ಬೆಂಗಳೂರು: ಈಶ್ವರ-ವಿಷ್ಣು ಎಲ್ಲವೂ ನಾನೇ ಇದ್ದೇನೆ. ಸಿದ್ದ ಎಂದರೆ ಈಶ್ವರ ಹಾಗೂ ರಾಮ ಎಂದರೆ ವಿಷ್ಣು. ಇಬ್ಬರೂ ನನ್ನ ಹೆಸರಿನಲ್ಲೇ ಇದ್ದಾರೆ’! ಎಂದು ಮುಖ್ಯಮಂತ್ರಿ ಹೇಳಿದ ಪ್ರಸಂಗ ನಡೆಯಿತು.ವಿಧಾನಸಭೆ ಕಲಾಪದ ಭೋಜನ ವಿರಾಮದ ಬಳಿಕ ಕಪ್ ತುಳಿತ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತು ಮುಂದುವರೆಸಿದ್ದರು. ಈ ವೇಳೆ ಆಡಳಿತ ಪಕ್ಷದ ಸಾಲಿನಲ್ಲಿ ಬಹುತೇಕ ಸಚಿವರು ಹಾಜರಿರಲಿಲ್ಲ. ಈ ಬಗ್ಗೆ ಆರ್. ಅಶೋಕ್ ಅಸಮಾಧಾನ ವ್ಯಕ್ತ ಪಡಿಸಿದರು. ಆಗಮಧ್ಯ ಪ್ರವೇಶ ಮಾಡಿದ ಕೃಷ್ಣಬೈರೇಗೌಡ ಅವರು, ಡಾ.ಜಿ.ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರ ಕಡೆಗೆ ತೋರಿಸಿ ಪರಮ ಈಶ್ವರನೇ ಇದ್ದಾಗ ಬೇರೆಯವರ ಮಾತೇಕೆ. ಈಶ್ವರ (ಪರಮೇರ್ಶ್ವ), ರಾಮ (ಸಿದ್ದರಾಮಯ್ಯ), ಕೃಷ್ಣ (ಕೃಷ್ಣಬೈರೇಗೌಡ) ಎಲ್ಲರೂ ಇದ್ದಾರೆ. ನೀವು ಮಾತನಾಡಿ’ ಎಂದರು. ಆಗ ಸಿಎಂ ಸಿದ್ದರಾಮಯ್ಯ, ಈಶ್ವರ-ವಿಷ್ಣು ಎಲ್ಲವೂ ನಾನೇ ಇದ್ದೇನೆ. ನನ್ನ ಹೆಸರಿನಲ್ಲೇ ಈಶ್ವರ ಹಾಗೂ ವಿಷ್ಣು ಇದ್ದಾರೆ. ಸಿದ್ದ ಎಂದರೆ ಈಶ್ವರ, ರಾಮ ಎಂದರೆ ವಿಷ್ಣು ಅವತಾರ. ಎರಡೂ ನನ್ನ ಬಳಿ ಇವೆ ಎಂದರು.
ಸಂಧಿಗಳ ಸಹವಾಸ ಬೇಡ- ಕೈ ಮುಗಿದ ಅಶೋಕ್
ಈ ವೇಳೆ ಪರಮೇಶ್ವರ್ ಅವರೂ ಇದ್ದಾರೆ ಎಂದು ಪ್ರತಿಪಕ್ಷ ಸದಸ್ಯರು ಹೇಳಿದ ತಕ್ಷಣ ಸಿದ್ದರಾಮಯ್ಯ ಅವರು, ‘ಪರಮೇಶ್ವರ ಅದು ಸವರ್ಣ ದೀರ್ಘ ಸಂಧಿ’ ಎಂದಾಗ ಸದನದಲ್ಲಿ ಎಲ್ಲರಲ್ಲೂ ನಗು. ಆಗ ಆರ್. ಅಶೋಕ್, ‘ನಾನು ಸಂಧಿಗಳಿಗೆ ಹೋಗುವುದಿಲ್ಲ. ಸಂಧಿಗಳ ಸಹವಾಸ ನಮಗೆ ಬೇಡ’ ಎಂದು ಕೈ ಮುಗಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







