ಟಿ20 ವಿಶ್ವಕಪ್ ಗೆದ್ದ ನಾಯಕ ಸೂರ್ಯ ಉಡುಪಿ ಅಳಿಯ ತಂಡದ ಗೆಲುವಿಗೆ ಹರಕೆ ಹೊತ್ತಿದ್ದ ಪತ್ನಿ ದೇವಿಶಾ
ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್‌ಯಾದವ್ ಉಡುಪಿಯ ಅಳಿಯ, ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಕಾಪುವಿನವರು.
ದೇವಿಶಾ ಮನೆಯವರು ಕಾಪು ಅಮ್ಮನ ಭಕ್ತರು. ದೇವಿಶಾ ಮತ್ತು ಸೂರ್ಯಮದುವೆ’ ಬಳಿಕ ಕಾಪುವಿಗೆ 2 ಬಾರಿ ಬಂದು ಅಮ್ಮನ ದರ್ಶನ ಪಡೆದಿದ್ದರು. ಅವರ ಯಶಸ್ಸಿಗೆ ಅಮ್ಮನ ಆಶೀರ್ವಾದವೇ ಕಾರಣ ಎಂದು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ, ಸೂರ್ಯಕುಮಾರ್‌ಮತ್ತು ದೇವಿಶಾ ಆಗ ಜೀರ್ಣೋದ್ಧಾರಗೊಳ್ಳುತ್ತಿದ್ದ ಮಾರಿ ಯಮ್ಮನ ಗುಡಿಗೆ ಭೇಟಿ ನೀಡಿದ್ದು, ಕಲಾತ್ಮಕ ಕಂಬದವೆಚ್ಚಕ 25 ಲಕ್ಷ ದೇಣಿಗೆಯಾಗಿ ನೀಡಿದ್ದರು. ಆ ವೇಳೆ ಪ್ರಾರ್ಥನೆ ಮಾಡಿದ್ದ ಗುಡಿಯ ಅರ್ಚಕರು, ಸೂರ್ಯಕುಮಾರ್ ತಂಡದ ನಾಯಕನಾಗಲಿ ಎಂದು ಹಾರೈಸಿದ್ದರು. ಅದಾಗಿ 9 ದಿನಗಳಲ್ಲಿ, ತಂಡದ ಕ್ಯಾಪ್ಟನ್ ಆಗಿ ಘೋಷಣೆಯಾಗಿದ್ದರು.ದೇವಿಶಾಟಿ20 ಟೂರ್ನಿಆರಂಭಕ್ಕೆಮೊದಲುಇಲ್ಲಿಗೆ ಬಂದಿದ್ದರು. ಬೆಲ್ಲ ಮತ್ತು ಸಕ್ಕರೆ ತುಲಾಭಾರ ನಡೆಸುವುದಾಗಿ ಸಂಕಲ್ಪಿಸಿದ್ದರು. ಹೀಗಾಗಿ, ಸದ್ಯದಲ್ಲಿ ದಂಪತಿ ಮಾರಿಗುಡಿಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.
