ಹೆಚ್ಚಿನ ಮಹಿಳೆಯುರ ತಮ್ಮ ಮುಖಕ್ಕೆ ಕಾಂತಿಯನ್ನು ನೀಡಲು ಸಾಮಾನ್ಯವಾಗಿ ಅರಿಶಿನವನ್ನು ಹಚ್ಚುತ್ತಾರೆ. ಅರಿಶಿನವನ್ನು ಫೇಸ್ಪ್ಯಾಕ್ ರೀತಿ ಹಚ್ಚುವುದರಿಂದ ಮುಖಕ್ಕೆ ವಿಭಿನ್ನ ಹೊಳಪು ಬರುವುದಲ್ಲದೆ, ಮುಖ ಸುಂದರವಾಗಿಯೂ ಕಾಣುತ್ತದೆ. ನಿಮಗಗೆ ಗೊತ್ತಿರಬಹುದು ಮದುವೆ ಶಾಸ್ತ್ರಗಳಲ್ಲೂ ಅರಿಶಿನ ಹಚ್ಚುವ ಶಾಸ್ತ್ರವನ್ನು ಮಾಡುತ್ತಾರೆ.ಕೆಲ ಮಹಿಳೆಯರು ಯಾವುದೇ ಫೇಸ್ಪ್ಯಾಕ್ ಖರೀದಿಸಲು ಸಾಧ್ಯವಾಗಲಿಲ್ಲವೇ, ಅದರ ಬದಲಿಗೆ ಅರಿಶಿನ ಫೇಸ್ಪ್ಯಾಕ್ ತಯಾರಿಸಿ ಹಚ್ಚುತ್ತಾರೆ. ಆದರೆ ಕೆಲವೊಮ್ಮೆ ಅರಿಶಿನ ಹಚ್ಚುವ ಗಡಿಬಿಡಿಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಆ ತಪ್ಪುಗಳು ಯಾವುವು ನೋಡೋಣ.ಹೆಚ್ಚಿನವರು ಯಾವುದೇ ಫೇಸ್ಪ್ಯಾಕ್ ಹಚ್ಚುವಾಗ ಮಾಡುವ ಸಾಮಾನ್ಯ ತಪ್ಪೆಂದರೆ ಫೇಸ್ಪ್ಯಾಕ್ನ್ನು ಬರೀ ಮುಖಕ್ಕೆ ಹಚ್ಚುತ್ತಾರೆ. ಕುತ್ತಿಗೆಗೆ ಹಚ್ಚೋದೇ ಇಲ್ಲ. ನೀವು ಅರಿಶಿನವನ್ನು ಮುಖಕ್ಕೆ ಹಚ್ಚುವಾಗ ಕುತ್ತಿಗೆಗೂ ಹಚ್ಚಬೇಕು ಎನ್ನುವುದುನ್ನು ಮರೆಯದಿರಿ. ಯಾವುದೇ ಭಾಗವನ್ನು ಬಿಡಬೇಡಿ. ಇಲ್ಲವಾದರೆ ಅಲ್ಲಲ್ಲಿ ತೇಪೆ ಹಚ್ಚಿದಂತಾಗಬಹುದು. ಫೇಸ್ಪ್ಯಾಕ್ ಹಚ್ಚಿರುವ ಸ್ಥಳ ಕಾಂತಿಯುತವಾಗಿದ್ದರೆ, ಫೇಸ್ಪ್ಯಾಕ್ ತಗುಲದ ಜಾಗ ಡಲ್ ಆಗಿ ಕಾಣುತ್ತದೆ.ಅನೇಕ ಜನರು ಅರಿಶಿನವನ್ನು ಹಚ್ಚಿದ ನಂತರ ಅದನ್ನು ದೀರ್ಘಕಾಲದವರೆಗೆ ಮುಖದ ಮೇಲೆ ಬಿಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗಬಹುದು. ಅರಿಶಿನವನ್ನು ದೀರ್ಘಕಾಲದವರೆಗೆ ಮುಖದ ಮೇಲೆ ಹಚ್ಚುವುದರಿಂದ ಮುಖದಲ್ಲಿ ಮೊಡವೆಗಳಾಗಬಹುದು.ಕಿರಿಕಿರಿ ಮತ್ತು ಕೆಂಪಾಗಬಹುದು. ಇದಲ್ಲದೆ, ದೀರ್ಘಕಾಲದವರೆಗೆ ಅರಿಶಿನವನ್ನು ಹಚ್ಚುವುದರಿಂದ ಮುಖದ ಮೇಲೆ ಹಳದಿ ಕಲೆಗಳು ಉಂಟಾಗಬಹುದು. ಅರಿಶಿನದ ಫೇಸ್ ಪ್ಯಾಕ್ ಅನ್ನು 15 ರಿಂದ 20 ನಿಮಿಷಗಳಿಗಿಂತ ಹೆಚ್ಚು ಕಾಲ ಇಡಬಾರದು.ಸಾಮಾನ್ಯವಾಗಿ ಜನರು ಮುಖವನ್ನು ಸ್ವಚ್ಛಗೊಳಿಸಲು ಮುಖಕ್ಕೆ ಕಾಂತಿ ನೀಡಲು ಅರಿಶಿನವನ್ನು ಬಳಸುತ್ತಾರೆ. ಆದರೆ ಮುಖಕ್ಕೆ ಅರಿಶಿನವನ್ನು ಹಚ್ಚಿದ ನಂತರ ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಇದರಿಂದಾಗಿ ಅರಿಶಿನವು ಮುಖದ ಮೇಲೆ ಅಲ್ಲಲ್ಲಿ ಉಳಿಯುತ್ತದೆ.ಇದು ನೋಡಲೂ ಚೆನ್ನಾಗಿ ಕಾಣೋದಿಲ್ಲ, ಜೊತೆಗೆ ಮುಖದ ಮೇಲೆ ದದ್ದುಗಳು ಅಥವಾ ಕಿರಿಕಿರಿಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಅರಿಶಿನವನ್ನು ಮುಖಕ್ಕೆ ನಂತರ ಮುಖವನ್ನು ಸರಿಯಾಗಿ ನೀರಿನಿಂದ ತೊಳೆಯಿರಿ. ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ.ಅರಿಶಿನದ ಪ್ಯಾಕ್ ಅನ್ನು ಚರ್ಮಕ್ಕೆ ಹಚ್ಚಿದ ನಂತರ ಅನೇಕ ಜನರು ಸೋಪ್ ಅಥವಾ ಫೇಸ್ ವಾಶ್ ನಿಂದ ಮುಖವನ್ನು ತೊಳೆಯುತ್ತಾರೆ. ಆದರೆ ಫೇಸ್ವಾಶ್ನಿಂದ ಮುಖ ತೊಳೆಯುವುದರಿಂದ ಅದರೊಂದಿಗೆ ಅರಿಶಿನದ ಗುಣಗಳೂ ಹೋಗುತ್ತವೆ. ಹಾಗಾಗಿ ಮುಖಕ್ಕೆ ಅರಿಶಿನ ಹಚ್ಚಿದ ನಂತರ ಮುಖವನ್ನು ಬರೀ ನೀರಿನಲ್ಲಿ ತೊಳೆಯಬೇಕು.ಯಾವುದೇ ಕೆಮಿಕಲ್ ಬಳಸಬಾರದು. ಅರಿಶಿನವನ್ನು ಮುಖಕ್ಕೆ ಹಚ್ಚಿದ ನಂತರ ಮುಂದಿನ 24 ರಿಂದ 48 ಗಂಟೆಗಳವರೆಗೆ ಯಾವುದೇ ಸೋಪ್ ಅಥವಾ ಫೇಸ್ ವಾಶ್ ಅನ್ನು ಮುಖದ ಮೇಲೆ ಬಳಸಬೇಡಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







