Close Menu
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
What's Hot

ಮಾರುತಿ ಗ್ಯಾಸ್ ಏಜೆನ್ಸಿ ಎದುರು ಡೆಲಿವರಿ ಬಾಯ್ ಗಳ ಪ್ರತಿಭಟನೆ

ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ಕರುನಾಡ ವಿಜಯಸೇನೆ ಕಿಡಿ

ರಂಗ ಕಲೆಗಳಿಗೆ ಆರ್ಥಿಕ ಬಲ ತುಂಬದಿದ್ದರೆ ಕಲೆ ಉಳಿಯುವುದಿಲ್ಲ – ರಂಗಾಯಣ ನಿರ್ದೇಶಕ ಸತೀಶ ತಿಪಟೂರು

Facebook X (Twitter) Instagram
  • ಪ್ರಮುಖ ಸುದ್ದಿ
  • ನಮ್ಮ ಚಿತ್ರದುರ್ಗ
  • ಬಯಲುಸೀಮೆ ನೋಟ
Facebook X (Twitter) Instagram
Bayaluseeme Times | ಬಯಲುಸೀಮೆ ಟೈಮ್ಸ್
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
Subscribe
Bayaluseeme Times | ಬಯಲುಸೀಮೆ ಟೈಮ್ಸ್
Home»ನಮ್ಮ ಚಿತ್ರದುರ್ಗ»ರಂಗ ಕಲೆಗಳಿಗೆ ಆರ್ಥಿಕ ಬಲ ತುಂಬದಿದ್ದರೆ ಕಲೆ ಉಳಿಯುವುದಿಲ್ಲ – ರಂಗಾಯಣ ನಿರ್ದೇಶಕ ಸತೀಶ ತಿಪಟೂರು
ನಮ್ಮ ಚಿತ್ರದುರ್ಗ

ರಂಗ ಕಲೆಗಳಿಗೆ ಆರ್ಥಿಕ ಬಲ ತುಂಬದಿದ್ದರೆ ಕಲೆ ಉಳಿಯುವುದಿಲ್ಲ – ರಂಗಾಯಣ ನಿರ್ದೇಶಕ ಸತೀಶ ತಿಪಟೂರು

Times of bayaluseemeBy Times of bayaluseemeAugust 9, 2025No Comments2 Mins Read
Share WhatsApp Facebook Twitter Telegram Copy Link
Follow Us
Google News Flipboard
Share
Facebook Twitter LinkedIn Pinterest Email Copy Link

ಚಿತ್ರದುರ್ಗ : ರಂಗ ಕಲೆಗಳಿಗೆ ಆರ್ಥಿಕವಾಗಿ ಬಲ ತುಂಬದಿದ್ದರೆ ಬಹಳ ಕಾಲ ಉಳಿಯುವುದಿಲ್ಲ ಎಂದು ರಂಗಾಯಣ ನಿರ್ದೇಶಕ ಮೈಸೂರಿನ ಸತೀಶ ತಿಪಟೂರು ಹೇಳಿದರು.ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ, ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ಚಿತ್ರದುರ್ಗ ಪರಿಸರದ ಬಯಲಾಟಗಳು ಎರಡು ದಿನಗಳ ವಿಚಾರ ಸಂಕಿರಣವನ್ನು ಸರ್ಕಾರಿ ಕಲಾ ಕಾಲೇಜಿನಲ್ಲಿ ಮೃದಂಗಬಾರಿಸುವ ಮೂಲಕ ಶನಿವಾರ ಉದ್ಗಾಟಿಸಿ ಮಾತನಾಡಿದರು.

ದೊಡ್ಡಾಟ, ಬಯಲಾಟ, ಇನ್ನಿತರೆ ರಂಗ ಪ್ರಾಕಾರಗಳು ಜನಪದರ ಬದುಕಿನ ಒಂದು ಭಾಗ. ಅಳಿವಿನಂಚಿನಲ್ಲಿರುವ ಕಲೆಗಳನ್ನುಉಳಿಸಿ ಬೆಳೆಸಬೇಕಾಗಿರುವುದರಿಂದ ಕಲೆಗಳ ಪುನಶ್ಚೇತನಕ್ಕೆ ಯೋಚಿಸುತ್ತಿದ್ದೇವೆ. ಶೂದ್ರ ಸಮುದಾಯದವರು ಕಲೆಗಳನ್ನು ಕಟ್ಟಿಬೆಳೆಸಿದ್ದಾರೆಯೇ ವಿನಃ ಮೇಲ್ವರ್ಗದವರಲ್ಲ. ಆರ್ಥಿಕವಾಗಿ ಕಲೆಗಳು ಸದೃಡವಾಗದಿದ್ದರೆ ಅಸ್ಪøಶ್ಯ ಕಲೆಗಳಾಗಿಯೇಉಳಿದುಬಿಡುತ್ತವೆಂದು ವಿಷಾಧಿಸಿದರು.ಆರ್ಥಿಕ ಲಾಭಕ್ಕಾಗಿ ಕಲೆಗಳನ್ನು ಮೇಲ್ವರ್ಗದವರು ಹೈಜಾಕ್ ಮಾಡುತ್ತಿರುವುದರ ವಿರುದ್ದ ಕಲಾವಿದರು ಎಚ್ಚರಿಕೆಯಿಂದ ಇರಬೇಕು.ಇಲ್ಲದಿದ್ದರೆ ಸಾಂಸ್ಕøತಿಕ ನುಸುಳುಕೋರರಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಒಂದು ವರ್ಷದ ರಂಗಕಲೆ ಡಿಪ್ಲಮೋ ಕೋರ್ಸ್‍ನ್ನುಎರಡು ವರ್ಷಗಳಿಗೆ ವಿಸ್ತರಿಸಿ ದಕ್ಷಿಣ ಭಾರತಕ್ಕೆ ವ್ಯಾಪಿಸಬೇಕು. ಬಯಲಾಟ ಕಾರ್ಯಾಗಾರವಾಗಬೇಕು. ರಂಗಕಲೆಗಳು

ಯೂರೋಪಿಯನ್ ಮಾಡಲ್‍ಗಳಿರುವುದರಿಂದ ರಂಗಾಯಣ ರಂಗಶಾಲೆಯನ್ನು ದ್ರವಿಡಿಯನ್ ಇನ್ಸಿಟಿಟ್ಯೂಟ್ ಶಾಲೆಗಳನ್ನಾಗಿಮಾರ್ಪಡಿಸಬೇಕಿದೆ ಎಂದು ಸಲಹೆ ನೀಡಿದರು.ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್ವಿದ್ಯಾರ್ಥಿಗಳು, ಯುವ ಜನಾಂಗ ಪಾರಂಪರಿಕ ಕಲೆಗಳನ್ನು ತಿಳಿದುಕೊಳ್ಳಬೇಕು. ರಂಗಭೂಮಿಯನ್ನು ಕಟ್ಟಿದವರು ಅನಕ್ಷರಸ್ಥರು,ರೈತರು, ಕೂಲಿಕಾರರು. ಇವರುಗಳಿಗೆ ಪುರಾಣಗಳಲ್ಲಿ ವಾದ್ಯಗಳನ್ನು ನುಡಿಸುವುದು ಗೊತ್ತು. ಕಲಾವಿದರ ಪ್ರದರ್ಶನಕ್ಕೆ ಆರ್ಥಿಕಸಂಪನ್ಮೂಲ ಗಟ್ಟಿಯಾಗಬೇಕು. ಶ್ರಮಿಕ ವರ್ಗದಿಂದ ಮಾತ್ರ ಇನ್ನು ಬಯಲಾಟ ಕಲೆ ಉಳಿದಿದೆ. ಚಿತ್ರದುರ್ಗಕ್ಕೆ ಹತ್ತಿರವಾಗಿರುವಹಳ್ಳಿಗಳಲ್ಲಿ ಅನೇಕ ಕಥೆಗಾರರಿದ್ದಾರೆ. ಬಯಲಾಟ ಸರಳ ಮತ್ತು ಸುಲಭವಾದ ಸಂವಹನ. ಜಿಲ್ಲೆಯ ಪಾರಂಪರಿಕ ಕಲೆಬಯಲಾಟವನ್ನು ಉಳಿಸಬೇಕಿದೆ ಎಂದು ಮನವಿ ಮಾಡಿದರು.ರಂಗ ಸಮಾಜ ಸದಸ್ಯ ಡಾ.ರಾಜಪ್ಪ ದಳವಾಯಿ ಮಾತನಾಡಿ ಜಾತ್ಯತೀತ, ಮಾನವೀಯ ಮೌಲ್ಯಗಳು ಬಯಲಾಟದಲ್ಲಿದೆ.ಊರೊಂದಿಗೆ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಬಯಲಾಟಗಳು ನಾಶವಾಗುತ್ತಿವೆ. ರಂಗ ಶಿಕ್ಷಣ ವ್ಯಾಪಕವಾಗಿ ಕರ್ನಾಟಕದಲ್ಲಿಬೆಳೆದಿದೆ. ಬಯಲಾಟ ದೊಡ್ಡ ಕಲಾ ಮಾಧ್ಯಮ. ಸ್ಥಳಿಯ ರಂಗಕಲೆ ಹಾಗೂ ಹಳ್ಳಿಗಳಲ್ಲಿ ವಿಭಿನ್ನ ಬದಲಾವಣೆಯಾಗಿರುವುದರಿಂದಬಯಲಾಟವನ್ನು ಉಳಿಸಬೇಕಿದೆ ಎಂದರು.

ಬಯಲಾಟ ಪ್ರಯೋಗ ಸವಾಲಾಗಿ ಪರಿಣಮಿಸಿದೆ. ವಿದ್ವತ್‍ಗೆ ಸಮಸ್ಯೆಯಿಲ್ಲ. ಇರುವುದು ಪ್ರಯೋಗದ ಸಮಸ್ಯೆ. ಯಾವುದೇಕಲಾವಿದರನ್ನು ಅಗೌರವದಿಂದ ಕಾಣಬಾರದು. ಬಯಲಾಟಕ್ಕೆ ಪ್ರೋತ್ಸಾಹ ಬೇಕು. ಸರಳಗೊಳಿಸಿ ಬಯಲಾಟವನ್ನು ಪ್ರೇಕ್ಷಕರಮುಂದಿಡಬೇಕು. ಬಯಲಾಟದ ಪಲ್ಲವಿತ ಪ್ರದೇಶ ಚಿತ್ರದುರ್ಗವಾಗಿರುವುದರಿಂದ ಪ್ರಯೋಗವಾಗದಿದ್ದರೆ ಬಯಲಾಟಉಳಿಯುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಬುಡಕಟ್ಟು ಅಧ್ಯಯನ ವಿಭಾಗ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಂ.ಮೈತ್ರಿ ಮಾತನಾಡಿ ಬಯಲಾಟಬದುಕಿನ ಭಾಗ. ಬಹಳಷ್ಟು ಹಳ್ಳಿಗಳಲ್ಲಿ ಬಯಲಾಟ ಕಲಾವಿದರಿದ್ದಾರೆ. ವೇಷಭೂಷಣ ಆಕರ್ಷಣೀಯವಾಗಿರುವುದರಿಂದಸಮುದಾಯದ ಮೇಲೆ ಪ್ರಭಾವ ಬೀರಲಿದೆ. ಹಬ್ಬಗಳು ಕಲೆಗಳ ಹಿಂದೆ ಜ್ಞಾನ ವಿಜ್ಞಾನವಿದೆ. ಕಲೆಗಳ ಉಳಿವಿಗೆ ಸರ್ಕಾರ ಗಮನಕೊಡಬೇಕೆಂದು ವಿನಂತಿಸಿದರು.ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಬಯಲು ಪ್ರದೇಶಚಿತ್ರದುರ್ಗ ಶ್ರಮಿಕರ ನೆಲ. ಹೆಚ್ಚಾಗಿ ತಳ ಸಮುದಾಯದವರೆ ವಾಸಿಸುವ ಪ್ರದೇಶ. ನೆಲವನ್ನು ನಂಬಿ ಬದುಕುತ್ತಿರುವ ಇಲ್ಲಿ ತಳಶ್ರಮಿಕ ಸಮುದಾಯ ಬುಡಕಟ್ಟು ಮೂಲದವರು ಅಕ್ಷರದಿಂದ ವಂಚಿತರಾದರು ಕಲೆಯನ್ನು ದೇವರಂತೆ ಪೂಜಿಸಿಕೊಂಡು ಬಂದವರು.

ಬಡತನವನ್ನು ಮರೆತು ಇಲ್ಲಿನ ಕಲೆ ಸಂಸ್ಕøತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆಂದು ಹೇಳಿದರು.ಹಣ, ಅಧಿಕಾರ, ಪ್ರಶಸ್ತಿ, ಸನ್ಮಾನಗಳಿಂದ ದೂರವಿದ್ದು, ಕಲೆಯನ್ನು ಗೌರವಿಸಿದ್ದಾರೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಇಂತಹಕಲಾವಿದರಿದ್ದಾರೆ. ಆದರೆ ಸಮಕಾಲೀನ ಸಂದರ್ಭ ವ್ಯವಹಾರಿಕ ಬದುಕನ್ನೆ ಮುಖ್ಯ ಎಂದು ಭಾವಿಸಿದೆ. ಎಲ್ಲಾ ಕ್ಷೇತ್ರಗಳಲ್ಲೂಸ್ಥಿತ್ಯಂತರಗೊಳ್ಳುತ್ತಿರುವ ಇಂದಿನ ಕಾಲಮಾನದಲ್ಲಿ ವ್ಯವಹಾರಿಕ ಜಗತ್ತಿನಿಂದ ದೂರವೆ ಉಳಿದು ನೆಲ, ಕಲೆಯನ್ನು ಜನರನ್ನು ನಂಬಿಜೀವಿಸುತ್ತಿರುವ ಅಪರೂಪದ ಕಲಾವಿದರಿದ್ದಾರೆಂದರು.

ಎನ್.ಸಿ.ಸಿ. ಅಧಿಕಾರಿಗಳಾದ ಪ್ರೊ.ಮಂಜುನಾಥ, ಡಾ.ವಿ.ಪ್ರಸಾದ, ಡಾ.ಬಿ.ಕೆ.ಬಸವರಾಜು, ವ್ಯವಹಾರ ನಿರ್ವಹಣಾಶಾಸ್ತ್ರಮುಖ್ಯಸ್ಥರಾದ ಡಾ.ಮೇಘನಾ, ವಾಣಿಜ್ಯಶಾಸ್ತ್ರ ಮುಖ್ಯಸ್ಥರಾದ ಪ್ರೊ.ಜಮುನಾರಾಣಿ ವೇದಿಕೆಯಲ್ಲಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿ‌ನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

bayaluseeme times ads (2)
Add economical power Regional art to we
Follow on Google News Follow on Instagram
Share. Facebook Twitter Telegram WhatsApp
Previous Articleಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ
Next Article ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ಕರುನಾಡ ವಿಜಯಸೇನೆ ಕಿಡಿ
Times of bayaluseeme
  • Website

Related Posts

ಮಾರುತಿ ಗ್ಯಾಸ್ ಏಜೆನ್ಸಿ ಎದುರು ಡೆಲಿವರಿ ಬಾಯ್ ಗಳ ಪ್ರತಿಭಟನೆ

August 9, 2025

ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ಕರುನಾಡ ವಿಜಯಸೇನೆ ಕಿಡಿ

August 9, 2025

ಇಂದಿನ ಹೋರಾಟಗಳು ಕಾಟಾಚಾರದ ಹೋರಾಟಗಳಾಗಿವೆ – ಜಿ.ಎಸ್. ಮಂಜುನಾಥ್

August 9, 2025
Add A Comment
Leave A Reply Cancel Reply

Advertisement
Latest Posts

ಮಾರುತಿ ಗ್ಯಾಸ್ ಏಜೆನ್ಸಿ ಎದುರು ಡೆಲಿವರಿ ಬಾಯ್ ಗಳ ಪ್ರತಿಭಟನೆ

ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ಕರುನಾಡ ವಿಜಯಸೇನೆ ಕಿಡಿ

ರಂಗ ಕಲೆಗಳಿಗೆ ಆರ್ಥಿಕ ಬಲ ತುಂಬದಿದ್ದರೆ ಕಲೆ ಉಳಿಯುವುದಿಲ್ಲ – ರಂಗಾಯಣ ನಿರ್ದೇಶಕ ಸತೀಶ ತಿಪಟೂರು

ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2025 Bayaluseeme Time. Designed by Bayaluseeme time
  • Privacy Policy
  • Terms
  • Accessibility

Type above and press Enter to search. Press Esc to cancel.