ಚಿತ್ರದುರ್ಗ: ಪಹಲ್ಗಾಮ್ ಘಟನೆ ನಡೆದ ವೇಳೆ ಒಬ್ಬ ಪೊಲೀಸ್ ಇರಲಿಲ್ಲ ಬಿಜೆಪಿಯವರ ಅಕ್ಕ ತಂಗಿಯರಿಗೆ ಅದೇ ಗತಿ ಆಗಿದ್ದರೆ ಸುಮ್ನೆ ಇರುತ್ತಿದ್ದರ ಎಂದು ಸಚಿವ ಮಧು ಬಂಗಾರಪ್ಪ ಬಿಜೆಪಿಯವರಿಗೆ ಪ್ರಶ್ನೆ ಮಾಡಿದರು.ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ತಾಳವಟ್ಟಿ ಗ್ರಾಮ ದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿ ಸಾವು ಆದ್ಮೇಲೆ ಬಿಜೆಪಿಯವರು ಸಂಭ್ರಮಿಸುತ್ತಾರೆ ಇನ್ಮೇಲೆ ಹಿಂದೆ ಮುಂದೆ ನೋಡದೆ ನಾವು ಬಿಜೆಪಿಯವರನ್ನು ಖಂಡನೆ ಮಾಡಬೇಕು ಬಿಜೆಪಿಯವರಿಗೆ ಸಾವಲ್ಲಿಸಂಭ್ರಮ ಮಾಡೋದು ಸಹಜವಾಗಿದೆ. ಇದೆಲ್ಲಾ ನೀಚಬುದ್ಧಿ ಎಂದು ಬಿಜೆಪಿ ವಿರುದ್ದ ಕಿಡಿ ಕಾರಿದರು.ಇದೆ ವೇಳೆ ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಆ ಬಗ್ಗೆ ನಾನು ಪ್ರಯಿಕ್ರಿಯಿಸಲ್ಲ ಕಾನೂನು ಬೇಗ ತೀರ್ಮಾನ ಮಾಡಿ ಪ್ರಕರಣಇತ್ಯರ್ಥ ಆಗಲಿ ಧರ್ಮಸ್ಥಳ, ವಿರೇಂದ್ರ ಹೆಗ್ಗಡೆ ಅವರ ಮೇಲೆ ಗೌರವವಿದೆ ಎಂದರು. ಇನ್ನು ಬಿಜೆಪಿಯಿಂದ ಧರ್ಮಸ್ಥಳಕ್ಕೆಪಾದಯಾತ್ರೆ ವಿಚಾರಕ್ಕೆ ಕಿಡಿ ಕಾರಿದ ಅವರು, ಪಹಲ್ಗಾಮ್ ದಾಳಿಯಿಂದಾಗಿ ಕೆಲ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಯಾಕೆ ಅನಥರಾದರು ಎಂದುಬಿಜೆಪಿಯವರು ವಿಮರ್ಶೆ ಮಾಡಲಿ. ಸತ್ತ ಮೇಲೆ ಸಿಂಧೂರ ಎಂದು ಹೆಸರಿಟ್ಟು ಎಲ್ಲಾ ಸಾವು ಆದ್ಮೇಲೆ ಬಂದು ಭಾಷಣ ಮಾಡ್ತಾರೆ. ಬಿಜೆಪಿಗೆ ಮಾನ ಮರ್ಯಾದೆ ಇಲ್ಲ ಎಲ್ಲಾ ಆದ ಬಳಿಕ ಬಿಜೆಪಿಯವರು ಭಾಷಣ ಮಾಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಯಾಕೆಪ್ರಕರಣ ನಡೆಯಿತೆಂದು ಯಾವನಾದ್ರೂ ಬಿಜೆಪಿಯವನು ಮಾತಾಡಿದ್ದಾನಾ ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇದೆಯಾ ಎಂದುವಾಗ್ದಾಳಿ ನಡೆಸಿದರು.
ಇದೇ ವೇಳೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಬಿಜೆಪಿಯಿಂದ ಧರ್ಮಸ್ಥಳಕ್ಕೆ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾರು ಅಥವಾ ಕಾಲ್ನಡಿಗೆಯಲ್ಲಾದರೂ ಹೋಗಲಿಧರ್ಮಸ್ಥಳದಲ್ಲಿ ಇರೋದು ದೇವರು, ಕೈಮುಗಿದು ಬರುತ್ತಾರೆ ಬಿಜೆಪಿ ಅವರಿಗೂ ದೇವರು ಒಳ್ಳೆಯದು ಮಾಡ್ತಾನೆ ಧರ್ಮಸ್ಥಳಪ್ರಕರಣ ಬಗ್ಗೆ ಗೃಹ ಸಚಿವರು ಸೋಮವಾರ ಉತ್ತರಿಸುತ್ತಾರೆ ಅಂದು ಎಲ್ಲದಕ್ಕೂ ತೆರೆ ಬೀಳುತ್ತೆ ಎಂದರು. ಇನ್ನು ಸಹಕಾರ ಖಾತೆಗೆ ಲಾಬಿ ಮಾಡುತ್ತಿದ್ದೀರಾ ಎಂದು ಕೇಳಿದಾಗ ನನಗೆ ಸಹಕಾರ ಖಾತೆ ಜೊತೆಗೆ ಯಾವ ಖಾತೆಯನ್ನು ಬಯಸುವುದಿಲ್ಲ, ಯಾವುದೇ ಖಾತೆ ಕೊಟ್ಟರೆ ನಿಭಾಯಿಸುತ್ತೇನೆ, ಇಲ್ಲದಿದ್ದರೆ ಸುಮ್ಮನಿರುತ್ತೇವೆ ಹೈಕಮಾಂಡ್ಮುಂದೆ ಯಾರೂ ದೊಡ್ಡವರಿಲ್ಲ ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







