ನವದೆಹಲಿ: ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದಕ್ಕೆ ಕೈಹಾಕುವ ಸಾಧ್ಯತೆ ಇದೆ. ಎಲೆಕ್ಟ್ರಿಕ್ ಕಾರುಗಳು, ಬಸ್‌ಗಳು, ಟೆಂಪೋ, ಲಾರಿಗಳನ್ನು 15 ವರ್ಷದ ಬಳಿಕವೂ ಬಳಸಲು ಅವಕಾಶ ಮಾಡಿಕೊಡುವ ರೀತಿಯಲ್ಲಿ ನಿಯಮಕ್ಕೆ ತಿದ್ದುಪಡಿ ತರುವ ನಿರೀಕ್ಷೆ ಇದೆ.ಸದ್ಯ ಖರೀದಿ ಮಾಡುವ ಯಾವುದೇ ವಾಹನಗಳ ನೋಂದಣಿ 15 ವರ್ಷಗಳಿಗಷ್ಟೇ ಸೀಮಿತ. ಬಳಿಕ ಆ ವಾಹನಗಳ ಮರು ನೋಂದಣಿ ಕಡ್ಡಾಯ. ದೆಹಲಿಯಲ್ಲಿ ಈಗಾಗಲೇ 15 ವರ್ಷಗಳಿಗಿಂತ ಹಳೆಯ ಡೀಸೆಲ್, ಪೆಟ್ರೋಲ್ ವಾಹನಗಳಿಗೆ ನಿರ್ಬಂಧ ವಿದೆ. ಇಂಥ ಪರಿಸ್ಥಿತಿಯಲ್ಲಿ ಖಾಸಗಿ ವ್ಯಕ್ತಿಗಳು ದುಬಾರಿ ವೆಚ್ಚ ವೆಚ್ಚದ ಇ-ವಾಹನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಶೇ.30ರ ಗುರಿ: ದೇಶವು 2030ರಲ್ಲಿ ಶೇ.30 ಇ-ವಾಹನಗಳ ಬಳಕೆ ಗುರಿ ಇಟ್ಟುಕೊಂಡಿದೆ. ಆದರೆ 2024ರಲ್ಲಿ ಈ ಪ್ರಮಾಣ ಕೇವಲ ಶೇ.7.6 ರಷ್ಟಿತ್ತು. ಇದರಲ್ಲೂ ವಿದ್ಯುತ್ಚಾಲಿತ ದ್ವಿಚಕ್ರವಾಹನಗಳ ಸಂಖ್ಯೆಯೇ ಹೆಚ್ಚು, ಇ-ಬಸ್‌ಗಳು ಹೆಚ್ಚಾಗುತ್ತಿದ್ದರೂ ಅವನ್ನೆಲ್ಲ ಸರ್ಕಾರಿ ಸಾರಿಗೆಗಳೇ ಖರೀದಿಸು ತ್ತಿವೆ. ಇನ್ನು ಬಹುತೇಕ 15 ವರ್ಷಕ್ಕಿಂತ ಹಳೆಯ ಡೀಸೆಲ್ ಬಸ್‌ಗಳು ಖಾಸಗಿ ಯವರೇ ಓಡಿಸುತ್ತಿದ್ದಾರೆ.
ಬಿವಿಆರ್ ಸುಬ್ರಹ್ಮಣ್ಯಂ ಅವರು, ಇ-ಚಾಲಿತ ವಾಹನ ಗಳಿಗೆ ವಾಹನದ ಬಳಕೆ ಅವಧಿಯನ್ನು 15 ವರ್ಷಗಳಿಗೆ ಸೀಮಿತಗೊಳಿಸುವ ನಿಯಮಾವಳಿ ತೆಗೆದು ಹಾಕಿದರೆ ಮಾರಾಟ ಹೆಚ್ಚಾಗಬಹುದು ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



