ಕಿವಿಗಳಿಗೆ ಹಾನಿಯಾದರೆ ಶಾಶ್ವತವಾಗಿ ಕಿವುಡುತನ ಕಾಡಬಹುದು. ಹೀಗಾಗಿ ಕಿವಿಯ ಬಗ್ಗೆ ಕಾಳಜಿವಹಿಸುವುದು ಅಗತ್ಯ. ಅದರಲ್ಲೂ ತಣ್ಣನೆಯ ಗಾಳಿ, ಈ ಚಳಿಗಾಲದ ಮಂಜು ಕಿವಿಯೊಳಗೆ ಹೋದರಂತೂ ನೋವು ಇನ್ನಷ್ಟು ಕಾಡಬಹುದು.ಕೆಲವರಿಗೆ ಕಿವಿಯಲ್ಲಿ ಅತೀವ ನೋವು ಕಾಣಿಸಿಕೊಂಡರೆ, ಇನ್ನು ಕೆಲವರಿಗೆ ಕಿವಿಯಿಂದ ನೀರು ಸೋರಿಕೆಯಾಗಬಹುದು. ಇದನ್ನು ಕಿವಿ ಸೋರುವುದು ಎನ್ನುತ್ತಾರೆ. ಶೀತದಿಂದಲೇ ಆಗಿದ್ದರೆ ಮನೆಮದ್ದಿನಿಂದ ನಿವಾರಣೆ ಮಾಡಬಹುದು. ಆದರೆ ಅದು ಶಮನವಾಗಿದೇ ಇದ್ದರೆ ಅಗತ್ಯವಾಗಿ ವೈದ್ಯರನ್ನು ಕಾಣಬೇಕು.ಹಾಗಾದರೆ ಯಾವೆಲ್ಲಾ ಮನೆಮದ್ದು ಮಾಡಬಹುದು
ಶಾಖ ನೀಡುವುದು
ಬಿಸಿಯಾದ ಶಾಖ ನೀಡುವುದರಿಂದ ನೋವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದಾಗಿದೆ. ಹೀಗಾಗಿ ಕಿವಿ ಸೋರುತ್ತಿದ್ದರೆ ನೀವು ಬಿಸಿ ಕಾಂಪ್ರೆಸ್ ನೀಡಬಹುದು.ಆದರೆ ಕಿವಿಯೊಳಗೆ ನೀರು ಹೋಗದಂತೆ ನೋಡಿಕೊಳ್ಳಿ. ಸ್ವಚ್ಛವಾದ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿ, ಚೆನ್ನಾಗಿ ನೀರನ್ನು ಹಿಂಡಿದ ಬಳಿಕ, 2 ರಿಂದ 5 ನಿಮಿಷಗಳ ಕಾಲ ಕಿವಿಯ ಮೇಲೆ ಇರಿಸಿ. ದಿನದಲ್ಲಿ ಎರಡು ಮೂರು ಬಾರಿ ಇದನ್ನು ಮಾಡಬಹುದು.
ಸ್ಟೀಮ್ ಮಾಡುವುದು
ಸೋರುವ ಕಿವಿಯ ಸರಿಪಡಿಸಲು ಸ್ಟೀಮ್ ಮತ್ತೊಂದು ಉತ್ತಮ ವಿಧಾನವಾಗಿದೆ. ಇದು ಕಿವಿಯಲ್ಲಿ ಸಿಕ್ಕಿಬಿದ್ದ ದ್ರವದ ಬಿಡುಗಡೆಯನ್ನು ಉತ್ತೇಜಿಸಲು ಯೂಸ್ಟಾಚಿಯನ್ ಟ್ಯೂಬ್ ಅನ್ನು ತೆರೆಯಲು ಸ್ಟೀಮ್ ಸಹಾಯ ಮಾಡುತ್ತದೆ.ಕುದಿಯುವ ನೀರನ್ನು ದೊಡ್ಡ ಬಟ್ಟಲಿನಲ್ಲಿ ಹಾಕಿ ಮತ್ತು ಕೆಲವು ಹನಿ ನೀಲಗಿರಿ ಅಥವಾ ನಿಮ್ಮ ಆಯ್ಕೆಯ ಯಾವುದೇ ಸಾರಭೂತ ತೈಲವನ್ನು ಸೇರಿಸಿ.ನಿಮ್ಮ ತಲೆಯ ಮೇಲೆ ಟವೆಲ್ ಇರಿಸಿ ಮತ್ತು 5 ರಿಂದ 10 ನಿಮಿಷಗಳ ಕಾಲ ಉಗಿಯನ್ನು ನಿಧಾನವಾಗಿ ಉಸಿರಾಡಿ. ನಂತರ ತಲೆಯನ್ನು ಒಂದು ಬದಿಗೆ ತಿರುಗಿಸಿ ಇದರಿಂದ ದ್ರವವು ಹೊರಬರುತ್ತದೆ.
ಈರುಳ್ಳಿಯ ಬಳಕೆ
ಆಯುರ್ವೇದದ ಪ್ರಕಾರ ಈರುಳ್ಳಿಯ ಬಳಕೆ ಕಿವಿ ಸೋರುವಿಕೆಯನ್ನು ತಡೆಯಲು ಇರುವ ಉತ್ತಮ ಮದ್ದಾಗಿದೆ.
1 ಸಣ್ಣ ಈರುಳ್ಳಿಯ ರಸವನ್ನು ತೆಗೆದು ಬಿಸಿ ಮಾಡಿ. ಉಗುರು ಬೆಚ್ಚಗಿನ ರಸವನ್ನು ಕಿವಿಗೆ ಹಾಕಿಕೊಳ್ಳಿ. ನಂತರ ತಲೆಯನ್ನು ಬಗ್ಗಿಸಿ ಆ ದ್ರವವನ್ನು ಹೊರಹಾಕಿ. ಇದರಿಂದ ನೋವು ಮತ್ತು ಕೆಟ್ಟ ದ್ರವ ಹೊರಬರುತ್ತದೆ.
ತುಳಸಿ
ಉತ್ತಮ ಆಂಟಿ ಆಕ್ಸಿಡೆಂಟ್ ಮತ್ತು ಸೋಂಕನ್ನು ನಿವಾರಿಸುವ ಗುಣಗಳನ್ನು ಹೊಂದಿರುವ ತುಳಸಿ ಕಿವಿಯ ಸೋರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.4 ಅಥವಾ 5 ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ರಸವನ್ನು ಉಗುರು ಬೆಚ್ಚಗೆ ಮಾಡಿ, ಕಿವಿಗೆ ಒಂದೆರಡು ಹನಿಗಳನ್ನು ಹಾಕಿ. ನಂತರ ತಲೆಯನ್ನು ಒರೆಯಾಗಿಸಿ ಅದನ್ನು ಹೊರಹಾಕಿ.
ಶುಂಠಿಯ ಬಳಕೆ
ಶುಂಠಿ ಹಾಗೂ 2 ರಿಂದ 3 ಬೆಳ್ಳುಳ್ಳಿ, ಲವಂಗವನ್ನು ಸೇರಿಸಿ ಪುಡಿಮಾಡಿ. ನಂತರ ಅದನ್ನು ಕಿವಿಗೆ 3 ಅಥವಾ 4 ಹನಿಗಳನ್ನು ಹಾಕಿ. 5 ನಿಮಿಷ ಕಾಯಿರಿ, ನಂತರ ಕಿವಿಯನ್ನು ಒಣಗಿಸಿ (ತಲೆಯಿಂದ ಸುಮಾರು 12 ಇಂಚುಗಳಷ್ಟು ದೂರದಲ್ಲಿ ಡ್ರೈಯರ್ ಅನ್ನು ಹಿಡಿದುಕೊಳ್ಳಿ). ಆದರೆ ನೆನಪಿಡಿ ವೈದ್ಯರ ಸಲಹೆಯನ್ನು ತೆಗೆದುಕೊಂಡೇ ಈ ಮದ್ದನ್ನು ಮಾಡಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







