ದಾವಣಗೆರೆ: ನಗರದ ಬಾಡ ಕ್ರಾಸ್ ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ 293ನೇ ಬಣದ ಹುಣ್ಣಿಮೆಶಿವಾನುಭವಗೋಷ್ಠಿ ಮತ್ತು ಸಂಗೀತಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿಆವರಗೊಳ್ಳ ಪುರವರ್ಗ ಹಿರೇಮಠ ಹಾಗೂ
ಕುಂಟಪಾಲನಹಳ್ಳಿ ಶ್ರೀ ರೇಣುಕ ಪುಣ್ಯಾಶ್ರಮದ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳುದಿವ್ಯಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾವಣಗೆರೆವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರಾರ್ ಹೆಚ್.ಬಿ. ದೇವರಾಜ್, ದೀಪಕ್ಎಸ್. ಹಿರೇಮಠ, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿಎ.ಹೆಚ್. ಸಿದ್ದಲಿಂಗಸ್ವಾಮಿ ಆಗಮಿಸಿದ್ದರು.ತಾಳಿ ಕೋಟಿಯ ಹಿಂದೂಸ್ಥಾನಿ ಸಂಗೀತಗಾರರಾದ ಮಹೇಶಬಂಟನೂರು-ಸಂಗೀತ ಸೇವೆ, ಆಶ್ರಮದ ವಿದ್ಯಾರ್ಥಿಗಳಾದ
ಮಹಾಂತೇಶ್ ಗದಗ-ಹಾರ್ಮೋನಿಯಂ, ಸುರೇಶ್ ಕಲ್ಲಾಪುರ-ಗಾಯನ, ಸುರೇಶ್ ಕೊಪ್ಪಳ್-ತಬಲಾ ಸಾಥ್, ಆದಿತ್ಯ ಕುಮಾರ್-ತಬಲಾ ಸೋಲೋ ಸಾಥ್ ನೀಡಿದರು. ಲೊಟಗೇರಿಯಅಮರಯ್ಯಶಾಸ್ತ್ರಿ ಹಿರೇಮಠ್ ಸಭಾ ನಿರೂಪಣೆಯನ್ನು
ಮಾಡಿದರು. ಇದೇ ವೇಳೆಶ್ರೀ ರಾಜಗುಪ್ತ, ಪಿ.ಆರ್. ಶಾರದ ಮತ್ತುಸಹೋದರರು, ಶ್ರೀಮತಿ ವನಜಾಕ್ಷಿ ಪ್ರಸಾದ್, ವೈಷ್ಣವಿ ಪಿ.
ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಮಂಜುನಾಥ ಕೋಟಹಾಳಮತ್ತು ಮಕ್ಕಳು, ಎಸ್.ಕೆ. ನಾಗರತ್ನಮ್ಮ ಗೋಪಾಲಪುರಮತ್ತು ಮಕ್ಕಳು ಪ್ರಸಾದ ಸೇವೆ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



