Browsing: On

ವಾಷಿಂಗ್ಟನ್: ಒಂದೊಮ್ಮೆ ಭಾರತವು ರಷ್ಯಾದಿಂದ ತೈಲ ಆಮದು ಮುಂದುವರೆಸಿದರೆ ಮತ್ತಷ್ಟು ಸುಂಕ ಕಟ್ಟಬೇಕಾಗುತ್ತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್  ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾದನಂತರರಷ್ಯಾದತೈಲದಅತಿದೊಡ್ಡಖರೀದಿದಾರಎಂದುಕರೆದಿದ್ದಾರೆ.ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಇನ್ನೂ ಹಂತ-2 ಮತ್ತು ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಚೀನಾದ ಮೇಲಿನ ಹೆಚ್ಚುವರಿ ಸುಂಕಗಳನ್ನು ಅಮೆರಿಕ ನವೆಂಬರ್ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೂ, ಭಾರತವು ಭಾರೀ ಸುಂಕಗಳಿಂದ ಹಾನಿಗೊಳಗಾಗಿದೆ.ಈ ತಿಂಗಳ ಆರಂಭದಲ್ಲಿ ಶೇ. 25 ರಷ್ಟು ಸುಂಕವನ್ನು ವಿಧಿಸಲಾಯಿತು ಮತ್ತು ಆಗಸ್ಟ್ 27 ರಂದು ಹೆಚ್ಚುವರಿಯಾಗಿ ಶೇ.25ರಷ್ಟು ದ್ವಿತೀಯ ನಿರ್ಬಂಧ ಜಾರಿಗೆ ಬಂದಿದ್ದು, ಭಾರತೀಯ ಸರಕುಗಳ ಮೇಲಿನ ಒಟ್ಟು ಸುಂಕವು ಶೇ.50ಕ್ಕೆ ತಲುಪಿದೆ.ಆದರೆ ಅಮೆರಿಕ ಭಾರತದ ಮೇಲೆ ವಿಧಿಸಿರುವ ಸುಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತಲೆ ಕೆಡಿಸಿಕೊಂಡಿಲ್ಲ. ತಮ್ಮ ರೈತರ ಸುರಕ್ಷತೆಯೇ ತನಗೆ ಮುಖ್ಯ ಅವರನ್ನು ಉಳಿಸಿಕೊಳ್ಳಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಹೇಳಿದ್ದರು. ಅಮೆರಿಕ ಇಲ್ಲದಿದ್ದರೆ ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಸಾಯುತ್ತಿದ್ದವು, ತಾವು ತುಂಬಾ ಬಲಶಾಲಿಯಾಗಿದ್ದು, ನಮ್ಮದು ಬಹಳ ದೊಡ್ಡದಾದ ರಾಷ್ಟ್ರ. ನಾನು ಮೊದಲ ನಾಲ್ಕು ವರ್ಷಗಳಲ್ಲಿ  ನಿಜವಾಗಿಯೂ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಹಸ ಮಾಡಿದ್ದೇನೆ. ನಂತರ ಬೈಡನ್​ ಆಡಳಿತದಲ್ಲಿ ಯುಎಸ್​ ಅವನತಿ ಹೊಂದಲು ಪ್ರಾರಂಭಿಸಿತು.ಇದಾದ ಬಳಿಕ ನಾನು ಆಡಳಿತಲ್ಲಿ ನಾನುಅಂದುಕೊಂಡ ಮಟ್ಟಕ್ಕೆ ಅದನ್ನು ಕೊಂಡೊಯ್ದಿದ್ದೇನೆ. ನಾವು ತುಂಬಾ  ಉತ್ಸಾಹಿಗಳು,ಸುಂಕಗಳು ಮತ್ತು ಇತರ ಮೂಲಕ ಬರುವ ಹಣವು ನಮಗೆ ತುಂಬಾ ದೊಡ್ಡದು ಎಂದಿದ್ದಾರೆ.ನಾವು ಭಾರತದೊಂದಿಗೆ ಹೊಂದಿಕೊಳ್ಳುತ್ತೇವೆ ಆದರೆ, ಭಾರತ ಹಲವು ವರ್ಷಗಳಿಂದ ಅದು ಏಕಪಕ್ಷೀಯ ಸಂಬಂಧವಾಗಿತ್ತು.ಹಾಗೇ ಇದು ನಮ್ಮಿಂದ ಅಗಾಧ ಸುಂಕವನ್ನು ವಿಧಿಸುತ್ತಿತ್ತು. ಆದರಿಂದ ನಾವು ಭಾರತದೊಂದಿಗೆ ವ್ಯಾಪಾರ ಮಾಡುತ್ತಿರಲಿಲ್ಲ. ಆದರೆ ಅವರು ನಮ್ಮೊಂದಿಗೆ ವ್ಯಾಪಾರ ಮಾಡುತ್ತಿದ್ದರು ಎಂದಿದ್ದಾರೆ.

ಶ್ರೀನಗರ: ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ಇಂದು ಬುಡ್ಗಾಮ್ ಜಿಲ್ಲೆಯ ಶಾರದಾ ಭವಾನಿ ದೇವಾಲಯ ಮತ್ತೆ ಪುನರಾರಂಭವಾಗಿದ್ದು ಕಾಶ್ಮೀರಿ ಪಂಡಿತ ಸಮುದಾಯ ಮತ್ತು ಸ್ಥಳೀಯ ಮುಸ್ಲಿಂ…

ಬೆಂಗಳೂರು: ಗಣಪತಿ ಮೆರವಣಿಗೆ ವೇಳೆ ನಡೆದ ಸ್ಫೋಟದಲ್ಲಿ 10ನೇ ತರಗತಿ ವಿದ್ಯಾರ್ಥಿ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡ ಘಟನೆ ನಡೆದ ಒಂದು ದಿನದ ನಂತರ ಗಣೇಶ ಮೂರ್ತಿ…

ಬೆಂಗಳೂರು: ಬಸ್ಸು, ವಿದ್ಯುತ್‌, ನೀರು, ಹಾಲು ಮೆಟ್ರೋ ದರ ಸೇರಿದಂತೆ ವಿವಿಧ ದರ ಹೆಚ್ಚಳ ಮಾಡಿದ ಸಿಎಂ ಸಿದ್ದರಾಮಯ್ಯ ಸರ್ಕಾರ ಮತ್ತೆ ಬಿಗ್ ಶಾಕ್ ನೀಡಿದ್ದು ಇಂದಿನಿಂದಲೇ…

‘ಅರಸನಾದರೇನು ತಾಯಿಗೆ ಮಗನೆ’ ಎಂಬ ಮಾತಿದೆ. ಅಂತೆಯೇ ಎಂಥಹಾ ಸ್ಟಾರ್ ನಟನಾರದೇನು, ಅಮ್ಮನ ಎದುರು ಮಂಡಿ ಊರದೇ ಇರಲಾರರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸುದೀಪ್ ಅವರ…

ಬೆಂಗಳೂರು : ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಜನರು ಹೆಲ್ಮೆಟ್ ಧರಿಸದೇ ಸಾವನ್ನಪ್ಪುತ್ತಿದ್ದಾರೆ. ಇದೀಗ ಈ ಸಾವುಗಳನ್ನು ತಡೆಯಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಹಲವು ಪ್ರಯತ್ನಗಳನ್ನು…

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 31 ಹಾಗೂ ಸೆಪ್ಟಂಬರ್ 14ರಂದು ನಗರದ ಹಲವು ಪ್ರದೇಶಗಳಲ್ಲಿಮದ್ಯಮಾರಾಟನಿಷೇಧಿಸಿಆದೇಶಹೊರಡಿಸಲಾಗಿದೆ.ಬೆಂಗಳೂರು ನಗರ ಪೊಲೀಸ್…

ಬೆಳ್ತಂಗಡಿ: ಧರ್ಮಸ್ಥಳ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ನಿನ್ನೆ ವಿಶೇಷ ತನಿಖಾ ತಂಡದ ಅಧಿಕಾರಿಗಳಮುಂದೆವಿಚಾರಣೆಗೆಹಾಜರಾದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, SIT ಕಚೇರಿ ಮೆಟ್ಟಿಲು…

ನಟ ವಿಶಾಲ್ ಅವರಿಗಿಂದು ಡಬಲ್ ಧಮಾಕ. ನಟ ಇಂದು 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ನಟಿ ಸಾಯಿ ಧನ್ಶಿಕಾ ಅವರೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಆಪ್ತ ಸ್ನೇಹಿತರು ಮತ್ತು ಕುಟುಂಬದ…

‘ಸು ಫ್ರಮ್ ಸೋ’ ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ಎಲ್ಲ ಕಡೆಗಳಲ್ಲೂ ಫೇಮಸ್ ಆಗಿದ್ದಾರೆ. ಈ ಮೊದಲು ಅವರು ಮಾಡುತ್ತಿದ್ದ ಚಿತ್ರಗಳು ಕನ್ನಡದಲ್ಲಿ ಮಾತ್ರ ಗಮನ…