ನವದೆಹಲಿ: ಪ್ರತಿಷ್ಠಿತ ಎಚ್‌ಸಿಎಲ್ ಕಂಪನಿಯ ಸಿಇಒ ಸಿ. ವಿಜಯ್ ಕುಮಾರ್ ಇನ್ಫೋಸಿಸ್, ವಿಪ್ರೋದಂತಹ ದೈತ್ಯ ಟೆಕ್ ಕಂಪನಿಗಳ ಸಿಇಒ ಗಳನ್ನೂ ಹಿಂದಿಕ್ಕಿ 2024- 25ನೇ ಸಾಲಿನಲ್ಲಿ ವಾರ್ಷಿಕ ಅತಿ ಹೆಚ್ಚು ವೇತನ ಪಡೆದ ಸಿಇಒ ಆಗಿ ಹೊರಹೊಮ್ಮಿದ್ದಾರೆ. ಇವರು ವರ್ಷಕ್ಕೆ ಬರೋಬ್ಬರಿ 95 ಕೋಟಿ ರು. ವೇತನ ಪಡೆಯುತ್ತಿ ದ್ದಾರೆ. ಅಮೆರಿಕ ಮೂಲದ ವಿಜಯ್ ಅವರು ವಾರ್ಷಿಕ ಮೂಲ ವೇತನ 15.5 ಕೋಟಿ ರು., 13.9 ಕೋಟಿ ರು. ಬೋನಸ್, 56.9 ಕೋಟಿ ರು. ಆರ್‌ಎಸ್‌ಯು ಹಣ ಜೊತೆಗೆ 1.7 ಕೋಟಿ ರು. ಹೆಚ್ಚುವರಿ ಬೋನಸ್ ಸೇರಿದಂತೆ ಒಟ್ಟು 94.6 ಕೋಟಿ ರು. ವರ್ಷಕ್ಕೆ ಪಡೆಯು ತ್ತಿದ್ದಾರೆ ಇನ್ನು ಕಂಪನಿ ಹೇಳಿರುವ ಪ್ರಕಾರ ಅವರ ವೇತನ ಕಳೆದ ವರ್ಷಕ್ಕಿಂತ ಶೇ.7.9 ರಷ್ಟು ಹೆಚ್ಚಳವಾ ಗಿದೆ. ಆ ನಂತರದ ಸ್ಥಾನದಲ್ಲಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ವಿಪ್ರೋ, ಟಿಸಿಎಸ್ ಸಿಇಒಗಳಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



