ಚಿತ್ರದುರ್ಗ: ಸದಾಶಿವ ಆಯೋಗದ ವರದಿಯನ್ನು ಬೇಡ ಎಂದು ಸರ್ಕಾರ ಹೇಳಿದ ಮೇಲೆ, ಸರ್ಕಾರ ನಾಗಮೋಹನ್ ದಾಸ್ ಕಮಿಟಿ ಮಾಡಿದ್ರು, ಎರಡು ಆಯೋಗಕ್ಕೆ ಸರ್ಕಾರ ಸಾರ್ವಜನಿಕರ ಹಣ ದುರ್ಬಳಕೆ ಮಾಡಿದೆ. ಇಂದಿನ ಪತ್ರಿಕೆಗಳನ್ನು ನೋಡಿದಾಗ ವರದಿಯ ಕೆಲವೊಂದು ಅಂಶಗಳು ಬಹಿರಂಗ ಆಗಿವೆ. ಈಗ ನೀಡಿರುವ ವರದಿ ಜಾರಿಯಾದಾಗ ಏನು ಆಗುತ್ತೆ ಅಂತ ನಾನು ಈಗ ಹೇಳುವುದಿಲ್ಲ ಎಂದು ಛಲವಾದಿ ಮಠದ ಸ್ವಾಮೀಜಿ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗ ನೀಡಿರುವ ವರದಿಯ ಬಗ್ಗೆ ಸಂಶಯ ಇದೆ. ಪರಿಶಿಷ್ಟರಿಗೆ ಇರುವ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ರೆ ಸಾಕಾಗಿತ್ತು. ಆದ್ರೆ ಅವರು ಸರಿಯಾಗಿ ಈ ವರದಿ ನೀಡಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ವರದಿಯ ತಪ್ಪುಗಳು ಯಾವ ಹಂತದಲ್ಲಿ ಇದ್ರೂ ನಮ್ಮ ಸಮುದಾಯ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದರು. ನಮ್ಮ ಗುರುಪೀಠ ಯಾವ ಪಕ್ಷವನ್ನು ಪರ ವಿರೋಧ ತೆಗೆದುಕೊಳ್ಳುವುದಿಲ್ಲ. ಸಂವಿಧಾನದ ಹಿತಾಸಕ್ತಿಗೆ ಗೌರವ ನೀಡುತ್ತೇವೆ ಎಂದರು. ನ್ಯಾ. ನಾಗ ಮೋಹನ್ ದಾಸ್ ನಿವೃತ್ತ ನ್ಯಾಯಮೂರ್ತಿಗಳಿಗೆ ಎಲ್ಲ ತಿಳಿದಿರುತ್ತದೆ. ಪರಿಶಿಷ್ಟರಿಗೆ ಎಷ್ಟೇ ಶ್ರೀಮಂತರು ಆಗಿದ್ರು, ಅವರನ್ನು ಹೊರಗಡೆ ಇಡುತ್ತಾರೆ. ನಮ್ಮ ದೇಶದಲ್ಲಿ ಇನ್ನು ಅಸ್ಪೃಶ್ಯತೆ ಇದೆ. ನನಗೂ ಯಾವುದೇ ಗುಡಿಗಳಿಗೆ ಅವಕಾಶ ಏನು ಬೇಡ ಎಂದು ಹೇಳಿದರು.
ಇದೆ ವೇಳೆ ಛಲವಾದಿ ಸಮುದಾಯದ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಸಮುದಾಯಕ್ಕೆ ಸದಾಶಿವ ಆಯೋಗದಲ್ಲಿ ಶೇಕಡ 5.5 ರಷ್ಟು ಮೀಸಲಾತಿ ನೀಡಿತ್ತು, ಆದ್ರೆ ಈಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿದ ವರದಿಯಲ್ಲಿ ಶೇ.5ರಷ್ಟು ನೀಡಿರುವುದು ಪತ್ರಿಕೆಗಳಲ್ಲಿ ಮಾಹಿತಿ ಸೋರಿಕೆ ಆಗಿದೆ. ಕಾಂಗ್ರೆಸ್ ನಂಬಿಕೊಂಡು ಮತ ಹಾಕಿದ್ದಕ್ಕೆ ಸರ್ಕಾರ ಒಳಮೀಸಲಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ಇದೇ ವರದಿಯನ್ನು ಜಾರಿ ಮಾಡಿದರೆ ಛಲವಾದಿ ಸಮುದಾಯದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 18 ಜಿಲ್ಲೆಗಳಲ್ಲಿ ಮತ ಹಾಕಿ ಸರ್ಕಾರವನ್ನು ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ನಮ್ಮ ಸಮುದಾಯ ಮುಖ್ಯ ಪಾತ್ರ ವಹಿಸಿದೆ. ಆಗಸ್ಟ್ 7ರಂದು ಈ ವರದಿಯನ್ನು ಜಾರಿ ಮಾಡಿದ್ರೆ ರಾಜ್ಯ ಕ್ರಾಂತಿ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



