ಬೆಂಗಳೂರು, ಆ.೧೩: ಟಿಪ್ಪು ಸುಲ್ತಾನ್ರನ್ನು ಒಬ್ಬ ಮುಸ್ಲಿಮರನ್ನಾಗಿಯೂ ಅಥವಾ ಹಿಂದೂವನ್ನಾಗಿ ನೋಡಬೇಕಿಲ್ಲ. ಅವರನ್ನು ಯಾರಾದರೂ ಭಾರತೀಯ ಅಲ್ಲ ಎಂದರೆ ಅಂತಹ ಅಯೋಗ್ಯರೂ ಯಾರೂ ಇಲ್ಲ. ಟಿಪ್ಪು ಧರ್ಮಾತೀತವಾಗಿಯೂ ಅಪ್ಪಟ ಭಾರತೀಯ ಎಂದು ಹಿರಿಯ ಪತ್ರಕರ್ತ ಟಿ.ಗುರುರಾಜ್ ಅಭಿಪ್ರಾಯಪಟ್ಟಿದ್ದಾರೆ.ಬುಧವಾರ ನಗರದ ಕೆಎಂಡಿಸಿ ಸಭಾಂಗಣದಲ್ಲಿ ‘ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ’ದ ವತಿಯಿಂದ ಆಯೋಜಿಸಿದ್ದ ‘ಕನಸುಗಾರ ಟಿಪ್ಪು’ ನಾಟಕ ಪ್ರದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇತ್ತೀಚಿಗೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಕೆಆರ್ಎಸ್ ಅಣೆಕಟ್ಟೆಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದು ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದು ಎಂದು ಹೇಳಿದ್ದರೇ ಹೊರತು. ಟಿಪ್ಪು ಸುಲ್ತಾನ್ ಕೆಆರ್ಎಸ್ ನಿರ್ಮಾಣ ಮಾಡಿದ್ದು ಎಂದು ಹೇಳಿರಲಿಲ್ಲ. ಆದರೆ, ಡಾ. ಎಚ್.ಸಿ. ಮಹದೇವಪ್ಪ ಅವರು ಹೇಳಿದ ಮಾತನ್ನು ಯಾರಿಗೂ ಅರಗಿಸಿಕೊಳ್ಳಲು ಆಗಲಿಲ್ಲ. ಅನಗತ್ಯವಾಗ ಪ್ರಚಾರಗಳನ್ನು ಮಾಡಿದರು ಎಂದು ಹೇಳಿದರು.ರೈತರಿಗೆ ಉಪಯುಕ್ತವಾಗಬೇಕೆಂದು, ಕಾವೇರಿ ನದಿಗೆ ಸಣ್ಣ ತಡೆಗೋಟೆಯನ್ನು ಕಟ್ಟಬೇಕು ಎಂದು ಟಿಪ್ಪು ಸುಲ್ತಾನ್ ಸಂಕಲ್ಪ ಹೊಂದಿದ್ದರು. ಕೆಆರ್ಎಸ್ನ ಕ್ರೆಡಿಟ್ನ್ನು ಟಿಪ್ಪು ಸುಲ್ತಾನ್ ಅವರಿಗೆ ಕೊಡಲಾಗುತ್ತಿದೆ ಎಂದು ಇವತ್ತು ಅನೇಕ ಜನರು ಹೇಳುತ್ತಿದ್ದಾರೆ. ಆದರೆ ಒಬ್ಬ ಮುಸ್ಲಿಂ ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಲು ಅಡಿಗಲ್ಲು ಹಾಕಿದರೆ ಮತ್ತೊಬ್ಬ ಮುಸ್ಲಿಮ್ ದಿವಾನ ಸರ್.ಮಿರ್ಜಾ ಇಸ್ಮಾಯಿಲ್ ಆ ಅಣೆಕಟ್ಟೆಯನ್ನು ಪೂರ್ಣಗೊಳಿಸುತ್ತಾರೆ. ಮುಸ್ಲಿಮರ ಕೊಡುಗೆಯನ್ನು ಬೇಡ ಎಂದು ಹೇಳುವುದು ಅಸಾಧ್ಯ. ಇತಿಹಾಸ ಎಲ್ಲರ ಮಾತನ್ನು ತಿರಸ್ಕರಿಸುತ್ತದೆ ಎಂದು ಅವರು ತಿಳಿಸಿದರು. .
ಟಿಪ್ಪು ಸುಲ್ತಾನ್ರನ್ನು ಹಿಂದೂ ದ್ರೋಹಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ರಾಜಕಾರಣಿಗಳು ಸುಳ್ಳು ಹೇಳುತ್ತಾರೆ. ಆದರೆ ಟಿಪ್ಪುವಿನಿಂದ ಹಾನಿಯಾದ ಒಂದೇ ಒಂದು ದೇವಾಲಯದ ನಿರ್ದಶನವನ್ನು ದಾಖಲೆ ಸಮೇತ ಕೊಡಲು ಯಾರಿಗೂ ಆಗಿಲ್ಲ. ಶೃಂಗೇರಿಯ ಮಠದ ಮೇಲೆ ನಡೆದ ದಾಳಿಯಲ್ಲಿ ಶಾರದೆಯ ಮೂರ್ತಿಯನ್ನು ಕಿತ್ತು ಬಿಸಾಡಿದಾಗ ತೃತೀಯ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರಿಗೆ ಸಹಾಯ ಮಾಡಿದವರು ಟಿಪ್ಪು ಸುಲ್ತಾನ್ ಎಂದು ನೆನಪು ಮಾಡಿಕೊಂಡರು.ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಅಧ್ಯಕ್ಷ ಡಾ.ನಸೀಮ್ ಅಹ್ಮದ್, ಟಿಪ್ಪು ಪ್ರಚಾರ ಸಮಿತಿಯ ಉಪಾಧ್ಯಕ್ಷ ಶಫೀವುಲ್ಲಾ, ನಾಟಕ ನಿರ್ದೇಶಕ ದಿಲೀಪ್.ಆರ್ ಮತ್ತಿತರರು ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







