ಬೇಸಿಗೆಯಲ್ಲಿ ಅತಿಯಾದ ಉಷ್ಣತೆಯಿಂದ ಪಾರಾಗಲು ಹೆಚ್ಚಿನ ಜನರು ಹೋಗಿ ತಂಪು ಪಾನೀಯ, ಫ್ರಿಡ್ಜ್ ನಲ್ಲಿ ಇಟ್ಟಿರುವ ಐಸ್ ಕ್ರೀಮ್ ಇತ್ಯಾದಿಗಳನ್ನು ಸೇವನೆ ಮಾಡುವರು. ಆದರೆ ಇದರಿಂದ ಕೆಲವರಿಗೆ ಗಂಟಲು ನೋವಿನ ಸಮಸ್ಯೆಯು ಕಾಡುವುದು ಇದೆ. ಕೆಲವೊಮ್ಮೆ ನೀರು ಕಲುಷಿತವಾಗಿದ್ದರೆ ಅಥವಾ ಅದರಲ್ಲಿ ಬ್ಯಾಕ್ಟೀರಿಯಾಗಳು ಇದ್ದರೆ ಆಗ ಅದರಿಂದ ಗಂಟಲು ನೋವಿನ ಸಮಸ್ಯೆಯು ಕಾಡಬಹುದು. ಇದಕ್ಕಾಗಿ ವೈದ್ಯರಲ್ಲಿಗೆ ಹೋಗುವ ಬದಲು ಮನೆಯಲ್ಲೇ ಕೆಲವು ಮನೆಮದ್ದುಗಳನ್ನು ಬಳಸಿಕೊಂಡರೆ ಆಗ ಅದು ತುಂಬಾ ಪರಿಣಾಮಕಾರಿ ಆಗಿರುವುದು. ಅದು ಹೇಗೆ ಎಂದು ತಿಳಿದುಕೊಳ್ಳಿ.
ಗಂಟಲು ನೋವಿನ ಲಕ್ಷಣಗಳು
ಗಂಟಲು ನೋವಿನ ಸಮಸ್ಯೆಯು ವಿವಿಧ ಕಾರಣಗಳಿಂದ ಬರಬಹುದು. ಗಂಟಲು ನೋವು ಕಾಣಿಸಿಕೊಂಡರೆ ಆಗ ಇದರಿಂದ ಆಹಾರ ನುಂಗುವಾಗ ನೋವಾಗುವುದು ಮತ್ತು ಗಂಟಲಿನಲ್ಲಿ ಕಿರಿಕಿರಿ, ಮಾತನಾಡಲು ಕಷ್ಟವಾಗಬಹುದು, ಊದಿಕೊಂಡು ಗ್ರಂಥಿಗಳ ಸಮಸ್ಯೆಯು ಕಾಡಬಹುದು. ಕೆಮ್ಮಿನ ಸಮಸ್ಯೆಯು ಇದ್ದರೂ ಇದು ಬರಬಹುದು.ಗಂಟಲು ನೋವಿನ ಸಮಸ್ಯೆಯಿದ್ದರೆ ಆಗ ತಕ್ಷಣವೇ ಇದಕ್ಕೆ ಕೆಲವು ಮನೆಮದ್ದುಗಳನ್ನು ಬಳಸಬಹುದು. ಮನೆಮದ್ದುಗಳು ಗಂಟಲು ನೋವಿನಿಂದ ಪರಿಹಾರ ನೀಡುವುದು. ಇಲ್ಲಿ ಕೆಲವು ಪರಿಣಾಮಕಾರಿ ಮನೆಮದ್ದುಗಳು ಇವೆ.ಗಂಟಲು ನೋವಿಗೆ ಅರಶಿನವನ್ನು ಹಿಂದಿನಿಂದಲೂ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಇದು ಗಂಟಲಿಗೆ ಶಮನ ನೀಡಿ, ನೋವು ಕಡಿಮೆ ಮಾಡುವುದು ಹಾಗೂ ಶೀತದ ಲಕ್ಷಣಗಳನ್ನು ಕಡಿಮೆ ಮಾಡುವುದು.
ತಯಾರಿಸುವ ವಿಧಾನ
ಒಂದು ಲೋಟ ಹಾಲಿಗೆ ಕಾಲು ಚಮಚದಷ್ಟು ಅರಶಿನ ಹಾಕಿ ಕುದಿಸಿ. ಬಿಸಿಯಾಗಿರುವಾಗಲೇ ಇದನ್ನು ಕುಡಿದರೆ ಆಗ ಇದರಿಂದ ಗಂಟಲಿಗೆ ಶಮನ ಸಿಗುವುದು ಮತ್ತು ಇದಕ್ಕೆ ಶುಂಠಿ ಮತ್ತು ಜೇನುತುಪ್ಪ ಹಾಕಿಕೊಂಡು ಕುಡಿದರೆ ಆಗ ಇನ್ನಷ್ಟು ಲಾಭಕಾರಿ. ನೋವು ಕಡಿಮೆ ಇದ್ದರೆ ಒಂದು ಸಲ ಕುಡಿಯಿರಿ ಮತ್ತು ತೀವ್ರವಾಗಿದ್ದರೆ ದಿನದಲ್ಲಿ ಎರಡು ಸಲ ಕುಡಿಯಿರಿ.ತುಂಬಾ ಪರಿಣಾಮಕಾರಿ ಮತ್ತು ನೈಸರ್ಗಿಕ ವಿಧಾನದಿಂದ ನೋವು ನಿವಾರಣೆ ಮಾಡುವ ವಿಧಾನವೆಂದರೆ ಅದು ಶುಂಠಿ ಚಾ.
ತಯಾರಿಸುವ ವಿಧಾನ
ಸಾಮಾನ್ಯ ಚಾದಂತೆ ಇದನ್ನು ಕೂಡ ತಯಾರಿಸಬೇಕು. ತಾಜಾ ಶುಂಠಿಯನ್ನು ತುರಿದುಕೊಂಡು ಚಾಗೆ ಹಾಕಿ ಕುದಿಸಬೇಕು. ಇದನ್ನು ಒಂದು ಮಿತಿಯಲ್ಲಿ ಹಾಕಿಕೊಂಡು ಕುಡಿಯಿರಿ. ಬಿಸಿಯಾಗಿರುವಾಗಲೇ ಕುಡಿದರೆ ಒಳ್ಳೆಯ ಪರಿಣಾಮ ಬೀರುವುದು. ಕರಿಮೆಣಸಿನ ಕಾಳುಗಳನ್ನು ಇದಕ್ಕೆ ಜಜ್ಜಿಕೊಂಡು ಹಾಕಿದರೆ ಒಳ್ಳೆಯದು. ಇದರಿಂದ ಚಾ ಸ್ವಲ್ಪ ಖಾರ ಕೂಡ ಆಗಬಹುದು.ತುಳಸಿಯಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳು ಇವೆ ಎನ್ನುವುದು ತಿಳಿದೇ ಇದೆ. ಇದನ್ನು ಹಲವಾರು ಬಗೆಯ ಮನೆಮದ್ದುಗಳಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಕೆಮ್ಮು, ಕಫ ಕಟ್ಟುವಿಕೆ, ಶೀತ ಇತ್ಯಾದಿಗಳಿಗೆ ಇದು ಒಳ್ಳೆಯದು.
ತಯಾರಿಸುವ ವಿಧಾನ
ತುಳಸಿ ಕಷಾಯ ತಯಾರಿಸಲು ಒಂದು ಲೋಟ ನೀರಿಗೆ ಸ್ವಲ್ಪ ತುಳಸಿ ಎಲೆಗಳನ್ನು ಹಾಕಿ ಕುದಿಸಿ. ಇದಕ್ಕೆ ಕರಿಮೆಣಸಿನ ಕಾಳು, ಉಪ್ಪು ಮತ್ತು ಶುಂಠಿ ಕೂಡ ಹಾಕಿ. ಇದನ್ನು ಹಾಗೆ ಕುದಿಸಿ ಮತ್ತು ಶೋಧಿಸಿ. ಬಿಸಿಯಾಗಿರುವಾಗಲೇ ಇದನ್ನು ಕುಡಿಯಿರಿ. ಇದರಿಂದ ಗಂಟಲಿನ ನೋವು ಶಮನ ಆಗುವುದು. ನೀರು ಅರ್ಧಕ್ಕೆ ಬರುವ ತನಕ ಇದನ್ನು ಕುದಿಸಿ ಮತ್ತು ಇದರ ಬಳಿಕ ಬಿಸಿ ಬಿಸಿಯಾಗಿ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







