ಚಿತ್ರದುರ್ಗ ಜು. 04 ನಗರದ ಸೀಬಾರದ ಬಳಿಯಲ್ಲಿನ ಎಸ್ಸೆನ್ ಸ್ಮಾರಕಕ್ಕೆ ಶುಕ್ರವಾರ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಭೇಟಿ ನೀಡಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಶ್ರೀಗಳು ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪರವರ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ವಿವಿಧ
ಕಾರ್ಯಕ್ರಮಗಳ ಭಾವಚಿತ್ರವನ್ನು ವಿಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಎಸ್ಸೆನ್ ಸ್ಮಾರಕದ ಟ್ರಸ್ಟ್‍ನ ಗೌ.ಕಾರ್ಯದರ್ಶಿ ಹೆಚ್ ಹನುಮಂತಪ್ಪ, ಕೆ.ಇ.ಬಿ.ಷಣ್ಮುಖಪ್ಪ, ನಗರಾಭಿವೃದ್ದಿಪ್ರಾಧಿಕಾರದ ಅಧ್ಯಕ್ಷ ಎಂ. ಕೆ.ತಾಜ್‍ಪೀರ್, ಪಂಚಮಸಾಲಿ ಸಮಾಜದ ಗುತ್ತಿನಾಡ್ ಪ್ರಕಾಶ್, ಹೇಮರೆಡ್ಡಿ ಮಲ್ಲಮ್ಮ ಸಮಾಜದಕಾರ್ಯದರ್ಶಿ ಡಿ ಟಿ ಶಿವನಂಜಪ್ಪ, ಶಿವಶಿಂಪಿ ಸಮಾಜದ ಇ.ಎಸ್. ಜಯದೇವಮೂರ್ತಿ, ಸಾಹಿತಿ ನಿರಂಜನ ದೇವರಮನೆ,ಬಸವರಾಜ ಶಾಸ್ತ್ರಿ, ವಿಶ್ವನಾಥ ಶಾಸ್ತ್ರಿ, ಪಂಚಪೀಠಗಳ ಪರಮಭಕ್ತ ಕೆ ಸಿರುದ್ರೇಶ್, ಗೌಳಿ ಸಮಾ ಜದ ಜಾಲಿಕಟ್ಟೆ ರುದ್ರಪ್ಪ,ಲೋಕೇಶ್, ಬೃಹನ್ಮಠದ ಎಂ.ಜೆ.ರುದ್ರ ಮೂರ್ತಿ, ತವಂದಿ ರಾಜ, ಕೆ.ಸಿ. ಗುರು ಬಸವರಾಜು, ಸಿಬಾರದ ಸುತ್ತಮುತ್ತಲಿನ ಭಕ್ತರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



