ಪ್ರಾಣಿ ಹಿಂಸೆ ಮಹಾಪಾಪ ಅನ್ನೋ ಮಾತಿದೆ. ಹೀಗಿದ್ರೂ ಕೂಡ ಅನೇಕರು ಒಂದಲ್ಲಾ ಒಂದು ರೀತಿಯಲ್ಲಿ ಪ್ರಾಣಿಗಳಿಗೆ ಹಿಂಸೆಯನ್ನು ನೀಡುತ್ತಿರುತ್ತಾರೆ. ಹೌದು ಕೆಲವರು ತಮ್ಮ ಹುಚ್ಚಾಟಗಳಿಗಾಗಿ ನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವಂತಹ, ನಾಯಿಗೆ ಮದ್ಯ ಕುಡಿಸಿದಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತಾನು ಬಿಯರ್ ಕುಡಿಯುವುದರ ಜೊತೆಗೆ ಆನೆಗೂ ಬಿಯರ್ ಕುಡಿಸಿದ್ದಾನೆ. ಕೀನ್ಯಾದ ಅಭಯಾರಣ್ಯವೊಂದರಲ್ಲಿ ಸ್ಪ್ಯಾನಿಷ್ ಪ್ರವಾಸಿಗ ಆನೆಯ ಸೊಂಡಿಲಿಗೆ ಬಿಯರ್ ಸುರಿದಿದ್ದು, ಈತನ ಈ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆನೆಯ ಸೊಂಡಿಲಿಗೆ ಬಿಯರ್ ಸುರಿದ ಪ್ರವಾಸಿಗ:
ಬಿಬಿಸಿ ವರದಿಯ ಪ್ರಕಾರ, 2024 ರಲ್ಲಿ ನಡೆದ ಘಟನೆ ಇದಾಗಿದ್ದು, ಕೀನ್ಯಾದ ಲೈಕಿಪಿಯಾದ ಓಲ್ ಜೋಗಿ ಕನ್ಸರ್ವೆನ್ಸಿ ಅಭಯಾರಣ್ಯದಲ್ಲಿ ಸ್ಪ್ಯಾನಿಷ್ ಪ್ರವಾಸಿಗ ಆನೆಯ ಸೊಂಡಿಲಿಗೆ ಬಿಯರ್ ಸುರಿದಿದ್ದಾನೆ. ಈ ವಿಡಿಯೋವನ್ನು ಆ ವ್ಯಕ್ತಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದನು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ವಿಡಿಯೋವನ್ನು ಡಿಲಿಟ್ ಮಾಡಿದ್ದನು. ಆದರೆ ಈ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.ಓಲ್ ಜೋಗಿ ವನ್ಯಜೀವಿ ಸಂರಕ್ಷಣಾಲಯದಲ್ಲಿನ ಬುಪಾ ಹೆಸರಿನ ಆನೆಯ ಸೊಂಡಿಲಿಗೆ ಪ್ರವಾಸಿಗ ಬಿಯರ್ ಸುರಿದಿದ್ದು, ಈ ಬಗ್ಗೆ ಮಾತನಾಡಿದ ಸಂರಕ್ಷಣಾಲಯವು “ನಾವು ಇಂತಹ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ನಮ್ಮ ಆರೈಕೆಯಲ್ಲಿರುವ ಪ್ರಾಣಿಗಳ ಯೋಗಕ್ಷೇಮ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲಿ ಬದ್ಧರಾಗಿದ್ದೇವೆ” ತಿಳಿಸಿದೆ. ಜೊತೆಗೆ ಸಂರಕ್ಷಣಾಲಯವು ಈ ನಡವಳಿಕೆ ಸ್ವೀಕಾರಾರ್ಹವಲ್ಲ, ಇದು ಅಪಾಯಕಾರಿ ಮತ್ತು ನಮ್ಮ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ಹೇಳಿದೆ.ಈ ಕುರಿತ ವಿಡಿಯೋವನ್ನು ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕೀನ್ಯಾದಲ್ಲಿ ಆನೆಗೆ ಬಿಯರ್ ನೀಡಿದ ಸ್ಪ್ಯಾನಿಷ್ ಪ್ರವಾಸಿಗ; ಈ ಘಟನೆಯ ಬಗ್ಗೆ ಕೀನ್ಯಾ ವನ್ಯಜೀವಿ ಸೇವೆ ಮತ್ತು ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊದಲು ಸ್ಪ್ಯಾನಿಷ್ ಪ್ರವಾಸಿಗ ತಾನು ಬಿಯರ್ ಕುಡಿದು, ನಂತರ ಆನೆಯ ಸೊಂಡಿಲಿಗೆ ಉಳಿದ ಬಿಯರ್ ಸುರಿಯುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರವಾಸಿಗನ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







