ಟೊಮೆಟೊ ಇಲ್ಲದೇ ಯಾವ ಅಡುಗೆ ಆಗುವುದಿಲ್ಲ, ಅದರಂತೆ ಆರೋಗ್ಯಕ್ಕೂ ಟೊಮೆಟೊ ಇಲ್ಲದಿದ್ದರೆ ಅದು ಅಪೂರ್ಣ ಎನಿಸುತ್ತದೆ. ಏಕೆಂದರೆ ಒಂದೊಂದು ಬಗೆಯ ತರಕಾರಿಗಳು ನಮಗೆ ಒಂದೊಂದು ರೀತಿಯ ಆರೋಗ್ಯ ಪ್ರಯೋಜನಗಳನ್ನು ಉಂಟು ಮಾಡುತ್ತವೆ. ಆದರೆ ಟೊಮೆಟೊ ಬಹು ಪ್ರಯೋಜನಗಳನ್ನು ಕೊಡುವ ಜನರ ನೆಚ್ಚಿನ ತರಕಾರಿಯಾಗಿದೆ.ನಮ್ಮ ದೇಹದ ಒಳಗಿನ ಎಲ್ಲಾ ಅಂಗಾಂಗಗಳಿಗೆ ಸೇರಿದಂತೆ ನಮ್ಮ ಚರ್ಮ, ನಮ್ಮ ಸೌಂದರ್ಯ, ನಮ್ಮ ಕೂದಲು, ನಮ್ಮ ಉಗುರು ಹೀಗೆ ಸಂಪೂರ್ಣ ನಮ್ಮ ದೇಹದ ಆರೋಗ್ಯದ ಚುಕ್ಕಾಣಿಯನ್ನು ಟೊಮ್ಯಾಟೋ ಹಿಡಿದಿರುತ್ತದೆ. ಅದಕ್ಕಾಗಿ ಜನರಿಗೆ ಟೊಮೆಟೊ ಹಣ್ಣು ಎಂದರೆ ತುಂಬಾ ಇಷ್ಟ. ದರ ಹೆಚ್ಚಾದರೂ ಕೂಡ ರುಚಿಯ ನೆಪದಲ್ಲಿ ಆರೋಗ್ಯ ವೃದ್ಧಿಸಿಕೊಳ್ಳುತ್ತಾರ…ಟೊಮೆಟೊ ಹಣ್ಣು ತಿನ್ನುವುದರಿಂದ ದೇಹದ ಕೊಬ್ಬಿನ ಪ್ರಮಾಣ ಕರಗುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಟೊಮೆಟೊ ಹಣ್ಣು ನಮ್ಮ ದೇಹದಲ್ಲಿ ಅಮೈನೋ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ ಮತ್ತು ಇದರಿಂದ ನಮ್ಮ ದೇಹದ ಕೊಬ್ಬು ಸುಲಭವಾಗಿ ಕರಗುತ್ತದೆ.ಅಂದರೆ ಇದು ರಕ್ತನಾಳಗಳನ್ನು ಶುದ್ಧೀಕರಣ ಮಾಡುತ್ತದೆ. ಸುಲಭವಾದ ರಕ್ತ ಸಂಚಾರಕ್ಕೆ ಅನುಕೂಲವಾಗುತ್ತದೆ.
ರೋಗ ನಿರೋಧಕ ಶಕ್ತಿ ಕೊಡುತ್ತದೆ
ಟೊಮೆಟೊ ಹಣ್ಣುಗಳಲ್ಲಿ ಲೈಕೋಪಿನ್ ಎಂಬ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದ್ದು, ಜೊತೆಗೆ ಬೀಟಾ ಕ್ಯಾರೋಟಿನ್ ಸಹ ಇದೆ.ಇದು ನಮ್ಮ ಅನೇಕ ಶೀತಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಇದರಿಂದ ಹೆಚ್ಚಾಗಲಿದ್ದು, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದ ನಾವು ದೂರ ಉಳಿಯಬಹುದು.ಪ್ರತಿದಿನ ಟೊಮ್ಯಾಟೋ ತಿನ್ನುವುದರಿಂದ ರಕ್ತದ ಒತ್ತಡ ಸುಲಭವಾಗಿ ನಿರ್ವಹಣೆ ಆಗುತ್ತದೆ. ಇಂದು ಅಧಿಕ ರಕ್ತದ ಒತ್ತಡದಿಂದ ಜನರು ತುಂಬಾ ಬೇಸತ್ತು ಹೋಗಿದ್ದಾರೆ. ಟೊಮೆಟೊ ಹಣ್ಣುಗಳಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ರಕ್ತನಾಳಗಳಲ್ಲಿ ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಸಂಚಾರ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.ಮುಖ್ಯವಾಗಿ ಹೃದಯದ ಮೇಲಿನ ಭಾರ ಇಳಿಕೆಯಾಗುತ್ತದೆ ಎನ್ನುವುದು ಸಂಶೋಧನೆಯ ವರದಿ. ಹೃದಯದ ಬಡಿತ ಇದರಿಂದ ಉತ್ತಮಗೊಳ್ಳುತ್ತದೆ ಮತ್ತು ಎದೆಯುರಿ ಕಡಿಮೆಯಾಗುತ್ತದೆ. ಸಮರ್ಪಕ ಪ್ರಮಾಣದಲ್ಲಿ ಟೊಮೆಟೊ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದುಕಣ್ಣುಗಳ ದೃಷ್ಟಿಗೆ ಅನುಕೂಲಕರವಾಗಿ ಬೇಕಾದ ವಿಟಮಿನ್ ಅಂಶ ಟೊಮ್ಯಾಟೋ ಹಣ್ಣುಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಇದರಿಂದ ದೃಷ್ಟಿಗೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತದೆ.ಫ್ರೀ ರಾಡಿಕಲ್ ಅಂಶಗಳ ಪ್ರಮಾಣದಿಂದ ತೊಂದರೆ ಆಗುವ ಸಾಧ್ಯತೆ ಟೊಮೆಟೊ ಹಣ್ಣುಗಳ ಸೇವನೆಯಿಂದ ತಪ್ಪುತ್ತದೆ. ಪ್ರಮುಖವಾಗಿ ಟೊಮ್ಯಾಟೋ ಹಣ್ಣುಗಳಲ್ಲಿ ಹೇರಳವಾಗಿ ಕಂಡುಬರುವ ವಿಟಮಿನ್ ಎ ನಮಗೆ ಸಹಾಯ ಮಾಡುತ್ತದೆ.ಟೊಮೆಟೊ ಹಣ್ಣುಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಅನುಕೂಲಕರವಾಗಿದ್ದು, ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.ಏಕೆಂದರೆ ಟೊಮೆಟೊ ಹಣ್ಣುಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ಕರುಳಿನ ಚಲನೆಗೆ ಇದು ಉತ್ತಮ ಪ್ರಭಾವ ಬೀರುತ್ತದೆ ಮತ್ತು ಜೀರ್ಣಾಂಗ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ.ಟೊಮೆಟೊ ಹಣ್ಣುಗಳಲ್ಲಿ ನಯಾಸಿನ್ ಎಂಬ ವಿಟಮಿನ್ ಬಿ3 ಪ್ರಮಾಣ ಹೆಚ್ಚಾಗಿರುವುದರಿಂದ ರಕ್ತ ನಾಳಗಳಲ್ಲಿ ಕಂಡು ಬರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಇದು ಕಡಿಮೆ ಮಾಡುತ್ತದೆ. ಅಧಿಕ ನಾರಿನ ಅಂಶ ಕೂಡ ಈ ನಿಟ್ಟಿನಲ್ಲಿ ನಮಗೆ ಸಹಾಯಕವಾಗಿ ಕೆಲಸ ಮಾಡುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







