ಹಿರಿಯೂರು: ದೇವರ ಕೃಪೆ, ಸರ್ಕಾರದ ಶ್ರಮ, ಜನರ ವಿಶ್ವಾಸ ಇವುಗಳೆಲ್ಲ ಸೇರಿ ವಿವಿ ಸಾಗರ ಮತ್ತೆ ತುಂಬಿ ಹರಿದಿದೆ. ಕೋಡಿ ಬಿದ್ದ ದೃಶ್ಯ ಕಂಡು ನನ್ನ ಮನದ ಸಂತೋಷದ ಕಟ್ಟೆಯು ತುಂಬಿ ಹರಿದಿದೆ. ಕೋಡಿ ಬೀಳುವ ಮೂಲಕ ಮೂಲಕ ನಮ್ಮ ಭಾಗದ ಕೃಷಿ, ಪಶು ಸಂಗೋಪನೆ, ಜನಜೀವನ ಸುಧಾರಣೆಗೆ ಮತ್ತೆ ಸಾಕಷ್ಟು ವರದಾನವಾಗಿದೆ. ಬಯಲು ಸೀಮೆ ಈಗ ಜಲ ಸೀಮೆಯಂತಾಗಿದೆ. ವಾಣಿವಿಲಾಸ ಸಾಗರ ತುಂಬಿದರೆ ಪ್ರವಾಸಿಗರ ದಂಡು ಹರಿದು ಬರುವುದರಿಂದ ಈ ಭಾಗದ ವ್ಯಾಪಾರ-ವಹಿವಾಟಿಗೂ ಚುರುಕು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಾಣಿವಿಲಾಸ ಸಾಗರಕ್ಕೆ ಇಂದು ಭೇಡಿ ನೀಡಿದ ವೇಳೆ ಎಲ್ಲೆಡೆ ತುಂಬಿದ ಜಲರಾಶಿ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೋಡಿ ಬಿದ್ದ ವಿವಿಸಾಗರದ ನೀರು ವೇದಾವತಿ ನದಿಗೆ ಹರಿಯುವುದರಿಂದ ವೇದಾವತಿಯ ತಗ್ಗು ಪ್ರದೇಶ ಹಾಗೂ ನದಿಪಾತ್ರದ ಎರಡು ದಡದ ಸಾರ್ವಜನಿಕರು ತಮ್ಮ ಆಸ್ತಿ-ಪಾಸ್ತಿ, ಜಾನುವಾರುಗಳ ರಕ್ಷಣೆ ಬಗ್ಗೆ ಮುನ್ನೆಚ್ಚರಿಕೆವಹಿಸಿ ಜಾಗ್ರತೆಯಿಂದಿರಲು ಮನವಿ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







