವರ್ಷಗಳು ಪೂರ್ಣಗೊಳ್ಳುವುದರಲ್ಲಿದೆ. ಹೀಗಿರುವಾಗಲೇ ಈ ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್ ಅವರು ಸಲ್ಲು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಲ್ಮಾನ್ ಖಾನ್ಗೆ ನಟನೆ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಜೊತೆಗೆ ಅವರನ್ನು ಗೂಂಡಾ ಎಂದು ಕೂಡ ಕರೆದಿದ್ದಾರೆ. ಸದ್ಯ ಅವರು ನೀಡಿರುವ ಹೇಳಿಕೆ ಎಲ್ಲೆಡೆ ಚರ್ಚೆ ಆಗುತ್ತಾ ಇದೆ.2010ರಲ್ಲಿ ‘ದಬಾಂಗ್’ ಸಿನಿಮಾ ರಿಲೀಸ್ ಆಯಿತು. ಆಗಿನ ಕಾಲದಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿತು. ಅಭಿನವ್ ಅವರು ಸಲ್ಲು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಸಲ್ಮಾನ್ ಖಾನ್ ಅವರು ಸಿನಿಮಾ ಬಗ್ಗೆ ಯಾವಾಗಲೂ ಆಸಕ್ತಿ ತೋರಿಸಿಲ್ಲ. ನಟನೆಯ ಬಗ್ಗೆ ಅವರಿಗೆ ಆಸಕ್ತಿಯೇ ಇಲ್ಲ. ಕಳೆದ 25 ವರ್ಷಗಳಿಂದ ಇದೇ ನಡೆದುಕೊಂಡು ಬಂದಿದೆ. ಸೆಲೆಬ್ರಿಟಿ ಎನ್ನುವ ಟ್ಯಾಗ್ ಅವರಿಗೆ ಬೇಕಷ್ಟೆ. ಅವರು ಗೂಂಡಾ’ ಎಂದಿದ್ದಾರೆ ಅಭಿನವ್.‘ಬಾಲಿವುಡ್ನ ಸ್ಟಾರ್ಗಿರಿ ವ್ಯವಸ್ಥೆಯ ಪಿತಾಮಹನೇ ಸಲ್ಮಾನ್ ಖಾನ್. ಅವರು ಸಿನಿಮಾ ಕುಟುಂಬ ಹಿನ್ನೆಲೆಯಿಂದ ಬಂದವರು. ಅವರು ಆ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಲ್ಮಾನ್ ಖಾನ್ ಸೇಡಿನ ಮನುಷ್ಯ. ಅವರು ಸಂಪೂರ್ಣ ಪ್ರಕ್ರಿಯೆಯನ್ನೇ ನಿಯಂತ್ರಿಸುತ್ತಾರೆ. ಅವರು ಹೇಳಿದಂತೆ ಕೇಳದಿದ್ದರೆ ನಿಮಗೆ ತೊಂದರೆ ಗ್ಯಾರಂಟಿ’ ಎಂದಿದ್ದಾರೆ ಅವರು.ಅಭಿನವ್ ಕಶ್ಯಪ್ ಸಹೋದರ ಅನುರಾಗ್ ಕಶ್ಯಪ್ ಕೂಡ ಬಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. 2003ರಲ್ಲಿ ಸಲ್ಲು ಹಾಗೂ ಅನುರಾಗ್ ಸಿನಿಮಾ ಮಾಡಬೇಕಿತ್ತು. ಆದರೆ, ಬೋನಿ ಕಪೂರ್ ಜೊತೆಗೆ ಆದ ಕಿರಿಕ್ನಿಂದ ಅನುರಾಗ್ ಅವರು ಹೊರ ನಡೆದರು. ‘ನನ್ನ ಸಹೋದರ ಅನುರಾಗ್ಗೂ ತೊಂದರೆ ಆಯಿತು. ಸಲ್ಮಾನ್ ಜೊತೆ ನಿನಗೆ ಸಿನಿಮಾ ಮಾಡೋದು ಸುಲಭ ಇಲ್ಲ ಎಂದು ಅನುರಾಗ್ ನನಗೆ ಸಲಹೆ ನೀಡಿದ್ದ. ಆದರೆ, ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದನ್ನು ಏಕೆ ಹೇಳಿದ್ದ ಎಂಬುದು ನನಗೆ ಆರಂಭದಲ್ಲಿ ಗೊತ್ತಾಗಿರಲಿಲ್ಲ’ ಎಂದಿದ್ದಾರೆ ಅವರು.ಸಲ್ಲು ವಿರುದ್ಧ ಅಭಿನವ್ ಈ ಮೊದಲೂ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ, ಈ ಬಗ್ಗೆ ಸಲ್ಮಾನ್ ಖಾನ್ ಅವರು ಎಂದಿಗೂ ಮಾತನಾಡಿಲ್ಲ. ಅವರು ಈ ವಿಚಾರದಲ್ಲಿ ಮೌನ ತಾಳಿಕೊಂಡುಕೊಂಡು ಬರುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







