ಚಿಕ್ಕಮಗಳೂರು: ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೊಡಲಿಯಿಂದ ಹೊಡೆದು ತಾಯಿಯನ್ನೇ ಮಗ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಶ್ಚಿಮಕ್ಕಿ ಗ್ರಾಮದಲ್ಲಿ ನಡೆದಿದೆ.ಭವಾನಿ (52) ಕೊಲೆಯಾದ ದುರ್ದೈವಿ, ಪವನ್ (28) ಕೊಲೆ ಆರೋಪಿ, ಪವನ್ ಕುಡಿಯಲು ಹಣ ನೀಡುವಂತೆ ತಾಯಿ ಜತೆ ಜಗಳವಾಡಿದ್ದು, ಹಣ ನೀಡಲು ನಿರಾಕರಿಸಿದ್ದಕ್ಕೆ ಮನೆಯಲ್ಲಿದ್ದ ಕೊಡಲಿಯಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾನೆ. ಬಳಿಕ ಮನೆ ಒಳಗೆಯೇ ತಾಯಿಯ ಮೃತದೇಹಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ದೇಹ ಸುಟ್ಟು ಕರಕಲಾಗಿ ಕೈ ಮತ್ತು ಕಾಲುಗಳು ಮಾತ್ರ ಉಳಿದುಕೊಂಡಿವೆ.
ಮಗ-ತಾಯಿ ಜಗಳ ಬಿಡಿಸಲು ಹೋದ ತಂದೆ ಸೋನೆಗೌಡ ಮೇಲೂ ಪವನ್ ಹಲ್ಲೆಗೆ ಮುಂದಾಗಿದ್ದರಿಂದ ಹೆದರಿ ಅಲ್ಲಿಂದ ಓಡಿ ಹೋಗಿದ್ದರು, ಕೆಲ ಸಮಯದ ಬಳಿಕ ಮನೆಗೆ ತಂದೆ ಹಿಂದುರಿಗಿದಾಗ ಹೆಂಡತಿ ಹತ್ಯೆಯಾಗಿರುವುದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ತಾಯಿಯನ್ನು ಸುಟ್ಟ ಹತ್ಯೆಯಾಗಿರುವುದು ತಿಳಿದು, ಅಲ್ಲೂರು ಠಾಣೆ ಜಾಗದಲ್ಲಿಯೇ ಪ್ರಜ್ಞೆ ಇಲ್ಲದವನಂತೆ ಮಲಗಿದ್ದ ಪವನ್‌ನನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಬಾರ್‌ನಲ್ಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಪವನ್ 2 ತಿಂಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದಿದ್ದ. ಕೂಲಿ ಮಾಡಿಕೊಂಡು ಸಂಜೆ ಮದ್ಯಪಾನ ಮಾಡಿ ಬಂದು ತಂದೆ-ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ. ತಿಂಗಳ ಹಿಂದೆ ತಂದೆಗೆ ಲೆರ್ದಬೆಲ್ಸ್‌ನಿಂದ ಹೊಡೆದಿದ್ದ. ಮಗ ಎನ್ನುವ ಕಾರಣಕ್ಕೆ ಹೆತ್ತವರು ಅಂದು ಪೊಲೀಸರಿಗೆ ದೂರು ನೀಡಿರಲಿಲ್ಲ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



