ಚಿತ್ರದುರ್ಗ: ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಹೋರಾಟಗಳು ಈಗ ನಡೆಯುತ್ತಿರುವ ಹೋರಾಟಗಳಿಗೆ ಅಜಗಜಾಂತರ ವ್ಯತ್ಯಾಸ ಇದೆ ಅಂದು ಬದ್ದತೆಯಿಂದ ಹೋರಾಟವನ್ನು ಮಾಡುತ್ತಿದ್ದರು ಆದರೆ ಇಂದು ಹೋರಾಟ ಮಾಡಬೇಕಲ್ಲ ಎಂದು ಹೋರಾಟವನ್ನು ಮಾಡಲಾಗುತ್ತಿದೆಎಂದು ಕಾಂಗ್ರೆಸ್‍ನ ಕಾರ್ಮಿಕ ವಿಭಾಗ ಹಾಗೂ ಆದಿ ಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ತಿಳಿಸಿದರು.ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಮೂವ್ ಮೆಂಟ್ ಚಳುವಳಿಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತವನ್ನು ಆಳುತ್ತಿದ್ದ ಬ್ರಿಟಿಷರನ್ನು ಭಾರತ ಬಿಟ್ಟು ಹೋಡಿಸಬೇಕೆಂದು ಅಂದಿನಹಲವಾರು ನಾಯಕರು ಮುಖಂಡರು, ಹೋರಾಟಗಾರರು ಈ ಚಳುವಳಿಯನ್ನು ರೂಪಿಸಿದರು, ಅದರ ಪರಿಣಾಮ ಅಂದು ಬ್ರಿಟಿಷರನ್ನುನಮ್ಮ ದೇಶದಿಂದ ಹೊರಗೆ ಓಡಿಸಲು ಮುನ್ನುಡಿಯಾಯಿತು. ಅಂದು ಎಲ್ಲರು ಸಹಾ ಇದಕ್ಕೆ ಕೈಜೋಡಿಸಿ ಉತ್ತಮವಾದಹೋರಾಟವನ್ನು ಮಾಡುವುದರ ಮೂಲಕ ದೇಶದಲ್ಲಿನ ಬ್ರಿಟಿಷರನ್ನು ನಮ್ಮ ದೇಶದಿಂದ ಹೊರಗೆ ಹಾಕಲು ಪ್ರಾರಂಭವಾಯಿತುಎಂದರು.
ಅಂದಿನ ದಿನಮಾನದಲ್ಲಿ ನಡೆಯುವ ಯಾವ ಚಳುವಳಿಗಳಾದರು ಸಹಾ ಬದ್ದತೆಯಿಂದ ನಡೆಯುತ್ತಿದ್ದವೂ ಯಾವುದು ಸಹಾ
ಕಾಟಾಚಾರಕ್ಕೆ ನಡೆಯುವ ಚಳುವಳಿಗಳಾಗಿರಲಿಲ್ಲ, ಯಾರೇ ಹೋರಾಟಕ್ಕೆ ಕರೆ ನೀಡಿದರು. ಸಹಾ ದೇಶದಲ್ಲಿ ಉತ್ತಮವಾದ
ಜವಾಬ್ದಾರಿಯುತವಾದ ಹೋರಾಟಗಳು ನಡೆಯುತ್ತಿದ್ದವು ಈ ರೀತಿಯಾದ ಹೋರಾಟಗಳನ್ನು ನಾವುಗಳು ಕಂಡಿಲ್ಲ ಆದರೆ
ಪುಸ್ತಕದಲ್ಲಿ ಓದಿಕೊಂಡು ತಿಳಿಯಲಾಗಿದೆ, ಇದನ್ನೇ ಸಿನಿಮಾ ಸಹಾ ಮಾಡಲಾಗಿದೆ. ಅಂದಿನ ಹೋರಾಟ ಎಂದರೆ ಯಾರೂ ಸಹಾಎದೆಗುಂದದೆ ಹೋರಾಟಕ್ಕೆ ಎದೆ ಒಡ್ಡುವುದರ ಮೂಲಕ ತನ್ನ ಜೀವದ ಹಂಗನ್ನು ತೊರೆದು ಹೋರಾಟವನ್ನು ಮಾಡುತ್ತಿದ್ದರು ಆದರೆಇಂದಿನ ದಿನಮಾನದಲ್ಲಿ ಹೋರಾಟ ಎಂದರೆ ಸಾಕು ಯಾರು ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಕೇತಿಕವಾದಚಳುವಳಿಗಳಾಗುತ್ತಿವೆ. ಅಂದು ಹೋರಾಟದ ಮೂಲಕ ಜೈಲಿಗೆ ಹೋಗಲು ತಾಮುಂದೆ ನಾ ಮುಂದೆ ಎನ್ನುತ್ತಿದ್ದ ಕಾಲ ಇತ್ತು ಆದರೆಇಂದು ಜೈಲು ಎಂದರೆ ಸಾಕು ಜನತೆ ಹೋರಾಟದಿಂದ ಹಿಂದೆ ಸರಿಯುತ್ತಾರೆ ಎಂದು ವಿಷಾಧಿಸಿದರು.ಸ್ವಾತಂತ್ರ್ಯ ಚಳುವಳಿಯ ಫಲವಾಗಿ ಇಂದು ನಾವುಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ನಮ್ಮ ಪೂರ್ವಜನರ ಹೋರಾಟದಫಲವನ್ನು ನಾವುಗಳು ಇಂದು ಆಚರಣೆ ಮಾಡುತ್ತಿದ್ದೇವೆ. ರಾಹುಲ್ ಗಾಂಧಿಯವರು ದೇಶದ ಪ್ರಧಾನ ಮಂತ್ರಿಯಾಗುವ ಹಂಬಲಇಲ್ಲ, ಆದರೆ ಕಾಂಗ್ರೆಸ್ ಸಿದ್ದಾಂತವನ್ನು ಬಲಪಡಿಸುವ ಹಂಬಲವನ್ನು ಹೊಂದಿದ್ದಾರೆ. ವಿರೋಧ ಪಕ್ಷದವರು ರಾಹುಲ್ ಇನ್ನೂಮದುವೆಯಾಗಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ ಆದರೆ ಆವರು ದೇಶಕ್ಕಾಗಿ ದೇಶದ ಒಳಿತಿಗಾಗಿ ಕೆಲಸವನ್ನು ಮಾಡುತ್ತಿದ್ದಾರೆ ಇದರಬಗ್ಗೆ ಅರಿವು ಇಲ್ಲದ ಕೆಲವರು ಅವರನ್ನು ಟೀಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ ಅವರು, ಕೆಲವು ಜನತೆ ಸುಳ್ಳನ್ನು ಹೇಳುವುದೆ ತಮ್ಮಕೆಲಸವನ್ನಾಗಿ ಮಾಡಿಕೊಂಡಿದ್ದಾರೆ. ಸುಳ್ಳನ್ನೇ ಹೇಳುವುದೆ ನಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಇಂದಿನ ದಿನದಲ್ಲಿ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಗಾಂಧಿಜೀಯವರ ಮನೆತನದಿಂದ ದೇಶ ಉಳಿದಿದೆ ಎಂದು ಮಂಜುನಾಥ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಓಬಿಸಿ ಘಟಕದ ಅಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಅಂದು ನಡೆದ ಕ್ವಿಟ್ ಇಂಡಿಯಾ ಚಳುವಳಿಯಮಾದರಿಯಲ್ಲಿ ಇಂದು ಅಂತಹದೊಂದು ಚಳುವಳಿಯಾಗಬೇಕಿದೆ ಅಂದು ಬ್ರಟಿಷರೇ ದೇಶವನ್ನು ಬಿಟ್ಟು ಹೋಗಿ ಎಂದು ಹೇಳಲಾಗಿತ್ತುಆದರೆ ಇಂದು ಬಿಜೆಪಿಯವರೇ ಅಧಿಕಾರವನ್ನು ಬಿಟ್ಟು ಹೋಗಿ ಎಂದು ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಯುದ್ದದಸಮಯದಲ್ಲಿ 1 ಲಕ್ಷ ಜನರ ಬಂಧನವಾಯಿತು 10 ಸಾವಿರ ಜನರ ಸಾವಾಯಿತು, ಕ್ವಿಟ್ ಇಂಡಿಯಾವನ್ನು ಈಗ ಹಲವಾರು ಜನಅದನ್ನು ವೈಭವಿಕರಿಸುತ್ತಿದ್ದಾರೆ, ಆದರೆ ಇದರ ಬಗ್ಗೆ ಗೂಗಲ್‍ನಲ್ಲಿ ನೋಡಿದೆ ನಿಜವಾದ ಸತ್ಯ ಗೋತ್ತಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ನಮ್ಮ ಪೂರ್ವಜನರು ಮಾಡಿದಹೋರಾಟದ ಫಲವಾಗಿ ಇಂದು ನಾವುಗಳು ಅದನ್ನು ಅನುಭವಿಸುತ್ತಿದ್ದೇವೆ. ಇದರ ಬಗ್ಗೆ ತಿಳಿದುಕೊಂಡು ಬೇರೆಯವರು ಮಾಡಿದಪ್ರಶ್ನೆಗೆ ಉತ್ತರ ನೀಡುವಂತಾಗಬೇಕಿದೆ. ಬಿಜೆಪಿಯವರು ಸಂವಿಧಾನವನ್ನೇ ಬದಲಾಯಿಸುವ ಹಂತದಲ್ಲಿ ಇದ್ದಾರೆ. ಮುಂದಿನಚುನಾವಣೆಯಲ್ಲಿ ಇವರನ್ನೇ ಬದಲಾಯಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ವಿರೋಧ ಪಕ್ಷದವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳನ್ನು ಹೇಳುವುದರ ಮೂಲಕ ಅದನ್ನೇ ಸತ್ಯ ಎಂದು ಎಲ್ಲರನ್ನು ನಂಬಿಸುತ್ತಿದ್ದಾರೆ ಇದರ ಬಗ್ಗೆಹೋರಾಟವನ್ನು ಮಾಡಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ, ಜಿ.ಪಂ. ಮಾಜಿ ಸದಸ್ಯ ಗಿರಿ ಜಾನಕಲ್,ಆನಂತ್, ಮಂಜುನಾಥ್, ಮುದಸಿರ್, ಖುದ್ದುಸ್, ರಂಗಸ್ವಾಮಿ, ಪೂಜಾರಿ, ಭೂತೇಶ್, ಅಬ್ದುಲ್, ಸುದರ್ಶನ್, ಸೇರಿದಂತೆ ಇತರರುಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



