ಚಿತ್ರದುರ್ಗ: ಭೀಮಸಮುದ್ರದಿಂದ ವಿ.ಪಾಳ್ಯ ಮಾರ್ಗ ಹಾಳಾಗಿರುವ ರಸ್ತೆಯನ್ನು ರಿಪೇರಿ ಮಾಡಿಸುವಂತೆ ನಿಡುಮಾಮಿಡೇಶ್ವರಿದೇವಸ್ಥಾನ ಜೀರ್ಣೋದ್ದಾರ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆಮನವಿ ಸಲ್ಲಿಸಲಾಯಿತು.ವಿ.ಪಾಳ್ಯ, ನೆಲ್ಲಿಕಟ್ಟೆ, ಎನ್.ಬಳ್ಳೆಕಟ್ಟೆ, ಮಳಲಿ ಗ್ರಾಮದ ಜನರು ದಿನನಿತ್ಯವು ಸಂಚರಿಸುವಾಗ ಅನೇಕರು ಬಿದ್ದು ಕೈಕಾಲುಗಳಿಗೆಗಾಯ ಮಾಡಿಕೊಂಡಿದ್ದಾರೆ. ನೂರಾರು ಗಣಿ ಲಾರಿಗಳು ಈ ಮಾರ್ಗವಾಗಿ ಚಲಿಸುತ್ತಿರುವುದರಿಂದ ರಸ್ತೆ ಹದಗೆಟ್ಟಿದೆ. ಜಿಂದಾಲ್,ವೇದಾಂತ, ಜಿ.ಎಸ್.ಪಿ.ಎಲ್. ಹಾಗೂ ಇತರೆ ಟ್ರಾನ್ಸ್ಪೋರ್ಟ್ ಗೆ ಸಂಬಂಧಿಸಿದ ಲಾರಿಗಳ ಓಡಾಟವನ್ನು ನಿರ್ಬಂಧಿಸಿ ಮೊದಲುರಸ್ತೆ ಸರಿಪಡಿಸಬೇಕು. ದೊಡ್ಡ ದೊಡ್ಡ ಕಂದಕಗಳಾಗಿರುವುದರಿಂದ ಜನಸಾಮಾನ್ಯರು ಹಾಗೂ ದ್ವಿಚಕ್ರ ವಾಹನ ಸವಾರರುಸಂಚರಿಸುವುದು ಕಷ್ಟವಾಗಿದೆ. ರಸ್ತೆ ಕಾಮಗಾರಿಗಾಗಿ ಟೆಂಡರ್ ಕರೆದು ಒಂದು ವರ್ಷವಾಗಿದ್ದರೂ ಯಾವ ಗುತ್ತಿಗೆದಾರರು ರಸ್ತೆಕೆಲಸಕ್ಕೆ ಮುಂದೆ ಬರುತ್ತಿಲ್ಲ. ಈ ರಸ್ತೆಯನ್ನು ಡಿ.ಎಂ.ಎಫ್. ಫಂಡ್ನಲ್ಲಿ ಸೇರಿಸಿ ಕೂಡಲೆ ದುರಸ್ಥಿಗೊಳಿಸಬೇಕೆಂದು ಪ್ರತಿಭಟನೆಯನೇತೃತ್ವ ವಹಿಸಿದ್ದ ನಿಡುಮಾಮಿಡೇಶ್ವರಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ನವೀನ್ಕುಮಾರ್ ಭೀಮಸಮುದ್ರಒತ್ತಾಯಿಸಿದರು.
ಕಾರ್ಯದರ್ಶಿ ರುದ್ರಸ್ವಾಮಿ, ಖಜಾಂಚಿ ರಾಮಣ್ಣ. ವೆಂಕಟೇಶ, ಕೊಟ್ರಪ್ಪ, ಶಿವಕುಮಾರ್, ಮೂರ್ತಪ್ಪ, ಬೋಜರಾಜು, ಜಗದೀಶ್,ಯಲ್ಲಪ್ಪ, ಗೋವಿಂದರಾಜು, ಕೆಂಚವೀರಪ್ಪ, ಗೌರಮ್ಮ, ನಾಗರಾಜ, ಸುರೇಶ, ದರ್ಶನ್, ಹನುಮಂತ, ಮಂಜುನಾಥ, ಜಿ.ವೆಂಕಟೇಶ,ಗಣೇಶ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







