ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕು ಕೋವೆರಟ್ಟಿ ಗ್ರಾಮದ ತಿಪ್ಪೇಸ್ವಾಮಿ ಹಾಗೂ ಜ್ಯೋತಿ ಎಂಬ ದಂಪತಿಗಳ ಮಗಳಾದವರ್ಷಿತಳನ್ನು ಬರ್ಬರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಕೃತ್ಯ ಮಾಡಿದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಅಪರಾಧಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಗ್ರಹಿಸಲಾಯಿತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಕೊವೇರಟ್ಟಿ ಗ್ರಾಮದ ಮಾದಿಗ ಸಮಾಜದವರಾದ ತಿಪ್ಪೇಸ್ವಾಮಿ ಡಿ ಹಾಗೂ ಜ್ಯೋತಿಇಬ್ಬರು ದಂಪತಿಗಳ ಮಗಳಾದ ವರ್ಷಿತ 19 ವರ್ಷ ವಯಸ್ಸಿನವಳಾದ ಚಿತ್ರದುರ್ಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಈ ಯುವತಿಯನ್ನು ದಾರುಣವಾಗಿ ಮಾನವ ಕುಲವೇ ಬೆಚ್ಚಿ ಬೀಳುವ ರೀತಿಯಲ್ಲಿ ಅತ್ಯಾಚಾರ ಹಾಗೂ ಕೊಲೆ ಮಾಡಿ ದೇಹವನ್ನುಸುಟ್ಟು ಭಾರತ ದೇಶವೇ ತಲೆತಗ್ಗಿಸುವಂತ್ತೆ ಮಾಡಿರುವ ಅಪರಾಧಿಗಳಿಗೆ ತಕ್ಷಣವೇ ಬಂಧಿಸಬೇಕು ಮಾಡಿರುವ ಕೃತ್ಯಕ್ಕೆ ಕಠಿಣ ಕಾನೂನು ಕ್ರಮ ಜರುಗಿಸಿ ಅವರನ್ನ ಯಾವುದೇ ಕಾರಣಕ್ಕೂ ಅಪರಾಧಿಗಳಿಗೆ ದಿನಗಳನ್ನು ಕಳೆಯಬಾರದು ಬರ್ಬರವಾಗಿಅತ್ಯಾಚಾರ ಹಾಗೂ ಕೊಲೆ ಮಾಡಿ ಹೋದಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಬೇಕು ಮತ್ತು ಇಡೀ ದೇಶವೇ ಬೆಚ್ಚಿ ಬೀಳುವರೀತಿಯಲ್ಲಿ ಈ ಕಿರಾತಕರುಗಳಿಗೆ ಸರ್ಕಾರ ಶಿಕ್ಷೆ ನೀಡಬೇಕು ಎಂದು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯು ತಮ್ಮಲ್ಲಿಆಗ್ರಹಿಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕರ್ನಾಟಕ ಸರ್ಕಾರ ನೀಡಬೇಕೆಂದು ವಿನಂತಿಸಲಾಯಿತು.ಅಂಬೇಡ್ಕರ್ ಸಂವಿಧಾನ ಸಂರಕ್ಷಣಾಸಮಿತಿ ಪದಾಧಿಕಾರಿಗಳು ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಿಂದ ಚಿತ್ರದುರ್ಗ ಜಿಲ್ಲಾಕಚೇರಿಯವರೆಗೆ ಮೆರವಣಿಗೆ ಮುಖಾಂತರ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತ್ತುಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ ರಾಮಚಂದ್ರ, ಬೆಂಗಳೂರು ವಿಭಾಗ ವಿಭಾಗೀಯ ಅಧ್ಯಕ್ಷರಾದನರಸಿಂಹಸ್ವಾಮಿ, ದಲಿತ ಹಿರಿಯ ಮುಖಂಡರಾದ ಘಾಟ್ ರವಿ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಆರ್ ಶಿವರಾಜ್ ಕುಮಾರ್, ಜಿಲ್ಲಾಉಪಾಧ್ಯಕ್ಷರಾದ ಕೆಂಚಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲ್ಲೇಶ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷರಾದ ನಿರಂಜನ್,ಹಿರಿಯೂರು ತಾಲೂಕು ಗೌರವಾಧ್ಯಕ್ಷರಾದ ದೇವರಾಜ್, ತಾಲೂಕು ಕಾರ್ಯದರ್ಶಿ ತಿಪ್ಪೇಸ್ವಾಮಿ, ದಲಿತ ಮುಖಂಡರಾದ ಗಜ, ಇನ್ನು ಮುಂದಾದವರು ಉಪಸ್ಥಿತರಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







