ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಹಸಿರು ಚಹಾ ಅಥವಾ ಗ್ರೀನ್ ಟೀ ಬಗ್ಗೆ ನಿಮ್ಮೆಲ್ಲರಿಗೂ ತಿಳಿದಿರುತ್ತದೆ. ಗ್ರೀನ್ ಟೀ ಎಲ್ಲಾ ತೂಕನಷ್ಟ ಯೋಜನೆಗಳ ಅವಿಭಾಜ್ಯ ಅಂಗವಾಗಿದೆ. ಎಲೆಗಳನ್ನು ಬಳಸಿ ತಯಾರಿಸಿದ ಕಡಿಮೆ ಸಂಸ್ಕರಿಸಿದ ಚಹಾಗಳಲ್ಲಿ ಇದು ಒಂದಾಗಿದೆ. ಇದು ದಟ್ಟವಾದ ಉತ್ಕರ್ಷಣ ನಿರೋಧಕಗಳಿಂದ ಕೂಡಿದ್ದು, ಈ ಅಂಶವು ನಿಮ್ಮನ್ನು ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಇದರಲ್ಲಿರುವ ರೋಗನಿರೋಧಕ ಶಕ್ತಿಯು ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಕೆಲವು ಜನರು ದಿನಕ್ಕೆ ಒಂದು ಕಪ್ ಇದನ್ನು ಕುಡಿಯಲು ಇಷ್ಟಪಟ್ಟರೆ, ಇನ್ನೂ ಕೆಲವರು ಒಂದು ದಿನದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಕಪ್ ಗ್ರೀನ್ ಟೀ ಕುಡಿಯುತ್ತಾರೆ. ಆದರೆ ಒಬ್ಬ ವ್ಯಕ್ತಿಯು ಉತ್ತಮವಾದ ಆರೋಗ್ಯವನ್ನು ಪಡೆಯಲು ಸೇವಿಸಬಹುದಾದ ಪ್ರಮಾಣ ಎಷ್ಟು?
ಗ್ರೀನ್ ಟೀಯನ್ನು ಹೇಗೆ ತಯಾರಿಸಲಾಗುತ್ತದೆ?
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ ವಿಮರ್ಶೆಯ ಪ್ರಕಾರ, ಹಸಿರು ಚಹಾವನ್ನು ಉತ್ಪಾದಿಸಲು, ಹೊಸದಾಗಿ ಕೊಯ್ಲು ಮಾಡಿದ ಎಲೆಗಳನ್ನು ಹುದುಗುವಿಕೆಯನ್ನು ತಡೆಗಟ್ಟಲು ತಕ್ಷಣವೇ ಆವಿಯಲ್ಲಿ ಬೇಯಿಸಲಾಗುತ್ತದೆ. ಇದು ಒಣ ಮತ್ತು ಸ್ಥಿರ ಉತ್ಪನ್ನವನ್ನು ನೀಡುತ್ತದೆ. ಸ್ತ್ರೀಮಿಂಗ್ ಎಲೆಗಳಲ್ಲಿನ ಬಣ್ಣ ವರ್ಣ ದ್ರವ್ಯಗಳನ್ನು ಒಡೆಯಲು ಕಾರಣವಾದ ಕಿಣ್ವಗಳನ್ನು ಇದು ನಾಶಪಡಿಸುತ್ತದೆ ಮತ್ತು ರೋಲಿಂಗ್, ಒಣಗಿಸುವ ಪ್ರಕ್ರಿಯೆಯೂ ನಡೆಯುವಾಗ ಚಹಾವು ತನ್ನ ಬಣ್ಣವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಗ್ರೀನ್ ಟೀಯನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು?
ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು,ಪಾಲಿಫಿನಾಲ್ ಗಳು ಮತ್ತು ಕೆಫೀನ್ ಇರುತ್ತದೆ. ದಿನಕ್ಕೆ ಮೂರು ಕಪ್ ಗಳಿಗಿಂತ ಹೆಚ್ಚು ಸೇವಿಸುವುದರಿಂದ ನೀವು ರಾತ್ರಿಯಲ್ಲಿ ತಲೆಸುತ್ತು ಹೊಂದಬಹುದು.ಇದರ ಜೊತೆಗೆ ಮೂತ್ರವರ್ಧಕ ಗುಣವನ್ನು ಇದು ಹೊಂದಿದೆ ಮತ್ತು ಇದು ನಿಮ್ಮ ವ್ಯವಸ್ಥೆಯಿಂದ ಅಗತ್ಯ ಅಂಶಗಳನ್ನು ಹೊರಹಾಕುತ್ತದೆ. ಗ್ರೀನ್ ಟೀ ಲಾಭವನ್ನು ಪಡೆಯಲು ಉತ್ತಮ ಸಮಯವೆಂದರೆ ಹಗಲಿನ ವೇಳೆಯಲ್ಲಿ ಅಥವಾ ಸಂಜೆಯ ತಿಂಡಿಯೊಂದಿಗೆ ಸೇವಿಸಬಹುದು.ಆದರೆ ಯಾವುದೇ ಕಾರಣಕ್ಕೂ ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ನಿಮಗೆ ಅಸಿಡಿಟಿ ಆಗುವ ಸಾಧ್ಯತೆ ಹೆಚ್ಚಿದೆ. ಈ ರೀತಿಯ ಸಂದರ್ಭ ಎದುರಾದಾಗ ನೀವು ಮೊದಲು ನೀರನ್ನು ಸೇವಿಸಿ ಅನಂತರದಲ್ಲಿ ಗ್ರೀನ್ ಟೀ ಸೇವಿಸಬಹುದು.ನೀರನ್ನು ಮೊದಲು ಕುಡಿದು ಅನಂತರದಲ್ಲಿ ಗ್ರೀನ್ ಟೀ ಸೇವಿಸುವುದರಿಂದ ನಿಮಗಾಗುವ ಅಸಿಡಿಟಿಯ ಪ್ರಮಾಣ ಕಡಿಮೆಯಾಗುತ್ತದೆ.
ಯಾವಾಗ ಸೇವಿಸಬೇಕು
ನಿಮ್ಮ ಊಟಕ್ಕೆ ಎರಡು ಗಂಟೆಗಳ ಮೊದಲು ಮತ್ತು ಎರಡು ಗಂಟೆಗಳ ನಂತರ ನೀವು ಇದನ್ನು ಸೇವಿಸಬಹುದು. ಊಟದ ನಡುವೆ ಹಸಿರು ಚಹಾವನ್ನು ಕುಡಿಯುವುದರಿಂದ ಪೋಷಕಾಂಶಗಳ ಸೇವನೆಯೂ ಇದರಿಂದ ಕಡಿಮೆಯಾಗುತ್ತದೆ. ನಿಮ್ಮ ಆಹಾರದಿಂದ ಕಬ್ಬಿಣ ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಇದು ತಡೆಯುತ್ತದೆ.ಆದ್ದರಿಂದ ಇದರ ಸೇವನೆಯ ಬಗ್ಗೆ ಹೆಚ್ಚಿನ ಗಮನವಹಿಸಿ ಯಾವ ಸಮಯದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಿಕೊಂಡು ಅನಂತರದಲ್ಲಿ ಸೇರಿಸಿ.ಇದಕ್ಕಾಗಿ ಒಂದು ನಿಗದಿತ ಸಮಯವನ್ನು ಮಾಡಿಕೊಳ್ಳಿ. ಇದರಿಂದಾಗಿ ಒಂದು ದಿನಕ್ಕೆ ಎರಡರಿಂದ ಮೂರು ಕಪ್ ಹಸಿರು ಚಹಾ ಕುಡಿಯಲು ಸೂಚಿಸಲಾಗಿದೆ. ಐ ಬಿ ಎಸ್ ನಿಂದ ಬಳಲುತ್ತಿರುವ ಜನರು ಹಸಿರು ಚಹಾ ಸೇವಿಸುವುದನ್ನು ತಪ್ಪಿಸಬೇಕು. ಅದಕ್ಕಾಗಿ ನಿಮ್ಮ ಸಮಸ್ಯೆಗಳನ್ನು ಒಂದು ಬಾರಿ ನಿಮ್ಮ ವೈದ್ಯರ ಬಳಿ ತಿಳಿಸಿ ಅವರ ಸಲಹೆಯನ್ನು ಪಡೆದುಕೊಂಡು ಸೇವಿಸುವುದು ಉತ್ತಮ. ಏಕೆಂದರೆ ಈ ರೀತಿಯ ಸಂದರ್ಭಗಳಲ್ಲಿ ನೀವು ಎಚ್ಚರಿಕೆಯಿಂದ ಇರುವುದು ಉತ್ತಮ.ಗ್ರೀನ್ ಟೀಯನ್ನು ಸೇವಿಸುವುದರಿಂದ ಶ್ವಾಸಕೋಶ, ಕೊಲೋನ್, ಬಾಯಿಯ ಅನ್ನನಾಳ, ಹೊಟ್ಟೆ, ಸಣ್ಣ ಕರುಳು, ಮುತ್ರ ಪಿಂಡ, ಮೇದೋಜೀರಕ ಗ್ರಂಥಿ ಮತ್ತು ಸಸ್ತನಿ ಗ್ರಂಥಿಗಳ ಕ್ಯಾನ್ಸರ್ನಂತಹ ಅನೇಕ ರೋಗಗಳ ತಡೆಗಟ್ಟುವಿಕೆಯನ್ನು ಇದು ತಡೆಯುತ್ತದೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ತೂಕ ಇಳಿಕೆಯ ಪ್ರಯತ್ನದಲ್ಲಿ ನಿಮ್ಮ ಸಹಕಾರಕ್ಕೆ ಬರುತ್ತದೆ.ಗ್ರೀನ್ ಟೀ ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿದೆ. ಇದು ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ಇದರ ಜೊತೆಗೆ ತೂಕನಷ್ಟ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಇದು ಹೊಂದಿದೆ. ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸ್ಟ್ರೋಕ್ ನಂತಹ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







