ಕಳೆದ ವರ್ಷ ಜುಲೈ 30 ರಂದು ಭೂಕುಸಿತದಿಂದ ಕೇರಳದ ಕೇರಳದ ವಯನಾಡಿನ ಎರಡು ಗ್ರಾಮಗಳಾದ ಚೂರಲ್ಮಲಾ ಮತ್ತು ಮುಂಡಕ್ಕೈ ಅವಶೇಷಗಳಡಿ ಸಿಲುಕಿ ಸಪೂರ್ಣ ನಾಶವಾಗಿ, 298 ಜನ ಸಾವನ್ನಪ್ಪಿದ ದುರಂತಕ್ಕೆ ಬುಧವಾರ ಒಂದು ವರ್ಷ.ಈ ದುರಂತದ ನೋವು ಕರ್ನಾಟಕ ಜನರನ್ನೂ ಸಹ ಕಾಡುತ್ತಿದೆ. ದಶಕಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಮತ್ತು ತಮ್ಮ 14 ಪ್ರೀತಿಪಾತ್ರರನ್ನು ಕಳೆದುಕೊಂಡ ಕರ್ನಾಟಕ ಮೂಲದ 40 ಕುಟುಂಬಗಳು ತಮ್ಮ ತವರು ರಾಜ್ಯ ತಮಗೆ ಯಾವುದೇ ಸಹಾಯ ಮಾಡಲಿಲ್ಲ. ತಮ್ಮ ಛಿದ್ರಗೊಂಡ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಲು ಮುಂದೆ ಬರಲಿಲ್ಲ ಎಂದು ನೋವಿನಿಂದ ಹೇಳಿದ್ದಾರೆ.ಚೂರಲ್ಮಲಾದಲ್ಲಿ ಬದುಕುಳಿದ ಅದೆಷ್ಟೋ ಕುಟುಂಬಗಳು ನಿರಾಶ್ರಿತರಾಗಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಕೆಲವರು ಭೂಕುಸಿತದಲ್ಲಿ ನಾಶವಾದ ಶಿವ ಮತ್ತು ಮರಿಯಮ್ಮ ದೇವಾಲಯಗಳ ಅವಶೇಷಗಳ ಬಳಿ ಪ್ರಾರ್ಥಿಸುತ್ತಿರುವುದನ್ನು ಸಹ ಕಾಣಬಹುದು.
ಅವರಲ್ಲಿ ಮಹಾದೇವಿ ಎಂಬ ಮಹಿಳೆ ತನ್ನ ಕುಟುಂಬದ ಒಂಬತ್ತು ಸದಸ್ಯರನ್ನು ಕಳೆದುಕೊಂಡು ಈಗ ತನ್ನ ನಾಲ್ವರು ಅನಾಥ ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ ಕರಾಳ ದಿನವನ್ನು ವಿಶೇಷವಾಗಿ ಬಳಸಿಕೊಂಡಿದ್ದು, ಮಹಾದೇವಿ ಅನಾಥಾಶ್ರಮಕ್ಕೆ ಭೇಟಿ ನೀಡಿ ಊಟ ಬಡಿಸಿದರು.
“ನಾನು ದಿನಗೂಲಿ ಕೆಲಸಗಾರ. ನನ್ನ ಎಲ್ಲಾ ಮಕ್ಕಳು ವಿದ್ಯಾವಂತರಾಗುವಂತೆ ಮತ್ತು ಉದ್ಯೋಗಗಳನ್ನು ಕಂಡುಕೊಳ್ಳುವಂತೆ ನಾನು ನೋಡಿಕೊಂಡೆ. ಅವರು 35 ಲಕ್ಷ ರೂಪಾಯಿ ಖರ್ಚು ಮಾಡಿ ನಮ್ಮ ಮನೆ ನಿರ್ಮಿಸಿದ್ದರು. ಆದರೆ ಭೂಕುಸಿತವು ನನ್ನ ಮನೆಯನ್ನು ನಾಶಮಾಡಿತು. ಅಲ್ಲದೆ ಕುಟುಂಬದ ಒಂಬತ್ತು ಸದಸ್ಯರನ್ನೂ ಕೊಂದಿತು” ಎಂದು ಮಹಾದೇವಿ ತಮ್ಮ ಕುಟುಂಬ ಸದಸ್ಯರ ಫೋಟೋಗಳನ್ನು ತೋರಿಸುತ್ತಾ ಹೇಳಿದರು.ಪದೇ ಪದೇ ಮನವಿ ಮಾಡಿದರೂ ಕರ್ನಾಟಕದಿಂದ ಯಾವುದೇ ಬೆಂಬಲ ಸಿಗಲಿಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ, ಒಂದೇ ಒಂದು ಮನೆ ನಿರ್ಮಿಸಿಲ್ಲ ಎಂದ ಬೇಸರು ವ್ಯಕ್ತಪಡಿಸಿದರು.ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಇತರ ಉನ್ನತ ಅಧಿಕಾರಿಗಳು ದುರಂತದ ನಂತರ ಕೆಲವು ದಿನಗಳ ಕಾಲ ಇಲ್ಲಿ ಮೊಕ್ಕಾಂ ಹೂಡಿದ್ದರು. ಪರಿಹಾರ ಕೇಂದ್ರದಲ್ಲಿ ಅವರನ್ನು ಭೇಟಿ ಮಾಡಿದಾಗ ಕರ್ನಾಟಕ ಸರ್ಕಾರದಿಂದ ಎಲ್ಲಾ ಸಹಾಯ ಮಾಡುವ ಭರವಸೆ ನೀಡಿದ್ದರು ಎಂದರು.ರಾಜ್ಯ ಸರ್ಕಾರದಿಂದ ಪರಿಹಾರ ಕೋರಿ ಚಾಮರಾಜನಗರ ಜಿಲ್ಲಾ ಕಚೇರಿಗೆ ಹೋಗಿದ್ದೆ. “ನಾವು ಕರ್ನಾಟಕದ ಸ್ಥಳೀಯರು ಎಂದು ಹೇಳಿದೆ. ಆದರೆ ಯಾವುದೇ ಪ್ರಯೋಜನೆ ಆಗಲಿಲ್ಲ ಎಂದು ಬದುಕುಳಿದ ಶಂಕರ್ ಹೇಳಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



