ವಿಶ್ವಕರ್ಮ ಎಂಬ ಪದ ಒಂದು ಹೆಸರಲ್ಲ,ಒಂದು ದೇವರ ಹೆಸರಲ್ಲ ,ಒಂದು ಶಕ್ತಿಯಲ್ಲ , ಒಂದು ಸಮುದಾಯದ ಹೆಸರಲ್ಲ,ಒಂದು ಶಕ್ತಿಯ ಹೆಸರಲ್ಲ..ವಿಶ್ವ ಎಂದರೆ ಬ್ರಹ್ಮಾಂಡ, ಕರ್ಮ ಎಂದರೆ ಸೃಷ್ಟಿ.. ಬ್ರಹ್ಮಾಂಡ ಸೃಷ್ಟಿ ಯ ಹೆಸರು.ಬ್ರಹ್ಮಾಂಡದಲ್ಲಿ ಕಾಣುವ ಗ್ರಹಗಳು ,ನಕ್ಷತ್ರಗಳು,
ಉಲ್ಜೆಗಳು ,ಪಶು,ಪಕ್ಷಿ,ಕ್ರಮಿ,ಕೀಟಗಳು ಮತ್ತು ಸಮಸ್ತ ಎಲ್ಲಾ ಜೀವರಾಶಿಗಳು,ಗಿಡ,ಮರ,ಬಳ್ಳಿ,ಹೂಗಳು,ನದಿ,ಹಳ್ಳ,ಕೊಳ್ಳ ಗಳು,ಸಾಗರ ,ಸಮುದ್ರಗಳು ಎಲ್ಲವೂ ಯಾವದೋ ನಿಯಂತ್ರಣಕ್ಕೆ ಒಳಪಟ್ಟಂತೆ ವರ್ತಿಸುತ್ತವೆ.ಹಾಗಾದರೆ ಆ ನಿಯಂತ್ರಣ ಮಾಡುವ ಅಗೋಚರ ಕೈಗಳು ಯಾವುವು, ಅದನ್ನೇ ವಿಜ್ಞಾನ ಅಗೋಚರ ಶಕ್ತಿ ನಿಯಂತ್ರಿಸುತ್ತದೆ ಎನ್ನುತ್ತದೆ.ಆದರೆ ಶಕ್ತಿ ಪ್ರಭಾವಬೀರುತ್ತದೆ ಹೊರತುನಿಯಂತ್ರಿಸುವುದಿಲ್ಲ. ಅದಕ್ಜೆ ನಿಯಂತ್ರಿಸುವ ಅವಯವಗಳಾದರೂ ಇರಬೇಕಲ್ಲ.ತಾನೇ ತಾನಾಗಿ ವಿಶ್ವರಚನೆಯಾಗಲೂ ಸಾಧ್ಯವಿಲ್ಲ ಅದರ ಹಿಂದೆ ಅಗೋಚರ, ಅಪ್ರಮಾಣ, ಪ್ರಣವ ಸ್ವರೂಪನಾದ ಭಗವಂತನಿದ್ದಾನೇ ಅವನನ್ನೇ ವಿಶ್ವಕರ್ಮ ಎಂದು ವೇದಕಾಲೀನ ಪೂರ್ವದ ಜನರು ಅಭಿಪ್ರಾಯ ಪಟ್ಟಿದ್ದರು, ಆ ಅಭಿಪ್ರಾಯವನ್ನೂ ಭಾರತದ ಸನಾತನ ಧರ್ಮ,ಸಂಸ್ಕೃತಿ,ನಾಗರಿಕತೆ, ಮತ್ತು ಭವ್ಯ ಪರಂಪರೆಗಳಿಗೆ ಮೂಲ ವೇದಗಳು. ಈ ಎಲ್ಲಾ ವೇದಗಳು ವಿಶ್ವಕರ್ಮ ನ ಕುರಿತೇ ಹೇಳುತ್ತವೆ.
ವೇದಗಳಿಗೆ ಭಾಷ್ಯ ಬರೆದ ಸಾಯಣಾಚಾರ್ಯರು ವಿಶ್ವಕರ್ಮ ನ ಕುರಿತು ಹೀಗೆ ಹೇಳುತ್ತಾರೆ.
ವಿಶ್ವ ವಿಶಯಾಣಿ ಸೃಷ್ಟಿ ಸ್ಥಿತಿ ಸಂಹಾರ ರೂಪಾಣಿ ಯಸ್ಸಾಸೌ ವಿಶ್ವಕರ್ಮ
ವಿಶ್ವ ಸೃಷ್ಟಿ ಯ ಮೂಲ ಪುರುಷ ವಿಶ್ವಕರ್ಮ ಎಂದು ಡಿ.ವಿ.ಜಿ.ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ವಿವರಿಸಿದ್ದಾರೆ. ಉದಕಂ ಮೇಣ್ ಅದರಿನ್ ಆದ ಪೃಥ್ವಿಯ ರಸದಿಂಇದನೆಲ್ಲವಾಗಿಸಿದನಾ ವಿಶ್ವಕರ್ಮಂ ರೂಪಗಳೆನಿತೊ ಕೊಡುವನಿದಕಾ ತ್ವಷ್ಟ್ರ ಆ ಪುರುಷ ನಿಂದುದಿಸಿತೀ ವಿಶ್ವ ಮೊದಲೋಳ್
ಈ ಸಮಸ್ತ ಸೃಷ್ಟಿ ಯ ಮೂಲ ಪುರುಷ ವಿಶ್ವಕರ್ಮ ಎಂದು ಅಭಿಪ್ರಾಯ ಪಡುತ್ತಾರೆ.
ಡಾ.ಎಸ್ ರಾಧಾಕೃಷ್ಣನ್ ಅವರು ತಮ್ಮ Indian philosophy ಗ್ರಂಥದಲ್ಲಿ VISHWAKARMAN THE FIRST BORN OF THE UNIVERSE..THE CREATER AND MAKER OF THE WORLD.
ವಿಶ್ವಕರ್ಮ ಪರಮಾತ್ಮನಿಗೆ ಪಂಚಮುಖಗಳು ,ಆ ಪಂಚ ಮುಖಗಳಿಂದ ಮನು,ಮಯ,ತ್ವಷ್ಟ್ರ, ಶಿಲ್ಪಿ, ವಿಶ್ವಜ್ಞ ಎಂಬ. ಮಂಚ ಬ್ರಹ್ಮರು ಆವಿರ್ಭವಿಸುತ್ತಾರೆ. .ಕ್ರಮವಾಗಿ ಶಿವ,ವಿಷ್ಣು,ಬ್ರಹ್ಮ ಇಂದ್ರ ಮತ್ತು ಸೂರ್ಯ ಎಂಬ ನಾಮ ಸಂಕೇತಗಳಾಗುತ್ತವೆ.ಇವರೆಲ್ಲರ ಶಕ್ತಿಗಳನ್ನೆಲ್ಲಾ ವಿಶ್ವಕರ್ಮನು ನಿಯಂತ್ರಿಸುತ್ತಾನೆ.ಎಂದು ಶ್ರೀ ವೇಮನ ಯೋಗಿಗಳು ಹೇಳುತ್ತಾರೆ.ಇವರಿಂದ ಸಾನಗ ,ಸನಾತನ,ಅಹಬೂನ,ಪ್ರತ್ನ್ಯ ಮತ್ತು ಸುಪರ್ಣ ಎಂಬ ಗೋತ್ರರ್ಷಿಗಳು ಹುಟ್ಟುತ್ತಾರೆ.ಈ ಗೋತ್ರರ್ಷಿಗಳ ವಂಶಿಜರು ಸೃಷ್ಟಿ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವರ ವಂಶಸ್ಥರು ಪಂಚವೃತ್ತಿ ಮಾಡುತ್ತಿರುವುದರಿಂದ ಅವರಿಗೆ ಪಂಚಾಳರು,ವಿಶ್ವಕರ್ಮರೆಂದು ಕರೆಯಲಾಗುತ್ತಿದೆ.ಭಾರತದ ಭವ್ಯ ಸಂಸ್ಕೃತಿಗೆ,ಭವ್ಯ ಕಲೆಗಳಿಗೆ, ಇತಿಹಾಸಕ್ಕೆ ಸಾಕ್ಷಿಯಾಗಿ ನಿಲ್ಲುವ ವಿಶ್ವಿಖ್ಯಾತಶಿಲ್ಪಕಲಾಮಂದಿರಗಳು.ಅಜಂತ,ಎಲ್ಲೋರ,ಬದಾಮಿ,ಪಟ್ಟದಕಲ್ಲು,ಬೇಲೂರು ,ಹಳೇಬೀಡು ಗಳಲ್ಲೆಲ್ಲಾ ಶಿಲ್ಪಕಲಾ ಲೋಕವೇ ತೆರೆದುಕೊಳ್ಳುತ್ತದೆ.ಭಾರತ ಪ್ರವಾಸ ಕೈ ಗೊಳ್ಳುವ ಪ್ರತಿಯೊಬ್ಬ ವಿದೇಶಿ ವಿಶ್ವಕರ್ಮರ ಕೌಶಲ್ಯಕಂಡು ಬೆರಗಾಗಿದ್ದಾರೆ.ವಿಜಯ ನಗರ ಸಾಮ್ರಾಜ್ಯ ಅಳಿದ ಉಳಿದ ಅವಶೇಷಗಳು ಅವು ಅದ್ಭುತ ವಾದ ಶಿಲ್ಪಗಳೇ ಆಗಿವೆ.ಹುಟ್ಟಿನಿಂದ ಚಟ್ಟದ ವರೆಗೂ ವಿಶ್ವಕರ್ಮ ಜನಾಂಗ ಅನಿವಾರ್ಯ ಎಂಬಂತೆ ಬಾಳಿಬದುಕುತ್ತಿದ್ದಾರೆ.ರೈತನ ವ್ಯವಸಾಯದ ಸಲಕರಣೆ ಗಳಿಂದ ಪ್ರಾರಂಬಿಸಿ ಸೌಂದರ್ಯ ಸಾಧನಗಳಾದ ಸ್ವರ್ಣ ಆಭರಣಗಳ ವರೆಗೂ ವಿಶ್ವಕರ್ಮರು ಅನಿವಾರ್ಯ ವಾಗಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಜನನುರಾಗಿಯಾಗಿ ಬಾಳುತಿದ್ದಾರೆ.ಇಂದು ವೈಜ್ಞಾನಿಕ ಆವಿಷ್ಕಾರ ದಿಂದಾಗಿ ಅವರ ಯಾವ ಕೆಲಸ ಕಾರ್ಯಗಳು ನಡೆಯದೇ ಜೀವನ ನಡೆಸುವುದೇ ದುಸ್ತರ ವಾಗಿದೆ.ಇತಿಹಾಸದುದ್ದಕ್ಕೂ ವಿಶ್ವಕರ್ಮ ತನ್ನ ಸೇವೆಯನ್ನೇ ಜನಾರ್ಧನನ ಸೇವೆ ಎಂದೇ ಬದುಕಿ ಇಂದು ಬೀದಿಗೆ ಬೀಳುವ ಹಂತ ತಲುಪಿದ್ದಾನೆ.ವಿಶ್ವಕರ್ಮ ಜಯಂತಿ ಯ ಈ ಸಂಧರ್ಭದಲ್ಲಿ ದೇಶದ ತುಂಬೆಲ್ಲಾ ತುಂಬಿದ ವಿಶ್ವಕರ್ಮ ಜನಾಂಗ ವನ್ನ ಗುರುತಿಸಿ ಗೌರವಿಸುವ ಮತ್ತು ವಿಶ್ವಕರ್ಮ ರೊಂದಿಗೆ ನಾವೆಲ್ಲಾ ಇದ್ದೇವೆ ದೃತಿಗೆಡಬೇಡಿ ಎಂಬ ಬೆನ್ನುತಟ್ಟುವ ನುಡಿಯ ದಿನ ಇದಾಗಿದೆ.ನಶಿಸಿ ಹೋಗುತ್ತಿರುವ ಕೌಶಲ್ಯ ಉಳಿಯಬೇಕಿದೆ…ವಿಶ್ವಕರ್ಮ ರು ರಾಜಕೀಯ ಮಾಡುವವರಲ್ಲ,ವಿಶ್ವಕರ್ಮರು ಬೆಂಕಿಹಚ್ಚುವವರಲ್ಲ,ಭೇದ ಮಾಡುವವರಲ್ಲ ,ಜನರಲ್ಲಿ ಒಂದಾಗಿ ಬೆರೆತು ಬಾಳುವವರು..ಇಂಥಾ ಅಮೋಘ ಇತಿಹಾಸವುಳ್ಳ ವಿಶ್ವಕರ್ಮ ಪೂಜಾ ಮಹೋತ್ಸವ ಎಲ್ಲರಿಗೂ ಒಳಿತನ್ನು ಮಾಡಲಿ.ಸರ್ವೇ ಜನಾಃ ಸುಖೀನೋ ಭವಂತು..
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







