ಚಿತ್ರದುರ್ಗ: ಕರ್ನಾಟಕದ ಹೆಮ್ಮೆಯ ಹಾಗೂ ದೇಶ ವಿದೇಶಗಳ ಸುದ್ದಿಯನ್ನು ಅತೀ ವೇಗವಾಗಿ ಓದುಗರ ಕೈ ಸೇರುವ ಟೈಮ್ಸ್ ಆಫ್ ಬಯಲುಸೀಮೆಯ ಪತ್ರಿಕೆಯನ್ನು ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ನಗರದ ಜಿಲ್ಲಾ ಪಂಚಾಯತ್ ನಲ್ಲಿ ಪತ್ರಿಕೆ ಬಿಡುಗಡೆ ಮಾಡಲಾಯಿತು. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಶಾಸಕ ಕೆ. ಸಿ ವೀರೇಂದ್ರ ಪಪ್ಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರೂ, ಜಿಲ್ಲಾ ಪಂಚಾಯತ್ ಸಿಇಒ ಆಕಾಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್, ಪತ್ರಿಕೆಯ ಮುಖ್ಯಸ್ಥ ವೀರೇಂದ್ರ ಅವರು ಪತ್ರಿಕೆಯ ಮೊದಲ ಪ್ರತಿಯನ್ನು ಅನಾವರಣ ಮಾಡಿದರು.
ಟೈಮ್ಸ್ ಆಫ್ ಬಯಲುಸೀಮೆ ಪತ್ರಿಕೆಯು ಅತ್ಯಂತ ವಿಶ್ವಾರ್ಹ ಹಾಗೂ ಓದುಗರ ಭರವಸೆಯ ಪತ್ರಿಕೆಯಾಗಿ ಹೊರಹೊಮ್ಮಲಿದ್ದು, ಪತ್ರಿಕೆ ಬಿಡುಗಡೆಗೆ ಮುನ್ನವೇ ಟೈಮ್ಸ್ ಆಫ್ ಬಯಲುಸೀಮೆ ಎಂಬ ವೆಬ್ ಸೈಟ್ ಸಹ ಈಗಾಗಲೇ ಓದುಗರ ನೆಚ್ಚಿನ ಸುದ್ದಿ ತಾಣವಾಗಿದೆ. ರಾಜ್ಯ, ದೇಶ, ಸ್ಥಳೀಯ ಸುದ್ದಿಗಳನ್ನು ಶರವೇಗದಲ್ಲಿ ಅಂಗೈನಲ್ಲಿ ನೀಡುತ್ತಾ ಬಂದಿದ್ದು, ಈಗ ವೆಬ್ ಸೈಟ್ ಜೊತೆಗೆ ಪತ್ರಿಕೆಯು ಬಿಡುಗಡೆ ಆಗಿದ್ದು, ಮತ್ತಷ್ಟು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಓದುಗರ ಸದಭಿರುಚಿಯ ಸುದ್ದಿಯ ಜೊತೆಗೆ ಯಾರ ಹಂಗಿಲ್ಲದೆ ಪತ್ರಿಕೋದ್ಯಮದ ತತ್ವ ಸಿದ್ಧಾಂತಗಳನ್ನು ತಪ್ಪದೆ ಪಾಲಿಸಿಕೊಂಡು ಜನರಿಗೆ ಸುದ್ದಿಗಳನ್ನು ತಲುಪಿಸುವಲ್ಲಿ ನಾವು ಹಗಲಿರುಳು ಶ್ರಮಿಸುತ್ತೇವೆ ಎಂಬ ಭರವಸೆ ನೀಡುತ್ತೇವೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







