ಚಿತ್ರದುರ್ಗ: ಸಚಿವ ಶಿವರಾಜ್ ತಂಗಡಗಿ ಸಜ್ಜನ ರಾಜಕಾರಣಿ ಅವ್ರು ಯಾವದೇ ಕಮಿಷನ್ ಕೇಳಿಲ್ಲ. ಗಾಣಿಗ ಮಠದ ಪೂರ್ಣಾನಂದಪುರಿ ಸ್ವಾಮೀಜಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಚಿತ್ರದುರ್ಗ ಬೋವಿ ಗುರುಪೀಠದಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು
ಸಚಿವ ತಂಗಡಗಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ 20% ಕಮಿಷನ್ ಕೇಳಿರುವ ಆರೋಪ ಮಾಡಿದ್ದಾರೆ. ಸಚಿವ ಶಿವರಾಜ್ ತಂಗಡಗಿ ನಮ್ಮ ಸಮುದಾಯದ ಸಜ್ಜನ ರಾಜಕಾರಣಿ. ಅವರು ಬಡತನದಿಂದ ಬೆಳೆದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.ಶಿವರಾಜ್ ತಂಗಡಗಿ ಹಲವರು ಮಠ ಮಾನ್ಯಗಳಿಗೆ ಅನುದಾನ ಕೊಡಿಸಿದ್ದಾರೆ. ಸ್ವಾಮೀಜಿಗಳ ಎದುರು ಕುಳಿತುಕೊಳ್ಳದೆ ಗೌರವ ಕೊಡುವ ವ್ಯಕ್ತಿ ಅಂತಹ ವ್ಯಕ್ತಿಯ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದರು. ಇನ್ನು ಸರ್ಕಾರಗಳು ಬದಲಾದಾಗ ಅನುದಾನ ಬರೋದೇ ಕಷ್ಟ.ಅಂತಹದರಲ್ಲಿ ನಿಮ್ಮ ಮಠಕ್ಕೆ ಅನುದಾನ ಬಂದಿದೆ ಖುಷಿ ಪಡಿ. ನಮ್ಮ ಮಠಕ್ಕೆ ಬೊಮ್ಮಾಯಿ ಸಿಎಂ ಆಗಿದ್ದಾಗ ಹತ್ತಾರು ಕೋಟಿ ಕೊಟ್ಟಿದ್ರು. ಆದ್ರೆ ಸಿದ್ದರಾಮಯ್ಯ ಸಿಎಂ ಆದ ಮೇಲೆ ಅನುದಾನ ಬಂದಿಲ್ಲ. ಬರುತ್ತದೆ ಎಂಬ ನಂಬಿಕೆ ಇದೆ ಎಂದರು. ಸ್ವಾಮೀಜಿಗಳು ಸಾಮಾಜಿಕ ಕಳಕಳಿಯಿಂದ ಮಾತಾಡಬೇಕು ಎಂದು ಹೇಳಿದರು. ಇದೆ ವೇಳೆ ಮಠದ ಭಕ್ತರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



