ಚಿತ್ರದುರ್ಗ : ಮೊಬೈಲ್ ಯುಗದಲ್ಲಿ ಸಾಹಿತ್ಯವೆಂದರೆ ಮೂಗು ಮುರಿಯುವಂತಾಗಿರುವುದರಿಂದ ಸಾಹಿತ್ಯ ಎನ್ನುವುದು ಸವಾಲಾಗಿದೆಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಚಿತ್ರದುರ್ಗ,ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಸಂಯುಕ್ತಾಶ್ರಯದಲ್ಲಿ ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ ಉದ್ಗಾಟಿಸಿ ಮಾತನಾಡಿದರು.ಬರೆಯುವವರು ತುಂಬಾ ಇದ್ದಾರೆ. ಆದರೆ ಓದುವವರು ವಿರಳವಾಗಿರುವುದರಿಂದ ಅಧ್ಯಯನ, ಸೃಜನಶೀಲತೆ ಕೊರತೆಯಿದೆ.ವಿಶ್ವವಿದ್ಯಾನಿಲಯಗಳಲ್ಲಿ ಎಂ.ಎ.ಓದುವ ವಿದ್ಯಾರ್ಥಿಗಳು ಕಡಿಮೆಯಾಗುತ್ತಿದ್ದಾರೆ. ಸಾಹಿತ್ಯ ಬದುಕು ಕಟ್ಟಿಕೊಡಬೇಕು. ವಚನಸಾಹಿತ್ಯ ಪ್ರಸ್ತುತವೆನಿಸುತ್ತದೆ. ಪ್ರತಿಯೊಬ್ಬರಲ್ಲಿಯೂ ಕವಿ ಹೃದಯವಿರುತ್ತದೆ. ಕವನಸಮಾಜಕ್ಕೆ ಸಂದೇಶ ಕೊಡುವಂತಿರಬೇಕೆಂದುತಿಳಿಸಿದರು.
ಕಾಲ್ಪನಿಕ ಜಗತ್ತು ಹೋಗಿ ಲೌಕಿಕ ಜಗತ್ತಿನಲ್ಲಿದ್ದೇವೆ. ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಗಟ್ಟಿ ಬರಹಗಳು ಬೇಕಾಗಿದೆ. ಮೊಬೈಲ್ಎಲ್ಲರ ಮನಸ್ಸನ್ನು ಕದಡುತ್ತಿದೆ. ಪುಸ್ತಕ ಓದುವ ಆಸ್ವಾದಿಸುವವರು ಜಾಸ್ತಿಯಾಗಬೇಕು. ಸೃಜನಶೀಲತೆಯಿಂದ ಮಾನವೀಯಮೌಲ್ಯಕ್ಕೆ ಸ್ಪರ್ಶ ಬರುತ್ತದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಕೆ.ಎಂ.ಶಿವಸ್ವಾಮಿಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಗಡಿಗಳ ನಡುವೆ ಇರುವಭಾಷಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸಾಹಿತ್ಯವನ್ನುಗಟ್ಟಿಗೊಳಿಸಬೇಕಿದೆ. ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರುಜಿಲ್ಲೆಗಳ ಕವಿಗಳು ಒಂದೆಡೆ ಸೇರಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಗುಣಗಾನ ಮಾಡಿದರು.ಕಾವ್ಯ ಸಂಭ್ರಮ-ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದಡಾ.ಕರಿಯಪ್ಪ ಮಾಳಿಗೆ ಕವಿಗಳಿಗೆ ಸಮಕಾಲೀನ ಪ್ರಜ್ಞೆ ಅಗತ್ಯ. ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಪರಿಣಾಮಕಾರಿಯಾಗಿಕಾವ್ಯ ಕಟ್ಟಬೇಕು. ಕವಿತೆ ವಿಷಯವನ್ನು ಹೇಳದೆಸೂಚಕವಾಗಿ ಧ್ವನಿಪೂರ್ಣವಾಗಿ ಕಟ್ಟಿದಾಗ ಸಾರ್ಥಕ ರಚನೆಯಾಗುತ್ತದೆ. ಪ್ರಸ್ತುತಸಂವಿಧಾನದ ಆಶಯಗಳ ನೆಲೆಯಲ್ಲಿ ಕಾವ್ಯವನ್ನು ಕಟ್ಟಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಿದೆ ಎಂದರು.
ಸಹಭಾಳ್ವೆ, ಸೌಹಾರ್ಧತೆ, ಸಾಮರಸ್ಯ, ಮಾನವೀಯ ಮೌಲ್ಯಗಳ ಮೂಲಕ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಾಹಿತ್ಯ
ರೂಪಿಸುವುದು ಬರಹಗಾರರ ಮೇಲಿರುವ ಬಹು ದೊಡ್ಡ ಜವಾಬ್ದಾರಿ. ಭಾಷೆ, ಪರಿಸರ, ಸಂಸ್ಕøತಿ, ಬದುಕಿನ ಸ್ಥಿತ್ಯಂತರ ಆಧುನಿಕತೆಮೊದಲಾದ ವಿಷಯಗಳ ಜೊತೆ ವೈಚಾರಿಕ ಚಿಂತನೆ ಅತಿ ಮುಖ್ಯ ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಅರ್ಥ ಪೂರ್ಣವಾಗಿಮುನ್ನಡೆಯುತ್ತಿದೆ. ಐತಿಹಾಸಿಕ ಚಿತ್ರದುರ್ಗ ಜಿಲ್ಲೆ ಬರದ ನಾಡಾಗಿರಬಹುದು. ಆದರೆ ಸಾಹಿತ್ಯ ಸಂಸ್ಕೃತಿಯಲ್ಲಿ ಅತ್ಯಂತಶ್ರೀಮಂತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶರಣ ಸಾಹಿತ್ಯ ಪರಿಷತ್ತು ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿಶ್ರೀನಿವಾಸ್, ಚಿಕ್ಕಮಗಳೂರು ಐ.ಡಿ.ಎಸ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪುಷ್ಪ ಭಾರತಿಇವರುಗಳು ವೇದಿಕೆಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



