ರಾಜ್ಯದ ವೈಷ್ಣೋದೇವಿ ಯಾತ್ರಿಕರಿಗೆ ₹5000 ಸಹಾಯಧನ
ಬೆಂಗಳೂರು, ಮಾ.20: ರಾಜ್ಯದಿಂದ ಶ್ರೀ ಮತಾ ವ್ಯೆಣೋದೇವಿ ಯಾತ್ರೆ ಕೈಗೊಳ್ಳುವ ಭಕ್ತರಿಗೆ 2026-27ನೇ ಸಾಲಿನಿಂದ ತಲಾ ₹5000 ಸಹಾಯಧನ ನೀಡಲಾಗುವುದು ಎಂದು ಸಾರಿಗೆ ಮತ್ತು ಧಾರ್ಮಿಕ ದತ್ತಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಸಿ.ಏನ್ ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಹಾಯಧನವನ್ನು ಡಿಬಿಟಿ (ನೇರ ಹಣ ವರ್ಗಾವಣೆ) ಮೂಲಕ ವಿತರಿಸಲಾಗುವುದು ಎಂದು ತಿಳಿಸಿದರು. ಯೋಜನೆಗಾಗಿ ಸರ್ಕಾರ ₹5 ಕೋಟಿ ಮೀಸಲಿಟ್ಟಿದೆ ಎಂದರು.
ರಾಜ್ಯದಿಂದ ವಿವಿಧ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವ ಭಕ್ತರಿಗೆ ಈಗಾಗಲೇ ಸಹಾಯಧನ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ವೈಷ್ಣೋದೇವಿ ಯಾತ್ರಾರ್ಥಿಗಳಿಗೂ ಸೌಲಭ್ಯ ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.
