ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಭೋಗನಹಳ್ಳಿಯಲ್ಲಿ ಮೂಲ ಸೌಕರ್ಯಗಳ ಕಣ್ಮರೆ ಆಗಿವೆ. ಈ ಹಳ್ಳಿ ಹಾಗೂ ಚಿತ್ರನಾಯಕನಹಳ್ಳಿ ಸಂಪರ್ಕವಾಗಿ ಹೊಸದಾಗಿ ಮಾಡಿದ್ದ ರಸ್ತೆ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಅರ್ಧಕ್ಕರ್ಧ ಬಾವಿಯಂತಾಗಿ ಬರುವ ವಾಹನ ಸವಾರರನ್ನು ಅಪಾಯಕ್ಕೆ ಬಾಯ್ತೆರೆದು ಕರೆಯುತ್ತಿದೆ. ಇನ್ನು ಹಳ್ಳಿಯಲ್ಲಿ ಸ್ವಚ್ಛತೆಯ ವಿಷಯದಲ್ಲೂ ಹೇಳತೀರದಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಚರಂಡಿ ಇಲ್ಲವೇ ಇಲ್ಲ. ಮಳೆ ಬಂದ ಸಮಯದಲ್ಲಿ ಮಳೆಯ ನೀರು ಬೀದಿಗೆ ಬರುತ್ತದೆ. ಇದರಿಂದ ಸಂಪೂರ್ಣ ಹಳ್ಳಿಯೇ ಕೊಚ್ಚೆಯಾಗಿ ಮಾರ್ಪಾಡು ಆಗುತ್ತಿದೆ. ಇನ್ನು ಶಾಲೆಯಲ್ಲಿ ಹಾವು ಚೇಳು ಸೇರಿಕೊಂಡು ಹಾಳು ಕೊಂಪೆಯಂತಾಗಿದ್ರೆ, ಇತ್ತ ಬಸ್ ನಿಲ್ದಾಣ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಶ್ರೀರಾಮುಲು ಶಾಸಕ ಆಗಿದ್ದಾಗ ಸರ್ಕಾರಿ ಬಸ್ ಗಳು ಬರ್ತಿದ್ದವು ಅವ್ರು ಹೋದ ಮೇಲೆ ಯಾವ ಬಸ್ ಬರದಂಗೆ ಮಾಡಿದ್ರೂ. ಈಗಿನ ಶಾಸಕರಿಗೆ ಇಷ್ಟೆಲ್ಲಾ ಸಮಸ್ಯೆಗಳ ಬಗ್ಗೆ ಮನವಿ ಕೊಟ್ರೆ ಏನು ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರೂ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



