ಚಿತ್ರದುರ್ಗ : ಸೋಶಿಯಲ್ ಮೀಡಿಯಾ, ಫೇಸ್‍ಬುಕ್, ಕೆಲವು ದೃಶ್ಯ ಮಾಧ್ಯಮಗಳಲ್ಲಿ ಮಾಜಿ ಸಚಿವ ಹೆಚ್.ಆಂಜನೇಯರವರನ್ನುತೇಜೋವಧೆ ಮಾಡುತ್ತಿರುವ ಭಾಸ್ಕರ್ ಪ್ರಸಾದ್ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಮಾದಿಗ ಜಾಗೃತಿ ವೇದಿಕೆವತಿಯಿಂದ ಪೊಲೀಸ್ ಉಪಾಧೀಕ್ಷಕರಿಗೆ ಗುರುವಾರ ದೂರು ನೀಡಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಮಾದಿಗ ಜಾಗೃತಿ ವೇದಿಕೆ ಕಾರ್ಯಕರ್ತರು ಒನಕೆ ಒಬವ್ವ ವೃತ್ತದಲ್ಲಿಭಾಸ್ಕರ್ ಪ್ರಸಾದ್‍ರವರ ಫೋಟೋ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜಾತ್ಯತೀತ ನಾಯಕರಾಗಿರುವ ಹೆಚ್.ಆಂಜನೇಯರವರು ಮಾದಿಗ ಸಮುದಾಯವಷ್ಟೆ ಅಲ್ಲ. ಎಲ್ಲಾ ಸಮಾಜದವರ ಜೊತೆ ಉತ್ತಮಒಡನಾಟವಿಟ್ಟುಕೊಂಡಿರುವುದನ್ನು ಸಹಿಸದ ಭಾಸ್ಕರ್ ಪ್ರಸಾದ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೆಚ್.ಆಂಜನೇಯರವರ ಹೆಸರನ್ನುದುರಪಯೋಗಪಡಿಸಿಕೊಳ್ಳುತ್ತಿರುವುದು ಮಾದಿಗರಿಗೆ ಅತೀವ ನೋವುಂಟಾಗಿದೆ. ಒಳ ಮೀಸಲಾತಿ ಹೋರಾಟದಲ್ಲಿ ಇತ್ತೀಚೆಗೆಕಾಣಿಸಿಕೊಳ್ಳುತ್ತಿರುವ ಭಾಸ್ಕರ್ ಪ್ರಸಾದ್ ಕಳೆದ ಮೂರು ನಾಲ್ಕು ದಶಕಗಳಿಂದ ಎಲ್ಲಿ ಹೋಗಿದ್ದರೂ ಕೂಡಲೆ ಕ್ಷಮೆ ಕೇಳಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಿಯಾದರೂ ಕಂಡರೆ ಘೇರಾವ್ ಹಾಕಲಾಗುವುದೆಂದು ಮಾದಿಗ ಜಾಗೃತಿ ವೇದಿಕೆ ಎಚ್ಚರಿಸಿದೆ.ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ಕುಮಾರಸ್ವಾಮಿ, ಅಣ್ಣಪ್ಪ ಮದಕರಿಪುರ, ಕಿರಣ್‍ಕುಮಾರ್ ಕುರುಬರಹಳ್ಳಿ,ಹೆಚ್.ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಶೇಖರಪ್ಪ,ರಾಮಣ್ಣ, ರಘು ಇಂಗಳದಾಳ್, ಅಂಜಿನಮೂರ್ತಿ ಇನ್ನು ಅನೇಕರುಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



