ದಾವಣಗೆರೆ: ದಾವಣಗೆರೆ ಪ್ರಧಾನ ಅಂಚೆ ಕಚೇರಿ ಸೇರಿದಂತೆ ಯಾವುದೇ ಅಂಚೆ ಕಚೇರಿಗಳಲ್ಲೂ ಕೆಲಸ, ಕಾರ್ಯಗಳು ಸರಾಗವಾಗಿಸಾಗುತ್ತಿಲ್ಲ. ಕಾರಣಸರ್ವ‌್ರಡೌನ್…ಸರ್ವರ್ ಡೌನ್.ಈಸಮಸ್ಯೆ ಯಿಂದಜನಸಾಮಾನ್ಯರು, ವಿದ್ಯಾರ್ಥಿಗಳು, ನೌಕರಸ್ಥರು, ವಕೀಲರಿಗೆ ಇನ್ನಿಲ್ಲದಂತಹ ತೊಂದರೆ ಆಗುತ್ತಿದೆ. ಅಂಚೆ ಗ್ರಾಹಕರಿಗೆ ಸಕಾಲಕ್ಕೆ ತ್ವರಿತ ಸೇವೆ ಸಿಗುತ್ತಿಲ್ಲ. ಗಂಟೆಗಟ್ಟಲೇ ಅಂಚೆಕಚೇರಿಗಳ ಕೌಂಟರ್‌ಗಳಮುಂದೆ ಜನತೆ ಹಾಗೂಅಂಚೆಸಿಬ್ಬಂದಿಸರ್ವ‌್ರಗಾಗಿ ಕಾಯುವಂತಾಗುತ್ತಿದೆ. ಇಲ್ಲಿ ಪ್ರತಿ ದಿನವೂ ಸರ್ವ‌್ರಡೌನ್ ಎಂಬ ಸಿದ್ದ ಉತ್ತರ ಬರುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.ಕೋರ್ಟ್ ಪ್ರಕರಣಗಳ ದಾಖಲೆಗಳ ಕಳಿಸಲು ಅಂಚೆ ಇಲಾಖೆಯ ಸೇವೆಯನ್ನೇ ಬಳಸಬೇಕಾದ ನಾಗರೀಕರು, ವಕೀಲರು, ಸಂಘ-ಸಂಸ್ಥೆ, ಉದ್ಯಮ, ಕಂಪನಿಗಳು, ತಮ್ಮ ಅಮೂಲ್ಯ ಮತ್ತು ಬೆಲೆ ಬಾಳುವ ವಸ್ತುಗಳನ್ನು ರಿಜಿಸ್ಟರ್ಡ್ ಪಾರ್ಸೆಲ್ ಕಳಿಸಲು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರು ಭಾರತೀಯ ಅಂಚೆ ಇಲಾಖೆಯೇ ಯೋಗ್ಯವೆಂದು ನಂಬಿದವರ ಪರದಾಟ ಹೇಳತೀರದಾಗಿದೆ.
ಅಲ್ಲದೇ, ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ, ಅದರಲ್ಲಿ ವ್ಯವಹರಿಸುತ್ತಿರುವವರು, ಅಂಚೆ ಇಲಾಖೆ ಮೇಲೆ ಅಪರಿಮಿತ ನಂಬಿಕೆ ಹೊಂದಿ, ವಿಶ್ರಾಂತಜೀವನಕ್ಕೆ ಉಳಿತಾಯ ಮಾಡಿ, ಜೀವನ ನಡೆಸುತ್ತಿರು ಹಿರಿಯ ನಾಗರೀಕರು ಸರದಿ ಸಾಲಿನಲ್ಲಿ ನಿಂತುಕೊಂಡ ನಿಸ್ತೇಜರಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಅಂಚೆ ಕಚೇರಿಗಳಲ್ಲಿ ಜೀವವಿಮೆ ಮಾಡಿಸಿದವರ ಪ್ರೀಮಿಯಂ ಹಣ ಪಾವತಿಸಲು ಪರದಾಡುವಂತಾಗಿದೆ ಇತ್ತೀಚೆಗೆ ಅಂಚೆ ಸೇವೆ ಉನ್ನತೀಕರಣಗೊಳಿಸಿರುವುದಾ ಇಲಾಖೆ ಹೇಳುತ್ತಿದೆ. ಆದರೆ, ಗ್ರಾಹಕರಿಗೆ ಸಿಗುತ್ತಿರುವ ಸೇ? ಮಾತ್ರ ಕಳಪೆ, ನಿರಾಶಾದಾಯಕವಾಗಿದೆ. ಅಂಚೆ ವ್ಯವಸ್ಥೆಯ ಉನ್ನತೀಕರಣದ ನಂತರ ಈವರೆಗೆ ಕೇವಲ ದಕ್ಷಿಣ ಭಾರತಕ್ಕೆ ಬಳಸುತ್ತಿದ್ದ ಈ ಅಂತರ್ಜಾಲದ ಸೇವೆ ಇನ್ನ ಉತ್ತರ ಭಾರತವೂ ಬಳಸುತ್ತಿರುವುದರಿಂದ ಸಮಸ್ಯೆ ಸ್ವತಿ ಎಂಬುದು ಇಲಾಖೆಯ ಕೆಲವರ ಹೇಳಿಕೆಯಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



